‘ಧಡಕ್’​ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಖ್ಯಾತ ನಟಿ ಶ್ರೀದೇವಿ ಪುತ್ರಿ ಜಾನ್ಹವಿ ಕಪೂರ್,​ ಇದೀಗ ಸೌತ್​ ಇಂಡಸ್ಟ್ರಿಯಲ್ಲೂ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ತಮ್ಮ ಲುಕ್ಸ್​​ ಜೊತೆಗೆ ನಟನೆಯ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ಜಾನ್ಹವಿ, ದಕ್ಷಿಣ ಭಾರತದ ಬಿಗ್​ ಬಜೆಟ್​ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಸುದ್ದಿ ಓಡಾಡ್ತಿದೆ. ಹೌದು.. ತೆಲುಗಿನ ಸ್ಟಾರ್​ ನಟ ಮಹೇಶ್​ ಬಾಬು ಮೋಸ್ಟ್​ ಎಕ್ಸ್​​ಪೆಕ್ಟೆಡ್​​ 28ನೇ ಸಿನಿಮಾಗೆ ಜಾನ್ಹವಿ ನಾಯಕಿಯಾಗಲಿದ್ದಾರೆ ಎನ್ನಲಾಗ್ತಿದೆ.

ಮಹೇಶ್​ ಬಾಬು ಹಾಗೂ ನಿರ್ದೇಶಕ ತ್ರಿವಿಕ್ರಮ್ ಕಾಂಬಿನೇಷನ್​ನ ಮೂರನೇ ಸಿನಿಮಾ ಇದಾಗಲಿದ್ದು, ಸಾಕಷ್ಟು ನಿರೀಕ್ಷೆ ಕೂಡ ಇದೆ. ಇದೇ ಕಾರಣಕ್ಕೆ ಮೋಸ್ಟ್​ ಹ್ಯಾಪನಿಂಗ್​ ನಟಿಯನ್ನೇ ಸಿನಿಮಾಗೆ ಪಿಚ್​ ಮಾಡಬೇಕು ಅನ್ನೋ ನಿರ್ಧಾರ ಚಿತ್ರತಂಡದ್ದೂ ಆಗಿತ್ತು. ಇದೀಗ ಚಿತ್ರತಂಡ ಬಾಲಿವುಡ್​ ದೀವಾ ಜಾನ್ಹವಿ ಕಪೂರ್​ರನ್ನ ಅಪ್ರೋಚ್​ ಮಾಡಿರೋದಾಗಿ ಸುದ್ದಿ ಹರಿದಾಡ್ತಿದೆ. ತ್ರಿವಿಕ್ರಮ್ ಹಾಗೂ ಮಹೇಶ್​ ಬಾಬು ಕಾಂಬಿನೇಷನ್​ನಲ್ಲಿ ಈ ಹಿಂದೆ ‘ಅತಡು’ ಹಾಗೂ ‘ಖಲೇಜಾ’ ಸಿನಿಮಾಗಳು ಬಂದಿದ್ದು, ಸೂಪರ್​ ಹಿಟ್​ ಆಗಿದ್ದವು.

ಸದ್ಯ ಐದು ಸಿನಿಮಾಗಳನ್ನ ಮುಗಿಸಿರುವ ಜಾನ್ಹವಿ, ಕರಣ್​ ಜೋಹರ್​ ನಿರ್ಮಾಣದ ‘ದೋಸ್ತಾನಾ-2’ ಹಾಗೂ ‘ಗುಡ್​ ಲಕ್​ ಜೆರಿ’ಽ ಸಿನಿಮಾಗಳಲ್ಲಿ ನಟಿಸಲಿದ್ದಾರೆ. ಇದನ್ನ ಹೊರತು ಪಡಿಸಿದ್ರೆ, ಜಾನ್ಹವಿ ಸದ್ಯ ಬೇರೆ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಅಂದ್ಹಾಗೇ ಜಾನ್ಹವಿ ಕಪೂರ್​ ಹೊರತುಪಡಿಸಿ, ಸೌತ್​ ಇಂಡಸ್ಟ್ರಿಯಲ್ಲಿ ಸದ್ಯ ಬ್ಯಾಕ್​ ಟು ಬ್ಯಾಕ್​ ಹಿಟ್​ ಸಿನಿಮಾಗಳನ್ನ ನೀಡಿರುವ ಪೂಜಾ ಹೆಗ್ಡೆ ಹೆಸರು ಕೂಡ ಈ ಸಿನಿಮಾಗೆ ಕೇಳಿ ಬರ್ತಿದೆ. ಆದ್ರೆ ಪೂಜಾ ಹೆಗ್ಡೆ ಈಗಾಗಲೇ ಅನೇಕ ಸಿನಿಮಾಗಳನ್ನ ಒಪ್ಪಿಕೊಂಡಿರೋದ್ರಿಂದ ಇದು ಆಗದ ಕಥೆಯಂತೇ ಕಾಣುತ್ತಿದೆ. ಅದೇನಿದ್ರೂ ಮಹೇಶ್​ ಬಾಬು ‘ಸರ್ಕಾರು ವಾರಿ ಪಾಠ’ ಸಿನಿಮಾ ರೆಡಿಯಾದ ಮೇಲಷ್ಟೇ ಅಧಿಕೃತ ಮಾಹಿತಿ ಹೊರ ಬೀಳಲಿದೆ.

The post ಜಾನ್ಹವಿ ಜೊತೆ ಮಹೇಶ್​ ಬಾಬು ರೊಮ್ಯಾನ್ಸ್; ಶ್ರೀದೇವಿಯಂತೆ ಮಗಳಿಗೂ ಸೌತ್​ ಅದೃಷ್ಟ ಒಲಿಯುತ್ತಾ? appeared first on News First Kannada.

Source: newsfirstlive.com

Source link