ಜಾರಿ ನಿರ್ದೇಶನಾಲಯ
ಬೆಂಗಳೂರು: ಜಾರಿ ನಿರ್ದೇಶನಾಲಯದ ವಲಯ ಜಂಟಿ ನಿರ್ದೇಶಕ ರಮಣ ಗುಪ್ತಾ ವರ್ಗಾವಣೆ ಮಾಡಲಾಗಿದೆ. ಬೆಂಗಳೂರು ಮತ್ತು ಗೋವಾ ಇಡಿ ವಲಯದ ಜಂಟಿ ನಿರ್ದೇಶಕ ರಮಣ ಗುಪ್ತಾ ವರ್ಗಾವಣೆಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ರಮಣ ಗುಪ್ತಾ ಸ್ಥಾನಕ್ಕೆ ಮನೀಶ್ ಗೋದಾರ ನೇಮಕ ಮಾಡಲಾಗಿದೆ. ಮನೀಶ್ ಗೋದಾರ ಬೆಂಗಳೂರು ಇಡಿ ವಲಯ ಜಂಟಿ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಮೂವರು ವಲಯ ಜಂಟಿ ಆಯುಕ್ತರನ್ನು ವರ್ಗಾವಣೆ ಮಾಡಲಾಗಿದೆ. ಮೂವರು ವಲಯ ಜಂಟಿ ಆಯುಕ್ತರನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ. ಅದರಂತೆ, ಯಲಹಂಕ ವಲಯ ಜಂಟಿ ಆಯುಕ್ತ ಡಾ.ಡಿ. ಆರ್ ಅಶೋಕ್, ಪೂರ್ವ ವಲಯ ಜಂಟಿ ಆಯುಕ್ತೆ ಕೆ.ಆರ್. ಪಲ್ಲವಿ, ದಕ್ಷಿಣ ವಲಯ ಜಂಟಿ ಆಯುಕ್ತ ವೀರಭದ್ರಸ್ವಾಮಿ ವರ್ಗಾವಣೆ ಮಾಡಲಾಗಿದೆ.
ಕೆ.ಆರ್. ಪಲ್ಲವಿ, ವೀರಭದ್ರಸ್ವಾಮಿ ಮಾತೃ ಇಲಾಖೆಗೆ ವಾಪಸ್ ಆಗಿದ್ದಾರೆ. ಪೌರಾಡಳಿತ ಇಲಾಖೆಗೆ ಕೆ.ಆರ್. ಪಲ್ಲವಿ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗೆ ವೀರಭದ್ರಸ್ವಾಮಿ ವಾಪಸ್ ಆಗಿದ್ದಾರೆ. ಬಿಬಿಎಂಪಿ ಪೂರ್ವ ವಲಯ ಜಂಟಿ ಆಯುಕ್ತರಾಗಿ ಆರ್. ಶಿಲ್ಪಾ, ಯಲಹಂಕ ವಲಯ ಜಂಟಿ ಆಯುಕ್ತರಾಗಿ ಪಿ.ವಿ. ಪೂರ್ಣಿಮಾ, ದಕ್ಷಿಣ ವಲಯ ಜಂಟಿ ಆಯುಕ್ತರಾಗಿ ಡಾ. ಜಗದೀಶ್ ನಾಯಕ್ ನೇಮಕಗೊಂಡಿದ್ದಾರೆ.
ಇದನ್ನೂ ಓದಿ: Bengaluru: ವಿಕ್ರಂ ಇನ್ವೆಸ್ಟ್ಮೆಂಟ್ ವಂಚನೆ ಪ್ರಕರಣ; ಇಡಿಯಿಂದ 35.70 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ
ಇದನ್ನೂ ಓದಿ: ‘ನಾನು ಬಿಜೆಪಿ ಸಂಸದನಾದ್ದರಿಂದ ನನ್ನ ಮೇಲೆ ಇಡಿ ದಾಳಿಯಾಗದು’; ಸಂಜಯ್ ಪಾಟೀಲ್ ವಿವಾದಾತ್ಮಕ ಹೇಳಿಕೆ