ಜಾಗದ ವಿಷಯಕ್ಕೆ ಗಲಾಟೆ ಮಾಡಿ ಕಾಲೇಜಿಗೆ ಬೀಗ; ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದು ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ರೀ ಓಪನ್ | Students protest against College closed due to land issues in dharwad

ಜಾಗದ ವಿಷಯಕ್ಕೆ ಗಲಾಟೆ ಮಾಡಿ ಕಾಲೇಜಿಗೆ ಬೀಗ; ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದು ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ರೀ ಓಪನ್

ವಿದ್ಯಾರ್ಥಿಗಳು ತರಗತಿಗೆ ಹೋಗುವುದನ್ನು ಬಿಟ್ಟು ಕಾಲೇಜಿನ ಹೊರಗಡೆಯೇ ಪ್ರತಿಭಟನೆಗೆ ಮುಂದಾಗಿದ್ದಾರೆ

ಧಾರವಾಡ: ನೂರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಡಿಪಾಯ ಹಾಕಿರುವ ಗುಡ್ ನ್ಯೂಸ್ ಕಾಲೇಜು. ಆದರೆ ಈ ಕಾಲೇಜಿಗೆ ಬರುವ ವಿದ್ಯಾರ್ಥಿಗಳು ತರಗತಿಗೆ ಹೋಗುವುದನ್ನು ಬಿಟ್ಟು ಕಾಲೇಜಿನ ಹೊರಗಡೆಯೇ ಪ್ರತಿಭಟನೆಗೆ ಮುಂದಾಗಿದ್ದಾರೆ. ಹೀಗೆ ವಿದ್ಯಾರ್ಥಿಗಳು ಏಕಾಏಕಿ ಪ್ರತಿಭಟನೆಗೆ (Protest) ಮುಂದಾಗಲು ಕಾರಣ ಗುಡ್ ನ್ಯೂಸ್ ಕಾಲೇಜಿಗೆ ಬೀಗ ಹಾಕಿರುವುದೇ ಆಗಿದೆ. ಹೌದು ಇಂದು ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದಲ್ಲಿನ ವಿದ್ಯಾರ್ಥಿಗಳು ಎಂದಿನಂತೆ ಕಾಲೇಜಿಗೆ ಬಂದಿದ್ದರು, ಆದರೆ ಗುಡ್ ನ್ಯೂಸ್ ಕಾಲೇಜಿನ ವಿಧ್ಯಾರ್ಥಿಗಳಿಗೆ ಶಾಕ್ ಕಾದಿತ್ತು. ಏಕೆಂದರೆ ಕಾಲೇಜಿಗೆ ಬೀಗ ಹಾಕಲಾಗಿತ್ತು. ಕಾಲೇಜಿನ ಜಾಗದ ವಿಷಯಕ್ಕೆ ಸಂಬಂಧಿಸದಂತೆ ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದ ಗುರುಸಿದ್ದಪ್ಪ ನಾಶಿ ಎನ್ನುವವರು ಗುಡ್ ನ್ಯೂಸ್ ಕಾಲೇಜಿಗೆ ಬೀಗ ಹಾಕಿದ್ದಾರೆ. ಇದನ್ನು ವಿರೋಧಿಸಿದ ವಿದ್ಯಾರ್ಥಿಗಳು ಕಾಲೇಜಿನ ಆವರಣದಲ್ಲಿಯೇ ಪ್ರತಿಭಟನೆಗೆ ಮುಂದಾಗಿದ್ದಾರೆ.

ಹಲವು ವರ್ಷಗಳ ಹಿಂದೆಯೇ ಜಾಗ ಕೊಟ್ಟ ಕಾರಣ ಇದೀಗ ಮತ್ತೆ ಜಾಗ ಬೇಕೆಂದು ಗುರುಸಿದ್ದಪ್ಪ ನಾಶಿಯವರು ಕೋರ್ಟ್ ಮೊರೆ ಹೋಗಿದ್ದಾರೆ. ಗುಡ್ ನ್ಯೂಸ್ ಕಾಲೇಜಿಗೆ ನಾಶಿ ಕುಟುಂಬವೇ ಜಾಗೇ ನೀಡಿದೆ. ಹೀಗಾಗೆ ಸದ್ಯ ಖಾಸಗಿ ಸಂಸ್ಥೆ ನಡೆಸುತ್ತಿರುವ‌ ಕಾಲೇಜಿನ ಜಾಗ ನಮ್ಮದು ಎಂದು ನಾಶಿ ಇಂದು ಕಾಲೇಜಿಗೆ ಬೀಗ ಹಾಕಿದ್ದರು. ಅಲ್ಲದೆ ಈ ಹಿಂದೆಯೂ ಹಲವು ಭಾರಿ ಕಾಲೇಜಿನ ಜಾಗದ ವಿಚಾರವಾಗಿ ಗಲಾಟೆಗಳಾಗಿದ್ದು, ಸದ್ಯ ವಿವಾದ ಕೋಟ್೯ ಅಂಗಳದಲ್ಲಿದೆ. ಅದ್ಯಾಗಿಯೂ ನಾಶಿ ಕಾಲೇಜಿಗೆ ಬೀಗ ಹಾಕಿದ್ದರಿಂದ ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ.

ತಕ್ಷಣವೇ ಸುದ್ದಿ ತಿಳಿದು ಸ್ಥಳಕ್ಕೆ ಕಲಘಟಗಿ ಪೊಲೀಸರು ಸೇರಿದಂತೆ ತಹಶೀಲ್ದಾರ್ ಆಗಮಿಸಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗದಂತೆ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಹಾಕಿದ ಬೀಗ ತೆರೆದು ವಿವಾದವನ್ನು ಸುಖ್ಯಾಂತಗೊಳಿಸಿದ್ದಾರೆ.

ಈ ಕಾಲೇಜಿನಲ್ಲಿ ಕಲಿತು ಸರ್ಕಾರಿ, ಖಾಸಗಿ ಉದ್ಯೋಗವನ್ನು ಪಡೆದುಕೊಂಡು ಪಾಲಕರನ್ನು ಸಾಕಿ ಸಲಹಬೇಕು ಎಂದುಕೊಂಡಿದ್ದ ವಿದ್ಯಾರ್ಥಿಗಳಲ್ಲಿ ಬೆಳ್ಳಂಬೆಳಿಗ್ಗೆ ಆತಂಕ ಎದುರಾಗಿತ್ತು. ಆದರೆ ಅಧಿಕಾರಗಳ ಆಗಮನದಿಂದ ಕೊಂಚ ನಿರಾಳತೆ ತಂದುಕೊಟ್ಟಿದೆ. ಕೂಡಲೇ ರಾಜ್ಯ ಸರ್ಕಾರ ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮಗಳನ್ನು ಜರುಗಿಸಿ ವಿದ್ಯಾರ್ಥಿಗಳ ಭವಿಷ್ಯವನ್ನು ಕಾಪಾಡುವ ಕಾರ್ಯ ಮಾಡಬೇಕಿದೆ. ಏಕೆಂದರೆ ಪದೇ ಪದೇ ಈ ರೀತಿ ಗಲಾಟೆ ವಿವಾದದಿಂದ ಕಾಲೇಜಿನ ನೂರಾರು ವಿದ್ಯಾರ್ಥಿಗಳ ಓದಿಗೆ ತೊಂದೆಯಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ವರದಿ: ದತ್ತಾತ್ರೇಯ ಪಾಟೀಲ್

ಇದನ್ನೂ ಓದಿ:

ಇರುವಕ್ಕಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅವ್ಯವಸ್ಥೆ; ಕಾಲ್ನಡಿಗೆ ಮೂಲಕ ಧರಣಿ ನಡೆಸುತ್ತಿರುವ ವಿದ್ಯಾರ್ಥಿಗಳು

ವಿದ್ಯಾರ್ಥಿನಿಯರ ಆತ್ಮವಿಶ್ವಾಸ ಹೆಚ್ಚಿಸಿದ ಜೆಂಡರ್-ನ್ಯೂಟ್ರಲ್ ಸಮವಸ್ತ್ರ: ದೇಶದ ಗಮನ ಸೆಳೆದಿದೆ ಕೇರಳ ಶಾಲೆಯ ಈ ನಿರ್ಧಾರ

TV9 Kannada

Leave a comment

Your email address will not be published. Required fields are marked *