‘ಅನೂಪ್ ಭಂಡಾರಿ ವಿಕ್ರಾಂತ್ ರೋಣ ಚಿತ್ರಕ್ಕೆ ಓಂಕಾರ ಹಾಕಿದಾಗಿಂದಲೂ ಸೌಥ್ ಇಂಡಿಯಾದ ಸೆನ್ಸೇಷನಲ್ ಸುದ್ದಿಯಾಗಿವೆ​​​.. ಕಿಚ್ಚ ಸುದೀಪ್ ಅವರ ಯುನಿವರ್ಸಲ್ ಫ್ಯಾನ್ಸ್​​ಗಳ ಗಮನವೆಲ್ಲ ತನ್ನತ ಸೇಳೆಯುತ್ತಿರುವ ವಿಕ್ರಾಂತ್ ರೋಣ ಸೆಟ್​​​​ಗೆ ಶ್ರೀಲಂಕನ್ ಚೆಲುವೆ ಜಾಕ್ವೆಲಿನ್ ಫರ್ನಾಂಡಿಸ್ ಬರೋ ಡೇಟ್ 2ನೇ ಬಾರಿಗೆ ಫಿಕ್ಸ್ ಆಗಿದೆ.

ಕಟ್ಟ ಕಡೆಯ ಹಂತದ ಶೂಟಿಂಗ್​ನಲ್ಲಿರುವ ‘ವಿಕ್ರಾಂತ್ ರೋಣ’ ಬಳಗದಿಂದ ಒಂದು ಕಲರ್ ಫುಲ್ ಕ್ಯಾಬರೆ ಸಮಾಚಾರ ಈ ಹಿಂದೆನೇ ಹೊರ ಬಂದಿತ್ತು. ಶ್ರೀಲಂಕನ್ ಚೆಲುವೆ ಜಾಕ್ವೆಲಿನ್ ಫರ್ನಾಂಡಿಸ್ ಕಿಚ್ಚ ಸುದೀಪ್ ಜೊತೆ ವೈರಾದ ಕಲರ್ ಕುಣಿತ ಮಾಡಲಿದ್ದಾರೆ ಅನ್ನೋ ಸಮಾಚಾರವನ್ನ ನಾವೇ ನಿಮ್ಗೆ ಹೇಳಿದ್ವಿ.. ಈಗ ಅದರ ಮುಂದುವರೆದ ಅಂದವಾದ ಭಾಗ.. ಜಾಕ್ವೆಲಿನ್ ‘ವಿಕ್ರಾಂತ್ ರೋಣ’ ಸೆಟ್​​​​ಗೆ ಬಲಗಾಲಿಡುವ ಮೂಹರ್ತ ಎರಡನೇ ಬಾರಿಗೆ ಫಿಕ್ಸ್ ಆಗಿದೆ.. ಕಳೆದ ಮೇ ತಿಂಗಳೇ ಬರಬೇಕಾಗಿತ್ತು ಶ್ರೀಲಂಕನ್ ಜಾಕ್ ಫೀಶ್​​​.. ಆದ್ರೆ ಎರಡನೇ ಲಾಕ್ ಡೌನ್ ಆದ ಕಾರಣ ಇಷ್ಟು ದಿನ ಬೇಕಾಯ್ತು..

ಸುದೀಪ್ ಸಿನಿಮಾಗಳ ಹೀರೋಯಿನ್ ಗಳ ಬಗ್ಗೆ ಅಭಿಮಾನಗಳಲ್ಲಿ ಚಾಯ್ ಪೇ ಚರ್ಚೆಗಳು ನಡೆಯೋದು ಸಹಜ.. ಆದ್ರೆ ಈ ಬಾರಿ ವಿಕ್ರಾಂತ್​ ರೋಣ ಸಿನಿಮಾದಲ್ಲಿ ಹೀರೋಯಿನ್ ಅಷ್ಟಾಗಿ ಸದ್ದು ಮಾಡ್ತಿಲ್ಲ.. ವಿಕ್ರಾಂತ್ ರೋಣ ಹೀರೋಯಿನ್ ವಿಚಾರದಲ್ಲಿ ಅಷ್ಟಾಗಿ ಸದ್ದು ಗದ್ದಲ್ಲ ಮಾಡದ ಅನುಪ್ ಭಂಡಾರಿ ಬಳಗ ಐಟಂ ಸಾಂಗ್ ವಿಚಾರದ ಗುಟ್ಟನ್ನ ಹೊರಬಿಟ್ಟಿದೆ.. ಶ್ರೀಲಂಕನ್ ಸಿರಿ ಸಿರಿ ಸಿಂಗಾರಿ ನಮ್ಮ ವೀರ ಮದಕರಿ ಜೊತೆ ಕುಣಿತಕ್ಕೆ ಸಜ್ಜಾಗಿದ್ದಾಳೆ

ದಾಖಲೆಯ ವೆಚ್ಚದಲ್ಲಿ ಸಿದ್ಧವಾಗುತ್ತಿದೆ ವಿಕ್ರಾಂತ್ ರೋಣ..!
ಅಬ್ಬಬಾ.. ಒಂದು ಹಾಡಿಗೆ ಜಾಕ್ವೆಲಿನ್ ಪೇಮೆಂಟ್ ಅಷ್ಟಾ..?

ಕುಣಿಯೋದ್ರಲ್ಲಿ.. ಅದರಲ್ಲೂ ಐಟಂ ಸಾಂಗ್​​​ಗಳಲ್ಲಿ ನಲಿ ನಲಿದಾಡೋದ್ರಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಬಿಟೌನ್​​​​​​ ಊರಿನಲ್ಲಿ ಸೂಪರೋ ಸೂಪರ್​​​.. ಜಾಕ್ವೆಲಿನ್ ಒಂದು ಐಟಂ ನಂಬರ್ ಸಾಂಗ್​​ನಲ್ಲಿ ಸೊಂಟ ಬಳುಕಿಸಲು ತೆಗೆದುಕೊಳ್ಳೋ ಸಂಭಾವನೆಯಲ್ಲಿ , ಹೊಸ ಪಿಕ್ಚರ್ ಮಾಡಬಹುದು​​.. ಪ್ಯಾನ್ ಇಂಡಿಯನ್ ಲೆವಲ್​​ನಲ್ಲಿ ಸಿನಿಮಾ ಮಾಡೋ ಕನಸಿನಿಂದ ಕೋಟಿ ಕೋಟಿ ಖರ್ಚು ಮಾಡಿ ವಿಕ್ರಾಂತ್ ರೋಣ ಚಿತ್ರವನ್ನ ನಿರ್ಮಾಣ ಮಾಡ್ತಿದ್ದಾರೆ ನಿರ್ಮಾಪಕ ಜಾಕ್ ಮಂಜು.. ಒಂದು ಮಾಹಿತಿ ಪ್ರಕಾರ ಜಾಕ್ವೆಲಿನ್​​​​​​​​ಗೆ ವಿಕ್ರಾಂತ್ ರೋಣ ತಂಡದಿಂದ ಸಿಕ್ತಿರೋ ಸಂಭಾವನೆ ಬರೋಬ್ಬರಿ 3 ಕೋಟಿ..!

ಅದ್ದೂರಿ ಸೆಟ್​​.. ಜಾನಿ ಕೊರಿಯೋಗ್ರಫಿ..ಜಾಕ್ವಿ ಕ್ಯಾಬರೆ..
ವಿಕ್ರಾಂತ್ ರೋಣ ಬಳಿ ಜಾಕ್ವೆಲಿನ್ ಬರೋದ್ಯಾವಾಗ..?

ಮೋಹನ್ ಬಿ.ಕೆರೆ ಸ್ಟುಡಿಯೊದಲ್ಲಿ ವಿಕ್ರಾಂತ್ ರೋಣ ಸಿನಿಮಾದ ಹಾಡಿಗಾಗಿ ಭರ್ಜರಿ ಸೆಟ್​ಗಳನ್ನು ಸದ್ದಿಲ್ಲದೇ ಸಿದ್ಧ ಮಾಡುತ್ತಿದೆ ವಿಕ್ರಾಂತ್ ರೋಣ ಫಿಲ್ಮ್ ಟೀಮ್​​.. ಟಾಲಿವುಡ್​​ನ ಹೆಸರಾಂತ ಡ್ಯಾನ್ಸ್ ಕೊರಿಯೋಗ್ರಫರ್ ಕನ್ನಡದ ಅಪ್ಪು ಡ್ಯಾನ್ಸ್ ಖ್ಯಾತಿಯ ಜಾನಿ ಮಾಸ್ಟರ್ ಕುಣಿತದ ಕಲ್ಪನೆಯಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ನಮ್ಮ ಕಿಚ್ಚ ಸುದೀಪ್ ಅವರ ಜೊತೆ ಕುಣಿದು ಕುಪ್ಪಳಿಸಲಿದ್ದಾರೆ.

ಬಿ.ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆಯಲ್ಲಿ ವಿಕ್ರಾಂತ್ ರೋಣ ಸಿನಿಮಾದ ಹಾಡುಗಳು ಮೂಡಿಬರಲಿವೆ.. ಇದೆಲ್ಲ ಓಕೆ.. ಶ್ರೀಲಂಕನ್ ಚಿಂಗಾರಿ , ಬಾಲಿವುಡ್ ಬಂಗಾರಿ ವಿಕ್ರಾಂತ್ ರೋಣ ಸೆಟ್​​​ಗೆ ಬರೋದ್ಯಾವಾಗ ಅನ್ನೊದಕ್ಕೆ ಉತ್ತರ ಜುಲೈ 10ನೇ ತಾರೀಖ್​​​. ಆರು ದಿನಗಳ ಕಾಲ ವಿಕ್ರಾಂತ್ ರೋಣ ಸಿನಿಮಾದ ಸಾಂಗ್ ಶೂಟಿಂಗ್ ಪ್ಲಾನ್ ಮಾಡಲಾಗಿದೆ.. ಜುಲೈ 10ನೇ ತಾರೀಖ್ ವಿಕ್ರಾಂತ್ ರೋಣ ಸಿನಿಮಾದ ಸಾಂಗ್ ಶೂಟಿಂಗ್ ಅದ್ದೂರಿ ಸೆಟ್​​ನಲ್ಲಿ ಭಾರಿ ವೆಚ್ಚದಲ್ಲಿ ಮೋಹನ್ ಬಿ.ಕೆರೆ ಸ್ಟುಡಿಯೋದಲ್ಲಿ ನೆರವೇರಲಿದೆ.. ವಿಕ್ರಾಂತ್ ರೋಣ ಸಿನಿಮಾದ ಈ ಐಟಂ ಸಾಂಗ್ ಶೂಟ್ ಆದ್ರೆ ಆಲ್ ಮೋಸ್ಟ್ ಆಲ್ ವಿಕ್ರಾಂತ್ ರೋಣ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆದಂತಾಗುತ್ತದೆ.

The post ಜಾಕ್ವೆಲಿನ್ ಕುಣಿತಕ್ಕೆ ‘ವಿಕ್ರಾಂತ್ ರೋಣ’ ವೇದಿಕೆ ಸಿದ್ಧ; ಸಂಭಾವನೆ ಕೇಳಿದ್ರೆ ಹೌಹಾರ್ತೀರ appeared first on News First Kannada.

Source: newsfirstlive.com

Source link