ಜಾದವ್​​ಗಾಗಿ ಪಾಕ್​ ಹೊಸ ಮಸೂದೆ; ‘ಅದೇ ರಾಗ, ಅದೇ ಹಾಡು’ ಎಂದ ಭಾರತ


ನವದೆಹಲಿ: ಭಾರತದ ಕುಲಭೂಷಣ್​ ಜಾಧವ್​ಗೆ ಪಾಕಿಸ್ತಾನ ಮಿಲಿಟರಿ ನ್ಯಾಯಾಲಯ ನೀಡಿರುವ ಮರಣ ದಂಡನೆ ವಿರುದ್ಧ ಮೆಲ್ಮನವಿ ಸಲ್ಲಿಸುವ ಹಕ್ಕನ್ನು ನೀಡಲು, ಪಾಕಿಸ್ತಾನ ಹೊಸ ಮಸೂದೆಯನ್ನು ಜಂಟಿ ಅಧಿವೇಶನದಲ್ಲಿ ಅಂಗೀಕರಿಸಿದೆ.

2017ರಲ್ಲಿ ಕುಲಭೂಷಣ್​ರನ್ನು ಬಂಧಿಸಿರುವ ಪಾಕಿಸ್ತಾನ, ಬೇಹುಗಾರಿಕೆ ಮತ್ತು ಭಯೋತ್ಪಾದನೆ ಆರೋಪದಲ್ಲಿ ಕುಲಭೂಷಣ್​ಗೆ ಮರಣದಂಡನೆ ವಿಧಿಸಿತ್ತು. ಈ ಆದೇಶ ಪ್ರಶ್ನಿಸಿ ಭಾರತ ಸರ್ಕಾರ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿತ್ತು. ಈ ಕುರಿತು ಮರುಪರಿಶೀಲಿಸುವಂತೆ ಮತ್ತು ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸುವಂತೆ ಐಸಿಜೆ 2019ರ ಜುಲೈನಲ್ಲಿ ತೀರ್ಪು ನೀಡಿತ್ತು. ಐಸಿಜೆ ತೀರ್ಪಿನಂತೆ ನಿನ್ನೆ ಜಂಟಿ ಅಧಿವೇಶನ ಕರೆದಿದ್ದ ಪಾಕಿಸ್ತಾನ ಹೊಸ ಕಾನೂನು ಮಸೂದೆಗೆ ಅನುಮೋದನೆ ನೀಡಿದೆ.

ಆದರೆ ಜಾದವ್ ವಿಚಾರದಲ್ಲಿ ಒಂದಿಷ್ಟು ಪ್ರಶ್ನೆಗಳನ್ನ ಕೇಳಿ ಭಾರತ ಅಸಮಾಧಾನ ವ್ಯಕ್ತಪಡಿಸಿದೆ. ಇಸ್ಲಾಮಾಬಾದ್​ನಲ್ಲಿ ಅಂಗೀಕರಿಸಲಾಗಿರುವ ಮಸೂದೆಯಲ್ಲಿ ಒಂದಿಷ್ಟು ದೋಷಗಳನ್ನ ಹೊಂದಿದೆ. 2019ರಲ್ಲಿ ICJ ನೀಡಿದ ಆದೇಶವನ್ನು ಕಾರ್ಯಗತಗೊಳಿಸಲು ಕ್ರಮಗಳ ಅಗತ್ಯವಿದೆ ಎಂದು ಪಾಕ್ ತಿಳಿಸಿದೆ. ಆದರೆ ಈ ಕಾನೂನು “ಹೊಸದೇನೂ ಅಲ್ಲ”. 2019ರಲ್ಲಿ ಹೊರಡಿಸಲಾದ ಸುಗ್ರೀವಾಜ್ಞೆ ಪುನರಾವರ್ತನೆ ಆಗಿದೆ. ಜಾಧವ್​ ಅವರನ್ನ ಕಾನ್ಸುಲರ್ ಭೇಟಿ ಮಾಡಲು ಅವಕಾಶ ನೀಡಿಲ್ಲ. ಕೆಲವೊಂದು ಮೂಲಭೂತ ತತ್ವದ ಉಲ್ಲಂಘನೆಯಾಗಿದೆ. ಅಂತಾರಾಷ್ಟ್ರೀಯ ಕಾನೂನು ಅಡಿಯಲ್ಲಿ ಪಾಕಿಸ್ತಾನ ತನ್ನ ಜವಾಬ್ದಾರಿಗಳನ್ನು ಪೂರೈಸಿದೆಯೇ ಅನ್ನೋ ಪ್ರಶ್ನೆ ಎದ್ದಿದೆ ಎಂದು ಭಾರತ ಹೇಳಿದೆ.

News First Live Kannada


Leave a Reply

Your email address will not be published. Required fields are marked *