ಜಾಲಿ ಮೂಡ್​ನಲ್ಲಿ ಬ್ಯುಸಿಯಾದ ಸೀರಿಯಲ್​ ತಾರೆಯರು

ಸದ್ಯ ನಮ್ಮ ಕನ್ನಡದ ಸೆಲೆಬ್ರಿಟಿಗಳು ಒಂದಲ್ಲಾ ಒಂದು ಪ್ರಾಜೆಕ್ಟ್​ ಅಂತಾ ಫುಲ್​ ಬ್ಯುಸಿಯಾಗಿದ್ದಾರೆ. ಈ ಬ್ಯುಸಿ ಶೆಡ್ಯೂಲ್​ನಲ್ಲಿ ಸಖತ್​ ಸ್ಟ್ರೆಸ್​ನಿಂದ ಕೂಡಿರುವ ಈ ಸ್ಟಾರ್ಸ್ ಕೋವಿಡ್​ ಕಾರಣದಿಂದ ರಿಲ್ಯಾಕ್ಸ್​ಗೋಸ್ಕರ ಎಲ್ಲಿಯೂ ಟ್ರಿಪ್​ ಹೋಗಲು ಆಗದೆ ಸಖತ್​ ಬೇಜಾರಾಗಿದ್ರು.

 

ಆದ್ರೆ ಇದೀಗ ಕೋವಿಡ್​ ಕೇಸ್​ಗಳು ಕಡಿಮೆಯಾಗಿದ್ದು, ಆಲ್​ಮೋಸ್ಟ್​ ಎಲ್ಲಾ ಟೂರಿಸ್ಟ್ ಪ್ಲೇಸ್​ಗಳಿಗೂ ಪರ್ಮಿಷನ್​ ಸಿಕ್ಕಿದೆ. ಹಾಗಾಗಿ ಸೆಲೆಬ್ರಿಟಿಗಳು ಟ್ರಿಪ್​ನಲ್ಲಿ ಸಖತ್​ ಬ್ಯುಸಿಯಾಗಿದ್ದಾರೆ.. ಮೊನ್ನೆ ಮೊನ್ನೆಯಷ್ಟೇ ನಟಿ ದೀಪಿಕಾ ದಾಸ್​ ಮಡಿಕೇರಿ ತಮಿಳು​ನಾಡಿಗೆ ಟ್ರಿಪ್​ ಹೋಗಿ ಸಖತ್​ ಎಂಜಾಯ್​ ಮಾಡಿದ್ರು. ಆ ಬಗ್ಗೆ ನಾವು ನಿಮಗೆ ತಿಳಿಸಿದ್ವಿ.

ಇದೀಗ ಕನ್ನಡದ ಮತ್ತಿಬ್ಬರು ನಟ ನಟಿ ಅವರವರ ಫ್ಯಾಮಿಲಿ ಜೊತೆ ಟ್ರಿಪ್​ನಲ್ಲಿ ಮಸ್ತಿ ಮಾಡ್ತಿದ್ದಾರೆ. ಸದ್ಯ ಪ್ರವಾಸ ಹೋಗಿರೋರು ಮತ್ಯಾರೂ ಅಲ್ಲ.. ನಟ ಸ್ಕಂದ ಅಶೋಕ್​ ಫ್ಯಾಮಿಲಿ ಹಾಗೂ ನಟಿ ಕಾವ್ಯಾ ಗೌಡ ಮನೆಯವರು. ಸ್ಕಂದ ಇತ್ತೀಚೆಗಷ್ಟೆ ಸತ್ಯಾ ಟೀಮ್​ ಸೇರ್ಪಡೆ​ ಆಗಿದ್ದು, ವಿಭಿನ್ನ ಪಾತ್ರದ ಮೂಲಕ ಪ್ರೇಕ್ಷಕರನ್ನ ರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಶೂಟಿಂಗ್​ನಿಂದ ಕೊಂಚ ಬ್ರೇಕ್​ ತೆಗೆದುಕೊಂಡು ಚಿಕ್ಕಮಗಳೂರಿಗೆ ಹೋಗಿದ್ದಾರೆ.

ಸ್ಕಂದ ಮೂಲತಃ ಚಿಕ್ಕಮಗಳೂರಿನವರು. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದು.. ಬಿಡುವಿದ್ದಾಗ ಹುಟ್ಟೂರಿಗೆ ಹೋಗ್ತಾ ಇರ್ತಾರೆ. ಹಾಗೆಯೇ ಈ ಬಾರಿಯೂ ಸಿಕ್ಕ ಬ್ರೇಕ್​ನ ಮಲೆನಾಡಿನ ತಮ್ಮ ಮನೆಯಲ್ಲಿ ಕಳೆಯುತ್ತಿದ್ದಾರೆ. ಮತ್ತೊಂದು ಮುಖ್ಯ ವಿಷ್ಯ ಅಂದ್ರೆ ಬೆಂಗಳೂರಿನಲ್ಲಿ ಎಂತಹ ದೊಡ್ಡ ಕೆಲಸವನ್ನು ಮಾಡ್ತಾಯಿದ್ರೂ ಮನೆಗೆ ಹೋದಾಗ ಅಲ್ಲಿಯ ಒಂದಿಷ್ಟು ಕೆಲಸವನ್ನು ಮಕ್ಕಳು ಮಾಡ್ತಾರೆ. ಅದರಂತೆ ಕಾಫಿ ತೋಟದ ಓನರ್​ ಆಗಿರುವ ಸ್ಕಂದ್​ ತಮ್ಮ ತೋಟದ ಚಿಕ್ಕ ಪುಟ್ಟ ಕೆಲಸ ಮಾಡಿದ್ದಾರೆ. ಜೊತೆಗೆ ಹೊಸದಾಗಿ ಖರೀದಿ ಮಾಡಿರುವ ವುಡ್​ ಕಟ್ಟರ್​ ನಿಂದ, ಮರ ಕಟ್​ ಮಾಡುವ ಮೂಲಕ ಇನೋಗ್ರೇಟ್​ ಮಾಡಿದ್ದಾರೆ. ಆ ವೀಡಿಯೊವನ್ನು ಇನ್​ಸ್ಟಾ ಪೇಜ್​ನಲ್ಲಿ ಪೋಸ್ಟ್​ ಮಾಡಿದ್ದು. for inauguration of any machine that I own ಅಂತಾ ಕೂಡ ಬರೆದುಕೊಂಡಿದ್ದಾರೆ..

ಇನ್ನು ನಟಿ ಕಾವ್ಯ ಗೌಡ ಕೂಡ ಅವರ ಕುಟುಂಬದವರ ಜೊತೆ ಟ್ರಿಪ್​ ಹೋಗಿದ್ದಾರೆ. ಕಾವ್ಯಾ ಆಗಾಗ ಟ್ರಿಪ್​ ಹೋಗ್ತಾನೆ ಇರ್ತಾರೆ. ಈ ಬಾರಿ ಮೈಸೂರಿನ ಕಬಿನಿಗೆ ಹೋಗಿದ್ದು. ಅಲ್ಲಿ ಕಬಿನಿ ಬ್ಯಾಕ್​ವಾಟರ್​ನಲ್ಲಿ ಬೋಟಿಂಗ್​ನ ಸಕತ್​ ಎಂಜಾಯ್​ ಮಾಡಿದ್ದಾರೆ.. ಹಾಗೂ ವೈಲ್ಡ್​ಲೈಫ್​ ಸಫಾರಿ, ಸೈಕಲಿಂಗ್​. ನೇಚರ್​ ವ್ಯೂವ್​ ಹೀಗೆ ಪ್ರತಿಯೊಂದನ್ನೂ ಎಂಜಾಯ್​ ಮಾಡಿದ್ದಾರೆ.. ಸದ್ಯ ಆ ಪೋಟೊಗಳನ್ನು ಇನ್​ಸ್ಟಾಗ್ರಾಮ್​ ಪೋಸ್ಟ್​ ಮಾಡಿದ್ದು enjoying the wildlife .. don’t Forget to see black panther ಅಂತಾ ಬರೆದಿದ್ದಾರೆ. ಅವರ ಪೋಸ್ಟ್​ಗೆ ಕಮೆಂಟ್​ಗಳ ಸುರಿಮಳೆಯೇ ಹರಿದು ಬಂದಿದೆ.. ಒಟ್ನಲ್ಲಿ ಇಷ್ಟುದಿನ ಬ್ಯುಸಿ ಇದ್ದ ತಾರೆಯರು ಸದ್ಯ ಟ್ರಿಪ್​ನ ಮಸ್ತ್​ ಎಂಜಾಯ್​ ಮಾಡ್ತಾಯಿದ್ದಾರೆ.

The post ಜಾಲಿ ಮೂಡ್​ನಲ್ಲಿ ಬ್ಯುಸಿಯಾದ ಸೀರಿಯಲ್​ ತಾರೆಯರು appeared first on News First Kannada.

News First Live Kannada

Leave a comment

Your email address will not be published. Required fields are marked *