ಜಲಾವೃತವಾದ ಹಳ್ಳದಲ್ಲಿ ಗೊಬ್ಬರ ತುಂಬಿದ ಟ್ರ್ಯಾಕ್ಟರ್ ಓಡಿಸಿ ಭಂಡ ರೈತನ ಸಾಹಸ

ಜಲಾವೃತವಾದ ಹಳ್ಳದಲ್ಲಿ ಗೊಬ್ಬರ ತುಂಬಿದ ಟ್ರ್ಯಾಕ್ಟರ್ ಓಡಿಸಿ ಭಂಡ ರೈತನ ಸಾಹಸ

ಹುಬ್ಬಳ್ಳಿ: ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿದೆ. ಈ ಹಿನ್ನೆಲೆ ಕುಂದಗೋಳ ಭಾಗದಲ್ಲಿ ಹಳ್ಳವೊಂದು ಮಳೆಯ ನೀರಿನಿಂದ ತುಂಬಿ ಜಲಾವೃತ್ತವಾಗಿದ್ದು, ರೈತರೊಬ್ಬರು ಇದನ್ನ ದಾಟುವ ಸಾಹಸ ಮಾಡಿ ಸುದ್ದಿಯಾಗಿದ್ದಾರೆ.

ಭಂಡ ರೈತರೊಬ್ಬರು 2.5 ಟನ್ ಗೊಬ್ಬರ ತುಂಬಿದ್ದ ಟ್ರ್ಯಾಕ್ಟರ್​ ಅನ್ನು ಈ ತುಂಬಿದ ಹಳ್ಳದಲ್ಲೇ ಚಲಾಯಿಸಿಕೊಂಡು ಬಂದಿದ್ದಾರೆ. ಸ್ಥಳೀಯರು ರೈತನ ಈ ಹುಚ್ಚಾಟಕ್ಕೆ ವಿರೋಧ ವ್ಯಕ್ತಪಡಿಸಿದ್ರು. ಆದ್ರೆ ಎದೆವರೆಗೂ ನೀರಿದ್ದರೂ ಸಹ, ಗೊಬ್ಬರದ ತೂಕಕ್ಕೆ ಟ್ರ್ಯಾಕ್ಟರ್ ಕೊಚ್ಚಿ ಹೋಗಲ್ಲ ಎಂಬ ಧೈರ್ಯದ ಮೇಲೆ ನೀರು ತುಂಬಿದ್ದ ಹಳ್ಳದಲ್ಲೇ ರೈತ ಟ್ರ್ಯಾಕ್ಟರ್ ಓಡಿಸಿದ್ದಾರೆ.

The post ಜಲಾವೃತವಾದ ಹಳ್ಳದಲ್ಲಿ ಗೊಬ್ಬರ ತುಂಬಿದ ಟ್ರ್ಯಾಕ್ಟರ್ ಓಡಿಸಿ ಭಂಡ ರೈತನ ಸಾಹಸ appeared first on News First Kannada.

Source: newsfirstlive.com

Source link