ಜಾಕ್ವೆಲಿನ್ ಜೊತೆ ಫೇವರೆಟ್ ಫೋಟೋ ಶೇರ್ ಮಾಡಿ ಸುದೀಪ್

ಸ್ಯಾಂಡಲ್‍ವುಡ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ನಟಿ ಜಾಕ್ವೆಲಿನ್ ಫರ್ನಾಂಡಿಸ್ ಜೊತೆಗಿರುವ ತಮ್ಮ ನೆಚ್ಚಿನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನಿರ್ದೇಶಕ ಅನೂಪ್ ಭಂಡಾರಿ ಹಾಗೂ ಕಿಚ್ಚ ಸುದೀಪ್ ಕಾಂಬಿನೇಷನ್‍ನಲ್ಲಿ ಮೂಡಿ ಬರುತ್ತಿರುವ ಬುಹು ನೀರಿಕ್ಷಿತ ಸಿನಿಮಾ ವಿಕ್ರಾಂತ್ ರೋಣ. ಈ ಚಿತ್ರದ ಸ್ಪೆಷಲ್ ಹಾಡೊಂದಕ್ಕೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಸುದೀಪ್ ಜೊತೆ ಹೆಜ್ಜೆ ಹಾಕಿದ್ದು, ಈ ಹಾಡು ಕಿಚ್ಚನ ಅಭಿಮಾನಿಗಳಲ್ಲಿ ಬಹಳಷ್ಟು ಕುತೂಹಲ ಹೆಚ್ಚಿಸಿದೆ.

ಸದ್ಯ ಹಾಡಿನ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಜಾಕ್ವೆಲಿನ್ ಜೊತೆ ಕಿಚ್ಚ ಒಂದಷ್ಟು ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದು, ಅದರಲ್ಲಿ ತಮ್ಮ ನೆಚ್ಚಿನ ಫೋಟೋವನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಜಾಕ್ವೆಲಿನ್ ಜೊತೆಗೆ ನನ್ನ ಎರಡು ಫೇವರೆಂಟ್ ಫೋಟೋಗಳು. ಮಾಸ್ಟರ್ ನೀವು ಅದ್ಭುತ, ಹುಕ್ ಸ್ಟೆಪ್ಸ್ ಸೂಪರ್ ಆಗಿ ಕಾಣಿಸುತ್ತದೆ. ಶಿವು ಅವರು ಹಾಕಿದ್ದ ಸೆಟ್ ಬಹಳ ದೊಡ್ಡದಾಗಿತ್ತು, ಜಾಕ್ ಮಂಜುಗೆ ವಿಶೇಷ ಧನ್ಯವಾದ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

ವಿಕ್ರಾಂತ್ ರೋಣಾಗಾಗಿ ಬಾಲಿವುಡ್ ನಟಿ ಜಾಕ್ವೆಲಿನ್ ಫನಾರ್ಂಡಿಸ್ ಮುಂಬೈನಿಂದ ಬೆಂಗಳೂರಿಗೆ ಬಂದಿದ್ದಾರೆ. ಚಿತ್ರದಲ್ಲಿ ಜಾಕ್ವೆಲಿನ್ ಒಂದು ಹಾಡಿಗೆ ನೃತ್ಯವನ್ನು ಮಾತ್ರ ಮಾಡುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಇವರು ಕೆಲವು ದೃಶ್ಯಗಳಲ್ಲಿಯೂ ಕಾಣಿಸಿಕೊಂಡಿದ್ದಾರಂತೆ. ಅದಕ್ಕಾಗಿ ಅವರು ಕನ್ನಡವನ್ನು ಕಲಿತು ನಟಿಸಿದ್ದಾರೆ ಎಂಬ ಮಾಹಿತಿ ವಿಕ್ರಾಂತ್ ರೋಣ ಸೆಟ್‍ನಿಂದ ಸಿಕ್ಕಿದೆ. ಇದನ್ನೂ ಓದಿ: ವಿಕ್ರಾಂತ್ ರೋಣಗಾಗಿ ಕನ್ನಡ ಕಲಿತ ಜಾಕ್ವೆಲಿನ್

 

The post ಜಾಕ್ವೆಲಿನ್ ಜೊತೆ ಫೇವರೆಟ್ ಫೋಟೋ ಶೇರ್ ಮಾಡಿ ಸುದೀಪ್ appeared first on Public TV.

Source: publictv.in

Source link