ತುಮಕೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಕೇಸ್ ಪ್ರಕರಣದಲ್ಲಿ ಕೇಳಿಬಂದಿದ್ದ ನರೇಶ್ ಗೌಡಗೆ ಯುವ ಕಾಂಗ್ರೆಸ್ ಮುಖಂಡ ಎಂಬ ಪಟ್ಟಕಟ್ಟಿ ಹೂವಿನ ಮಳೆ ಸುರಿಸಿ ಅದ್ದೂರಿಯಾಗಿ ಸ್ವಾಗತಿಸಿದ ಘಟನೆ ತುಮಕೂರಿನಲ್ಲಿ ನಡೆದಿದೆ.

ಶಿರಾದ ಭುವನಳ್ಳಿ ನರೇಶ್ ಗೌಡ ಹುಟ್ಟೂರು. ಸಿಡಿ ಪ್ರಕರಣದಲ್ಲಿ ಭಾಗಿಯಾಗಿದ್ದ ನರೇಶ್ ಗೌಡ ತಲೆಮರೆಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಸ್ವಗ್ರಾಮಕ್ಕೆ ಬಂದಿದ್ದಾರೆ. ನರೇಶ್ ಗೌಡ ಗ್ರಾಮಕ್ಕೆ ಎಂಟ್ರಿಯಾಗುತ್ತಿದ್ದಂತೆ ಗ್ರಾಮಸ್ಥರಿಂದ ಅದ್ದೂರಿ ಸ್ವಾಗತ ದೊರೆತಿದೆ. ಇದನ್ನೂ ಓದಿ: ಸಿಡಿ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ, ಯಾವುದೇ ದುಡ್ಡು ತೆಗೆದುಕೊಂಡಿಲ್ಲ – ನರೇಶ್‌ ಗೌಡ

ಭುವನಹಳ್ಳಿಯಲ್ಲಿ ತಳಿರು ತೋರಟ ಕಟ್ಟಿ, ಪಟಾಕಿ ಸಿಡಿಸಿ, ಯುವ ಕಾಂಗ್ರೆಸ್ ಮುಖಂಡ ಎಂದು ಬ್ಯಾನರ್ ಹಾಕಲಾಗಿದೆ. ಈ ಬ್ಯಾನರ್ ನಲ್ಲಿ ಕಾಂಗ್ರೆಸ್ ಚಿಹ್ನೆ ಜೊತೆಗೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಪ್ರಮುಖರ ಭಾವಚಿತ್ರ ಬಳಸಿಕೊಳ್ಳಲಾಗಿದೆ.

The post ಜಾರಕಿಹೊಳಿ ಸಿಡಿ ಕೇಸ್ – ನರೇಶ್ ಗೌಡಗೆ ಯುವ ಕಾಂಗ್ರೆಸ್ ಮುಖಂಡ ಪಟ್ಟ appeared first on Public TV.

Source: publictv.in

Source link