ಜಾಲಿ ಟ್ರಿಪ್​​ನಲ್ಲಿ ಮೊಗ್ಗಿನ ಚಲುವೆ; ಶುಭಾ ಪೂಂಜಾ ಮದ್ವೆ ಯಾವಾಗ ಗೊತ್ತಾ..?


ಕನ್ನಡದ ಮುದ್ದು ಬಬ್ಲಿ ಬಬ್ಲಿ ನಟಿ ಶುಭಾ ಪೂಂಜಾ. ಬಿಗ್ಬಾಸ್​ ಸೀಸನ್​ 8 ಮೂಲಕ ಜನರ ಮನಸ್ಸನ್ನ ಗೆದ್ದ ಚಲುವೆ. ಶುಭಾ ಅವರು ಸಪ್ತಪದಿ ತುಳಿಯಲು ಸಜ್ಜಾಗಿರುವುದು ಗೊತ್ತಿರುವ ಮಾಹಿತಿ. ಸದ್ಯ ಶುಭ ತಮ್ಮ ಮದುವೆಯ ಶುಭ ಮೂಹರ್ತದ ಕುರಿತು ಮಾತ್ನಾಡಿದ್ದು, ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

ಬಹು ಕಾಲದ ಗೆಳೆಯ ಸುಮಂತ್​ ಅವರ ಜೊತೆ ಹಸೆಮಣೆ ಏರಲು ಸಜ್ಜಾಗಿರುವ ಮೊಗ್ಗಿನ ಚಲುವೆ ಮೊನ್ನೆ ಮೊನ್ನೆಯಷ್ಟೇ ರಾಜಾ-ರಾಣಿ ಗ್ರ್ಯಾಂಡ್​ ಫಿನಾಲೆಗೆ ಬಂದಿದ್ದರು. ಅಷ್ಟೇಯಲ್ಲ ಪ್ರೀತಿಯ ಚಿನ್ನಿಬಾಂಬ್​​ ಬಗ್ಗೆ ಮನಸಾರೆ ಮಾತ್ನಾಡಿ, ರೋಮ್ಯಾಂಟಿಕ್​ ಹಾಡಿಗೆ ಹೆಜ್ಜೆ ಕೂಡ ಹಾಕಿದ್ರು.

ಸದ್ಯ ಮದುವೆ ತಯಾರಿಯಲ್ಲಿರುವ ಈ ಮುದ್ದಾದ ಜೋಡಿ ಡಿಸೆಂಬರ್​ನಲ್ಲಿ ಮದುವೆಯ ಬಂಧನದಲ್ಲಿ ಸೆರೆಯಾಗುತ್ತಿದ್ದಾರೆ. ಈ ಬಗ್ಗೆ ನ್ಯೂಸ್​ ಫರ್ಸ್ಟ್​ ಜೊತೆ ಮಾತ್ನಾಡಿದ ಶುಭಾ. ಈ ವರ್ಷದ ಅಂತ್ಯದಲ್ಲಿ ಅಂದ್ರೇ ಡಿಸೆಂಬರ್​​ನಲ್ಲಿ ಮದುವೆ ಪಿಕ್ಸ್​ ಆಗಿದ್ದು, ಡೇಟ್​ ಇನ್ನು ಫೈನಲ್​ ಮಾಡಿಲ್ಲ ಅಂದ್ರು.​​

ಇನ್ನೂ ಅದ್ಧೂರಿ ಮದುವೆ ತಯಾರಿಯಲ್ಲಿರುವ ಈ ಜೋಡಿ ತಮ್ಮ ಹೊಸ ಬಾಳಿನ ಪಯಣಕ್ಕೂ ಮುನ್ನ ಶಿರಸಿ ಮಾರಿಕಾಂಬ ಕ್ಷೇತ್ರಕ್ಕೆ ಭೇಟಿ ನೀಡಿ, ದೇವಿಯ ಆಶೀರ್ವಾದ ಪಡೆದಿದ್ದಾರೆ. ಶುಭಾ, ಸುಮಂತ್ ಜಾಲಿ ಟ್ರಿಪ್​ ಎಂಜಾಯ್​ ಮಾಡುತ್ತಿದ್ದು, ​ಮಜಾಭಾರತ ಖ್ಯಾತಿಯ ರಾಘು, ಮಂಜು ಪಾವಗಡ ಕೂಡ ಜೊತೆಗೊಡಿದ್ದಾರೆ. ಶಿರಿಸಿ ಮಾರಿಕಾಂಬ ತಾಯಿ ಆಶೀರ್ವಾದ ಪಡೆದು ಯಾಣಗೆ ಪ್ರಯಾಣ ಬೆಳಸಿದ ಶುಭಾ ಆ್ಯಂಡ್ ಫ್ರೆಂಡ್ಸ್​ ಅಲ್ಲಿಂದ ಕುಮಾಟ, ಗೋಕರ್ಣ, ಹುಮ್ಚಾ ಮಠಕ್ಕೆ ಭೇಟಿ ನೀಡಿ. ಪ್ರಕೃತಿ ಮಡಿಲಲ್ಲಿ ಸಮಯ ಕಳೆದಿದ್ದಾರೆ.

ಒಟ್ಟಿನಲ್ಲಿ ನಟಿ ಶುಭಾ ಬದುಕಲ್ಲಿ ಸದ್ಯದಲ್ಲಿಯೇ ಗಟ್ಟಿಮೇಳ ಮೊಳಗಲಿದ್ದು, ಮದುವೆಯ ಶುಭ ಮೂಹರ್ತದ ಬಗ್ಗೆ ಸದ್ಯದಲ್ಲಿಯೇ ತಿಳಿಸಲಿದ್ದಾರೆ.

News First Live Kannada


Leave a Reply

Your email address will not be published. Required fields are marked *