ಜಹೀರ್, ನೆಹ್ರಾ ನಂತರದ ಸ್ಥಾನ ತುಂಬ್ತಾರಾ ಟೀಂ ಇಂಡಿಯಾದ ಈ ಆಟಗಾರ

ಜಹೀರ್, ನೆಹ್ರಾ ನಂತರದ ಸ್ಥಾನ ತುಂಬ್ತಾರಾ ಟೀಂ ಇಂಡಿಯಾದ ಈ ಆಟಗಾರ

ಕಳೆದ ಒಂದು ದಶಕದಿಂದ ಟೀಮ್​ ಇಂಡಿಯಾಗೆ ಸಮಸ್ಯೆಯೊಂದು ಎದುರಾಗಿದೆ. ಆ ಸಮಸ್ಯೆಗೆ ಪರಿಹಾರವೆಂದು ಬಂದ ಆಟಗಾರರು, ತಂಡದಿಂದ ಬಹುದೂರ ಹೋಗಿದ್ದಾರೆ. ಇನ್ನು ಜಹೀರ್​, ನೆಹ್ರಾ ಸ್ಥಾನ ತುಂಬೋಕೆ ಈತನೇ ಸೂಕ್ತ ಎಂದವರು ಕೂಡ, ಇಂಜುರಿಗೆ ಒಳಗಾದ. ಆದರೀಗ ಲಂಕಾ ಪ್ರವಾಸದಲ್ಲಿ ಮತ್ತೊಂದು ಭರವಸೆ ಹುಟ್ಟಿಕೊಂಡಿದೆ. ಈತನಿಂದಲಾದರೂ ಸಿಗುತ್ತಾ ಪರಿಹಾರ..?

ವಿಶ್ವ ಕ್ರಿಕೆಟ್​​​ ತಂಡಗಳ ಪೈಕಿ ಟೀಮ್ ಇಂಡಿಯಾ ಬೌಲಿಂಗ್​​ ವಿಭಾಗ, ಸಖತ್​ ಸ್ಟ್ರಾಂಗ್ ಆಗಿದೆ​. ಜಗತ್ತಿನ ಯಾವುದೇ ತಂಡದ ಬ್ಯಾಟ್ಸ್​ಮನ್​ ಕೂಡ ಭಾರತ ಬೌಲರ್​​ಗಳ ಎದುರು ಆಡೋಕೆ ಹೆದರುತ್ತಾರೆ. ಅದರಲ್ಲೂ ಪ್ರಸ್ತುತ ಕಾಲಮಾನದಲ್ಲಿ ತಂಡದಲ್ಲಿ ಕಾಣಿಸಿಕೊಳ್ತಿರುವ ಬೌಲರ್​​​ಗಳನ್ನ ಕಂಡರೆ, ಬ್ಯಾಟ್ಸ್​​ಮನ್​​ಗಳೆಲ್ಲಾ ನಡಗೋದು ಗ್ಯಾರಂಟಿ. ಅದಕ್ಕೆ ತಾನೇ, ಟೀಮ್​ ಇಂಡಿಯಾ ಬೌಲಿಂಗ್​ ವಿಭಾಗ ಖಡಕ್​ ಆಗಿದೆ ಅಂತ ಹೇಳ್ತಿರೋದು.!

ಹಿರಿಯ ವೇಗಿ ಇಶಾಂತ್​ ಶರ್ಮಾ, ಮೊಹಮ್ಮದ್​ ಶಮಿ ಮತ್ತು ಜಸ್​ಪ್ರಿತ್​ ಬುಮ್ರಾ, ಸದ್ಯ ಟೀಮ್​ ಇಂಡಿಯಾದ ಟ್ರಂಪ್​ ಕಾರ್ಡ್​ ಬೌಲರ್ಸ್​. ಜೊತೆಗೆ ಮ್ಯಾಚ್​ ವಿನ್ನರ್ಸ್​ ಕೂಡ ಆಗಿದ್ದಾರೆ. ದೇಶ-ವಿದೇಶಗಳಲ್ಲಿ ಯಾವುದೇ ಪಿಚ್​​ ಇರಲಿ, ಅದಕ್ಕೆ ತಕ್ಕಂತೆ ಹೊಂದಿಕೊಂಡು ವಿಕೆಟ್​ ಕಬಳಿಸೋದ್ರಲ್ಲಿ ನಿಸ್ಸೀಮರು. ವಿಶ್ವ ಶ್ರೇಷ್ಠ ಬ್ಯಾಟ್ಸ್​ಮನ್​ ಆದರೂ, ಅವರನ್ನ ಬುಟ್ಟಿಗೆ ಹಾಕಿಕೊಳ್ಳೋದ್ರಲ್ಲಿ ಪರಿಣಿತರು. ಇದೆಲ್ಲದರ ಹೊರತಾಗಿಯೂ ಟೀಮ್​ ಇಂಡಿಯಾ ವೇಗದ ಬೌಲಿಂಗ್​ ವಿಭಾಗಕ್ಕೆ, 10 ವರ್ಷಗಳಿಂದ ಕೊರತೆಯೊಂದು ಕಾಡ್ತಿದೆ.

ಜಹೀರ್​​, ನೆಹ್ರಾ ನಂತ್ರ ಭಾರತಕ್ಕೆ ಕಾಡ್ತಿದೆ ಎಡಗೈ ವೇಗಿ ಕೊರತೆ.!

ಯೆಸ್​​​​..! ಸದ್ಯ ಟೀಮ್​ ಇಂಡಿಯಾಗೆ ಲೆಫ್ಟ್​ ಆರ್ಮ್​ ಪೇಸರ್ಸ್​ ಕೊರತೆ ಕಾಡ್ತಿದೆ. ಈ ಹಿಂದೆ ಎಡಗೈ ವೇಗಿಗಳಾಗಿ ಜಹೀರ್​ ಖಾನ್​, ಆಶಿಶ್​​​ ನೆಹ್ರಾ, ಆರ್​.ಪಿ.ಸಿಂಗ್ ತಂಡದಲ್ಲಿ​ ಕಾಣಿಸಿಕೊಂಡಿದ್ರು. ಟೀಮ್​​ ಇಂಡಿಯಾದಲ್ಲಿ ಗಟ್ಟಿಯಾಗಿ ಬೇರೂರಿದ್ದ ಈ ಎಡಗೈ ಬೌಲರ್​​ಗಳ ಭಯಾನಕ ಸ್ಪೆಲ್,​​ ಈಗಿನವರಿಗಿಂತಲೂ ಹೆಚ್ಚಾಗಿತ್ತು. ಸೋಲುವ ಹಂತದಲ್ಲಿದ್ದ ಎಷ್ಟೋ ಪಂದ್ಯಗಳನ್ನ ಗೆಲ್ಲಿಸಿಕೊಟ್ಟರು ಈ ಆಪತ್ಬಾಂಧವರು.. ಇವರ ನಂತರ ತಂಡದಲ್ಲಿ ಅಬ್ಬರಿಸಿದ ಎಡಗೈ ವೇಗಿಗಳು ಯಾರು ಅನ್ನೋದಕ್ಕೆ, ಉತ್ತರವೇ ಇಲ್ಲ. ಇವರ ನಂತರ ಹಲವು ಲೆಫ್ಟ್​ ಆರ್ಮ್​ ಬೌಲರ್ಸ್​ ತಂಡಕ್ಕೆ ಎಂಟ್ರಿ ಕೊಟ್ಟರಾದ್ರು, ನೆಲೆಯೂರಿದವರು ಯಾರೂ ಇಲ್ಲ.!!

ಬಂದಷ್ಟೇ ವೇಗವಾಗಿ ಹೊರಬಂದ ಖಲೀಲ್​​, ಉನಾದ್ಕತ್​, ಅರವಿಂದ್​.!!

ಜಹೀರ್​, ನೆಹ್ರಾ​, ಆರ್​.ಪಿ.ಸಿಂಗ್​ ನಂತರ ಅಂದರೆ, 2010ರ ಬಳಿಕ ಜಯದೇವ್​ ಉನಾದ್ಕತ್​, ಬರೀದರ್​ ಸ್ರಾನ್, ಶ್ರೀನಾಥ್​ ಅರವಿಂದ್, ಖಲೀಲ್ ಅಹ್ಮದ್ ಮತ್ತು ನಟರಾಜನ್​ ತಂಡ ಸೇರಿಕೊಂಡಿದ್ರು. ಇವರೆಲ್ಲರೂ ದೇಶಿ ಕ್ರಿಕೆಟ್​​ನಲ್ಲಿ ಅಬ್ಬರಿಸಿದ ಅಪ್ಪಟ ಪ್ರತಿಭೆಗಳು. ಹಾಗೆಯೇ ಐಪಿಎಲ್​​ನಲ್ಲೂ ಮಿಂಚಿನ ಪ್ರದರ್ಶನ ನೀಡಿದ್ರು. ಹಾಗಾಗಿಯೇ ಟೀಮ್​ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಂಡು, ಫ್ಯೂಚರ್​​ ಸ್ಟಾರ್ಸ್​ ಎಂದೇ ಗುರುತಿಸಿಕೊಂಡಿದ್ರು. ಆದರೆ ಈ ಆಟಗಾರರು ನಿರೀಕ್ಷೆಯನ್ನ ಉಳಿಸಿಕೊಳ್ಳುವಲ್ಲಿ, ಫೇಲ್​ ಆದ್ರು. ಸಿಕ್ಕ ಅವಕಾಶವನ್ನ ಕೈ ಚೆಲ್ಲಿದ ಈ ಎಡಗೈ ಬೌಲರ್ಸ್​​, ರಾಷ್ಟ್ರೀಯ ತಂಡದಿಂದ ದೂರ ಉಳಿದ್ರು.
2010ರ ಬಳಿಕ ಕಣಕ್ಕಿಳಿದ ಎಡಗೈ ಬೌಲರ್​​​ಗಳು

ಆಟಗಾರ       ಪಂದ್ಯ      ವಿಕೆಟ್​
ಖಲೀಲ್​​        25            28
ಉನಾದ್ಕತ್​​   17             22
ಸ್ರಾನ್​​          08             13
ಅರವಿಂದ್  ​ 01              01

ಇಂಜುರಿಗೆ ಒಳಗಾದ ನಟರಾಜನ್​​​ಗೆ ಇನ್ನು ಸಿಕ್ಕಿಲ್ಲ ಪರಿಹಾರ..!

ಟೀಮ್ ಇಂಡಿಯಾಕ್ಕೆ ಎಂಟ್ರಿ ಕೊಡೋದಕ್ಕೂ ಮುನ್ನವೇ, ಸಖತ್​ ಸದ್ದು ಮಾಡಿದ್ದು ಎಡಗೈ ಬೌಲರ್ ಟಿ.ನಟರಾಜನ್​..! ಸನ್​ರೈಸರ್ಸ್ ಹೈದ್ರಾಬಾದ್​​​ ತಂಡದಲ್ಲಿ ಮಿಂಚಿನ ಪ್ರದರ್ಶನ ತೋರಿದ್ದ ನಟ್ಟು, ಆಸಿಸ್​​​ ಸರಣಿಗೆ ಆಯ್ಕೆಯಾದ್ರು. ಸರಣಿಯಲ್ಲಿ ನೀಡಿದ ಪ್ರದರ್ಶನದಿಂದ, ಎಡಗೈ ವೇಗಿಗಳ ಕೊರತೆಗೆ ಸಿಕ್ಕ ಪರಿಹಾರ ಎಂದೇ ಭಾವಿಸಲಾಗಿತ್ತು. ಆದ್ರೆ ನಟ್ಟು ಬೌಲಿಂಗ್​ನಲ್ಲಿ ಪಾಸ್​ ಆದ್ರೆ, ಸತತ ಇಂಜುರಿಗೆ ಒಳಗಾದ್ರು. ಆಸಿಸ್​ ಸರಣಿ ನಂತ್ರ ಮತ್ತು 14ನೇ ಆವೃತ್ತಿ ಐಪಿಎಲ್​​ನಲ್ಲಿ ಇಂಜುರಿಗೆ ಒಳಗಾದ ನಟರಾಜನ್,​ ಇನ್ನು ಚೇತರಿಸಿಕೊಂಡಿಲ್ಲ. ಹಾಗಾಗಿ ಇಂಗ್ಲೆಂಡ್​-ಶ್ರೀಲಂಕಾ ಸರಣಿಯಿಂದ ಹೊರಬಿದ್ರು.

ಟೀಮ್​ ಇಂಡಿಯಾಕ್ಕೆ ಭರವಸೆ ಮೂಡಿಸುತ್ತಾರಾ ಸಕಾರಿಯಾ..?

ಸದ್ಯ ಲಂಕಾ​ ಪ್ರವಾಸದಲ್ಲಿರುವ ಮತ್ತೊಬ್ಬ ಎಡಗೈ ಬೌಲರ್​​​​​ ಚೇತನ್​ ಸಕಾರಿಯಾ ಮೇಲೆ, ಭಾರೀ ನಿರೀಕ್ಷೆ ಇಡಲಾಗಿದೆ. ಸಕಾರಿಯಾ ಚೊಚ್ಚಲ ಐಪಿಎಲ್​​ ಟೂರ್ನಿಯಲ್ಲೇ ಗಮನಾರ್ಹ ಪ್ರದರ್ಶನ ನೀಡಿದ್ರು. ಪೇಸ್​, ಲೈನ್​ ಆ್ಯಂಡ್​ ಲೆಂಥ್, ಕಂಟ್ರೋಲ್​​ ಅನ್ನ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದ ಸಕಾರಿಯಾ, ಲಂಕಾ ಸರಣಿಯ ಎಕ್ಸ್​​ಫ್ಯಾಕ್ಟರ್ ಆಗಿದ್ದಾರೆ​​.! ಸಕಾರಿಯಾಗೆ ಇದೇ ಚೊಚ್ಚಲ ಅಂತಾರಾಷ್ಟ್ರೀಯ ಸರಣಿಯಾಗಿದ್ದು, ಭರವಸೆ ಹೆಚ್ಚಿಸಿದ್ದಾರೆ.

IPLನಲ್ಲಿ ಸಕಾರಿಯಾ ಪ್ರದರ್ಶನ

ಪಂದ್ಯ-07

ವಿಕೆಟ್ ​​​-07

ಎಕಾನಮಿ -8.22

ಬೆಸ್ಟ್​ -3/31

ಐಪಿಎಲ್ ಸೀಸನ್ 14ರ ಮೊದಲ ಹಂತದಲ್ಲಿ​ ಸಕಾರಿಯಾ, 7 ಪಂದ್ಯಗಳಲ್ಲಿ 7 ವಿಕೆಟ್​ ಪಡೆದಿದ್ದಾರೆ. ಬೌಲಿಂಗ್​ ಎಕಾನಮಿ 8.22 ಹೊಂದಿರುವ ಸಕಾರಿಯಾ, 31ರನ್​ ನೀಡಿ 3 ವಿಕೆಟ್​ ಕಬಳಿಸಿರೋದು ಬೆಸ್ಟ್​ ಬೌಲಿಂಗ್​ ಸ್ಪೆಲ್ ಆಗಿದೆ.

ಒಟ್ನಲ್ಲಿ.. ಜಹೀರ್​ ಖಾನ್​ ನಂತರ ಯಾವೊಬ್ಬ ಎಡಗೈ ಬೌಲರ್​​ ಕೂಡ, ಟೀಮ್​​ ಇಂಡಿಯಾದಲ್ಲಿ ನೆಲೆಯೂರದಿರೋದು ಬೇಸರದ ಸಂಗತಿಯಾಗಿದೆ. ನಟರಾಜನ್​​ಗೆ ಈ ಸ್ಥಾನ ಫುಲ್​ಫಿಲ್​ ಮಾಡುವ ಅವಕಾಶ ಇದ್ದರೂ, ಇಂಜುರಿಯಿಂದ ತಂಡದಿಂದ ಹೊರಗುಳಿಯುವಂತೆ ಮಾಡಿದೆ. ಇದೀಗ ಮತ್ತೊಬ್ಬ ಯುವ ಎಡಗೈ ವೇಗಿ ಸಕಾರಿಯಾಗೆ ಚಾನ್ಸ್​ ಸಿಕ್ಕಿದ್ದು, ಆ ಮೂಲಕ ತಂಡಕ್ಕೆ ಕಾಡ್ತಿರುವ ಲೆಫ್ಟ್​ ಆರ್ಮ್​ ಬೌಲರ್​​​ ಸಮಸ್ಯೆಯನ್ನ ನೀಗಿಸ್ತಾರಾ ಅನ್ನೋದನ್ನ ಕಾದುನೋಡಬೇಕಿದೆ.

The post ಜಹೀರ್, ನೆಹ್ರಾ ನಂತರದ ಸ್ಥಾನ ತುಂಬ್ತಾರಾ ಟೀಂ ಇಂಡಿಯಾದ ಈ ಆಟಗಾರ appeared first on News First Kannada.

Source: newsfirstlive.com

Source link