ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಶ್ಮಿಕಾ ಮಂದಣ್ಣ ತಮ್ಮ ಮುದ್ದಾದ ಶ್ವಾನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಇವಳು ನನ್ನ ಹೃದಯವನ್ನು 0.3 ಸೆಕೆಂಡಿನಲ್ಲಿ ಕದ್ದಿದ್ದಾಳೆ ಎಂದು ಹೇಳಿಕೊಂಡಿದ್ದಾರೆ.

ಬಾಲಿವುಡ್ ಸಿನಿಮಾದ ಚಿತ್ರೀಕರಣಕ್ಕೆಂದು ಕೆಲವು ದಿನಗಳ ಹಿಂದೆ ಮುಂಬೈಗೆ ಹಾರಿದ್ದ ರಶ್ಮಿಕಾ ಮಂದಣ್ಣ ಬಳಿಕ ಲಾಕ್‍ಡೌನ್‍ನಿಂದ ಮನೆಗೆ ಹಿಂತಿರುಗಿದ್ದಾರೆ. ಸದ್ಯ ಲಾಕ್‍ಡೌನ್‍ನಿಂದಾಗಿ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿರುವ ರಶ್ಮಿಕಾ ತಮ್ಮ ಮುದ್ದಾದ ಶ್ವಾನದ ಜೊತೆಗೆ ಟೈಂ ಪಾಸ್ ಮಾಡುತ್ತಿದ್ದಾರೆ.

ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ರಶ್ಮಿಕಾ ಶ್ವಾನದ ಜೊತೆಗೆ ಕ್ಲಿಕ್ಕಿಸಿಕೊಂಡಿರುವ ಕೆಲವೊಂದು ಫೋಟೋವನ್ನು ಹಂಚಿಕೊಂಡಿದ್ದು, ಹೊರ ಜಗತ್ತಿನ ಎಲ್ಲಾ ಗದ್ದಲಗಳ ಮಧ್ಯೆ ನಾನು ನನ್ನ ಖುಷಿಯನ್ನು ಕಂಡುಕೊಂಡಿದ್ದೇನೆ. ಇದು ನನ್ನನ್ನು ಇಡೀ ಸಮಯ ಬಹಳ ಖುಷಿಯಿಂದ ಇರಿಸುತ್ತದೆ. ನಿಮ್ಮೆಲ್ಲರಿಗೂ ನನ್ನ ಪುಟ್ಟ ಔರಾವನ್ನು ಪರಿಚಯ ಮಾಡಿಕೊಡುತ್ತಿದ್ದೇನೆ. ನೀವು 3 ಸೆಕೆಂಡಿನಲ್ಲಿ ಪ್ರೀತಿಯಲ್ಲಿ ಬೀಳಬಹುದು. ಆದರೆ ಅವಳು ನನ್ನ ಹೃದಯವನ್ನು 0.3 ಸೆಕೆಂಡಿನಲ್ಲಿ ಕದ್ದಳು ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

ಸ್ಯಾಂಡಲ್‍ವುಡ್ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸಿನಿ ಜರ್ನಿ ಆರಂಭಿಸಿದ ರಶ್ಮಿಕಾ ಟಾಲಿವುಡ್ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದು, ಸದ್ಯ ಬಹುಬೇಡಿಕೆಯ ನಟಿಯಾಗಿದ್ದಾರೆ. ಟಾಲಿವುಡ್, ಕಾಲಿವುಡ್ ಅಷ್ಟೇ ಅಲ್ಲದೇ ಇದೀಗ ಬಾಲಿವುಡ್‍ನತ್ತ ಮುಖಮಾಡಿರುವ ರಶ್ಮಿಕಾ ನಟ ಸಿದ್ದಾರ್ಥ್ ಮಲ್ಹೋತ್ರಾಗೆ ನಾಯಕಿಯಾಗಿ ಮಿಷನ್ ಮಜ್ನು ಹಾಗೂ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆ ಗುಡ್ ಬೈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

The post ಜಸ್ಟ್ 3 ಸೆಕೆಂಡ್‍ನಲ್ಲಿ ಪ್ರೀತಿಗೆ ಬಿದ್ದೆ – ‘ಲವ್ವರ್’ ಬಗ್ಗೆ ರಶ್ಮಿಕಾ ಮಾತು appeared first on Public TV.

Source: publictv.in

Source link