ಜಾಲಿ ಟ್ರಿಪ್​​ ಮೂಡ್​​ನಲ್ಲಿ ಮಿಸ್ಟರ್ & ಮಿಸಸ್ ರಾಮಾಚಾರಿ- ಯಶ್​-ರಾಧಿಕಾ ದಂಪತಿ ಹೋಗಿದ್ದೇಲ್ಲಿ ಗೊತ್ತಾ..?

ನಂದ ಗೋಕುಲಾ ಸೀರಿಯಲ್ ಕಾಲ್ ದಿಂದ ಇವತ್ತಿನವರೆಗೂ ಯಶ್ ಏಳಿಗೆ ಎಲ್ಲಾ ಮೆಟ್ಟಿಲ ಜೊತೆ ಜೊತೆಯಲ್ಲೂ ನಿಂತಿದ್ದಾರೆ ಸ್ಯಾಂಡಲ್ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್. ಯಶ್ ಎಲ್ಲೋ ಅಲ್ಲಿ ರಾಧಿಕಾ.. ನಂದ ಗೋಕುಲಾ ಸಿರಿಯಲ್ ನಿಂದ ಹಿಡಿದು ಮೊಗ್ಗಿನ ಮನಸು , ಡ್ರಾಮಾ , ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ , ಸಂತು ಸ್ಟ್ರೈಟ್ ಫಾರ್ವರ್ಡ್ ತನಕ ಒಂದೇ ಸ್ಕ್ರೀನ್ನಲ್ಲಿ ಯಶ್ ಮತ್ತು ರಾಧಿಕಾ ಜೊತೆಯಾಗಿ ಹಿತವಾಗಿ ಪ್ರೇಕ್ಷಕರನ್ನ ರಂಜಿಸಿದ್ದಾರೆ.

ಈಗ್ಯಾಕೆ ಈ ವಿಚಾರವನ್ನ ಹೇಳ್ತಿದ್ದಿವಿ ಅಂದ್ರೆ ರಾಕಿಂಗ್ ಸ್ಟಾರ್ ದಂಪತಿಗಳು ದೂರದ ದುಬೈ ನಗರದಲ್ಲಿ ಟ್ರಿಪ್ ಹೊಡೆಯುತ್ತಿದ್ದಾರೆ. ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿಗೆ ದುಬೈ ನಗರದಲ್ಲಿ ಗ್ರ್ಯಾಂಡ್ ವೆಲ್ ಕಮ್ ಸಿಕ್ತಿದೆ.

ಮೊನ್ನೆ ಮೊನ್ನೆ ಮುಂಬೈ ನಗರದಲ್ಲಿ ರಾಕಿ ಭಾಯ್ ಕಂಡು ಕಂಗೊಳಿಸಿದ್ರು. ಆದರೆ ನಿನ್ನೆ ರಾತ್ರಿಯಿಂದ ಅರಬ್ ದೇಶದಲ್ಲಿ ಕಾಣಸಿಗುತ್ತಿದ್ದಾರೆ. ಕೋವಿಡ್ ಲಾಕ್ ಡೌನ್ ಕಾರಣ ಪತ್ನಿ ಜೊತೆ ಎಲ್ಲಿಯೂ ಸುತ್ತಾಡಲು ಆಗದೇ ಇರೋ ಕಾರಣ ಮಕ್ಕಳನ್ನ ಮನೆಯಲ್ಲಿ ಬಿಟ್ಟು ಒಂದು ಜಾಲಿ ಟ್ರಿಪ್ ಅನ್ನ ರಾಕಿಂಗ್ ಗಂಡ್ ಹೆಂಡ್ತಿ ಮಾಡ್ತೌವ್ರೆ.

ಎರಡು ಲಾಕ್ ಡೌನ್ ನಂತರ ಸೆಲೆಬ್ರಿಟಿಗಳು ಮಾಲ್ಡಿವ್ಸ್ ಬೀಚ್ ನಲ್ಲಿ ಓಡಾಡೋದು ಸದ್ಯದ ಟ್ರೆಂಡು.. ಆದ್ರೆ ರಾಕಿಂಗ್ ದಂಪತಿ ದುಬೈ ನಗರದಲ್ಲಿ ಓಡಾಡ್ತಿರೋದು ವಿಶೇಷ.. ಜೊತೆಗೆ ದುಬೈ ನಗರದಲ್ಲಿ ಅಷ್ಟಾಗಿ ಕೊರೊನಾ ಆಂತಕವಿಲ್ಲ.. ಇನ್ ಎರಡ್ಮೂರು ದಿನಗಳಲ್ಲಿ ವಾಪಸ್ ಇಂಡಿಯಾಕ್ಕೆ ಬರಲಿದೆ ಯಶ್ -ರಾಧಿಕಾ ದಂಪತಿ.

News First Live Kannada

Leave a comment

Your email address will not be published. Required fields are marked *