
ಜಾಮಿಯಾ ಮಸೀದಿ, ಮಂಡ್ಯ
ಶ್ರೀರಂಗಪಟ್ಟಣದ ಜಾಮೀಯ ಮಸೀದಿ ಶೇ.100ರಷ್ಟು ಮಸೀದಿಯೇ, ಮೈಸೂರು ಗೆಜಿಟಿಯರ್ನಲ್ಲಿ ಉಲ್ಲೇಖ ಆಗಿರೋದು ಬ್ರಿಟಿಷರ ಕಾಲದಲ್ಲಿ. ಆ ಉಲ್ಲೇಖವನ್ನು ನಾವು ಒಪ್ಪುವುದಿಲ್ಲ ಎಂದು ಟಿಪ್ಪು ವೈಸ್ ಪ್ರೆಸಿಡೆಂಟ್ ಆಸಿಫ್ ಸೇಟ್ ಹೇಳಿಕೆ ನೀಡಿದ್ದಾರೆ.
ಮಂಡ್ಯ: ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ (Jamia mosque) ಶೇ.100ರಷ್ಟು ಮಸೀದಿಯೇ ಎಂದು ಟಿಪ್ಪು ವೈಸ್ ಪ್ರೆಸಿಡೆಂಟ್ ಆಸಿಫ್ ಸೇಟ್ ಹೇಳಿಕೆ ನೀಡಿದ್ದಾರೆ. ಜಾಮಿಯಾ ಮಸೀದಿ ಬಳಿ ಮಾತನಾಡಿದ ಅವರು, ಮಸೀದಿ ಇರುವ ಜಾಗ ವಕ್ಫ್ ಬೋರ್ಡ್ಗೆ ಸೇರಿದ್ದಾಗಿದೆ. ಇದರ ನಿರ್ವಹಣೆಯನ್ನ ಎಎಸ್ಐ ಮಾಡುತ್ತಿದೆ. ಟಿಪ್ಪು ವಕ್ಫ್ ಬೋರ್ಡ್ ಯಾವಾಗ ಸ್ಥಾಪನೆ ಆಯ್ತೋ ಅಂದಿನಿಂದ ಇದು ವಕ್ಫ್ ಬೋರ್ಡ್ ಆಸ್ತಿಯಾಗಿದೆ. ಟಪ್ಪು ಸ್ವಾತಂತ್ರ್ಯ ಹೋರಾಟಗಾರ ಎಂದು ಟಿಪ್ಪು ಜಾಗವನ್ನೆಲ್ಲ ಆರ್ಕ್ಯಾಲಜಿ ಡಿಪಾರ್ಟ್ಮೆಂಟ್ ಅವರು ನಿರ್ವಹಣೆಗೆ ಪಡೆದಿದೆ ಎಂದರು.