ಜಾಹೀರಾತಿನಲ್ಲಿ ಮೋದಿಗೆ ಅವಮಾನ? ಟ್ವಿಟರ್​​ನಲ್ಲಿ ಕ್ಯಾಡ್​ಬರಿ ಬಹಿಷ್ಕಾರಕ್ಕೆ ಕರೆ – Twitter users claim ad has link with PM Narendra Modi Boycott Cadbury trending on Twitter


ಪ್ರಧಾನಿ ನರೇಂದ್ರ ಮೋದಿ ಅವರ ತಂದೆಯ ಹೆಸರನ್ನು ಲೇವಡಿ ಮಾಡುವುದಕ್ಕೆ ಇದನ್ನು ಈ ರೀತಿ ಬಳಸಲಾಗಿದೆ ಎಂದು ಅವರು ಹೇಳಿದ್ದಾರೆ..

ಜಾಹೀರಾತಿನಲ್ಲಿ ಮೋದಿಗೆ ಅವಮಾನ? ಟ್ವಿಟರ್​​ನಲ್ಲಿ ಕ್ಯಾಡ್​ಬರಿ ಬಹಿಷ್ಕಾರಕ್ಕೆ ಕರೆ

ಕ್ಯಾಡ್​​ಬರಿ ಜಾಹೀರಾತು

Boycott Cadbury ಭಾನುವಾರ ಟ್ವಿಟರ್‌ನಲ್ಲಿ (Twitter) ಟ್ರೆಂಡಿಂಗ್ ಆಗಿದೆ. ಕ್ಯಾಡ್​​ಬರಿ (Cadbury) ಉತ್ಪನ್ನಗಳಲ್ಲಿ ‘ಗೋಮಾಂಸ’ ಬಳಸಲಾಗುತ್ತಿದೆ ಎಂಬ ವದಂತಿ ಜತೆಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ಕಂಪನಿಯ ಇತ್ತೀಚಿನ ದೀಪಾವಳಿ ಜಾಹೀರಾತನ್ನು ಗುರಿಯಾಗಿಸಿಕೊಂಡಿದ್ದಾರೆ. ವಿಎಚ್‌ಪಿ ನಾಯಕಿ ಸಾಧ್ವಿ ಪ್ರಾಚಿ ಕ್ಯಾಡ್​​ಬರಿ ಜಾಹೀರಾತನ್ನು ಹಂಚಿಕೊಂಡಿದ್ದು ಇದರಲ್ಲಿ ಬಡ ದೀಪ ಮಾರಾಟಗಾರನ ಹೆಸರು ‘ದಾಮೋದರ್’ ಎಂದು ಬಳಸುವುದನ್ನು ಆಕ್ಷೇಪಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ತಂದೆಯ ಹೆಸರನ್ನು ಲೇವಡಿ ಮಾಡುವುದಕ್ಕೆ ಇದನ್ನು ಈ ರೀತಿ ಬಳಸಲಾಗಿದೆ ಎಂದು ಅವರು ಹೇಳಿದ್ದಾರೆ. “ಚಾಯ್‌ವಾಲೆ ಕೆ ಬಾಪ್ ದಿಯೇವಾಲಾ” ಎಂದು ಸಾಧ್ವಿ ಪ್ರಾಚಿ ಟ್ವೀಟ್ ಮಾಡಿದ್ದು, ಭಾರತದಲ್ಲಿ ಕ್ಯಾಡ್​​ಬರಿ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಅನೇಕರು ಟ್ವೀಟ್ ಮಾಡಲು ಪ್ರಾರಂಭಿಸಿದರು.

ಕ್ಯಾಡ್​​ಬರಿ ವಿರುದ್ಧ ಭಾರತೀಯ ಟ್ವಿಟರ್ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದು ಇದು ಮೊದಲೇನೂ ಇಲ್ಲ. 2021 ರಲ್ಲಿ ಕ್ಯಾಡ್​​ಬರಿ ನಾನ್ ವೆಜ್ ಎಂದು, ಇದೇ ರೀತಿಯ ಬಹಿಷ್ಕಾರದ ಕರೆಯನ್ನು ನೀಡಲಾಯಿತು. ಆದರೆ ಭಾರತದಲ್ಲಿನ ತನ್ನ ಎಲ್ಲಾ ಉತ್ಪನ್ನಗಳು 100% ಸಸ್ಯಾಹಾರಿ, ಪ್ಯಾಕೆಟ್ ಮೇಲಿರುವ ಹಸಿರು ಚುಕ್ಕಿ ಅದನ್ನು ತೋರಿಸುತ್ತದೆ ಎಂದು ಪ್ರಸ್ತುತ ಕಂಪನಿ ಹೇಳಿಕೆ ನೀಡಿತ್ತು.

‘Boycott Cadbury’ ಟ್ರೆಂಡ್ ಹುಟ್ಟು ಹಾಕಿದ ಟ್ವಿಟರ್ ಬಳಕೆದಾರರು ಆಸ್ಟ್ರೇಲಿಯಾದ ಕ್ಯಾಡ್​​ಬರಿ ವೆಬ್‌ಸೈಟ್‌ನ ಉತ್ಪನ್ನ ವಿವರಣೆ ಪುಟದ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ, ದಯವಿಟ್ಟು ಗಮನಿಸಿ, ನಮ್ಮ ಯಾವುದೇ ಆಸ್ಟ್ರೇಲಿಯನ್ ಉತ್ಪನ್ನಗಳು ಪದಾರ್ಥಗಳಲ್ಲಿ ಜೆಲಾಟಿನ್ ಹೊಂದಿದ್ದರೆ, ನಾವು ಬಳಸುವ ಜೆಲಾಟಿನ್ ಹಲಾಲ್ ಪ್ರಮಾಣೀಕರಿಸಲ್ಪಟ್ಟಿದೆ ಮತ್ತು ಗೋಮಾಂಸದಿಂದ ಪಡೆಯಲಾಗಿದೆ ಎಂದು ಬರೆದಿದೆ.

ಗೋಮಾಂಸ ಆರೋಪದ ಸತ್ಯವೇನು?
ಕ್ಯಾಡ್​​ಬರಿ ಉತ್ಪನ್ನಗಳಲ್ಲಿ ಗೋಮಾಂಸವಿದೆ ಎಂದು ಹೇಳುವ ವೈರಲ್ ಸ್ಕ್ರೀನ್‌ಶಾಟ್ ಭಾರತದಲ್ಲ. ಈ ಹಿಂದೆ ಕ್ಯಾಡ್​​ಬರಿ ಡೈರಿ ಮಿಲ್ಕ್ ಅನ್ನು ತಯಾರಿಸುವ ಕ್ಯಾಡ್​​ಬರಿ, ಮೊಂಡೆಲೆಜ್ ಇಂಡಿಯಾ ವಿರುದ್ಧ ಇದೇ ರೀತಿಯ ಆರೋಪ ಮಾಡಿದಾಗ ಭಾರತೀಯ ಉತ್ಪನ್ನಗಳು 100% ಸಸ್ಯಾಹಾರಿಗಳಾಗಿವೆ ಎಂದು ಕಂಪನಿ ಹೇಳಿತ್ತು.

ತಾಜಾ ಸುದ್ದಿ

TV9 Kannada


Leave a Reply

Your email address will not be published.