ಬೆಳಗಾವಿ; ಕೇಂದ್ರ ಸಚಿವರಾಗಿದ್ದ ದಿವಂಗತ ಸುರೇಶ್ ಅಂಗಡಿ ಅವರ ನಿಧನದಿಂದ ತೆರವಾಗಿದ್ದ ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಅವರ ಪತ್ನಿ ಮಂಗಳಾ ಅಂಗಡಿ ಜಯಭೇರಿ ಬಾರಿಸಿದ್ದಾರೆ.

ಇಂದು ನಡೆದ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳು ಹಾಗೂ ಒಂದು ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಮತ ಎಣಿಕೆ ಪ್ರಾರಂಭವಾದಾಗಿನಿಂದಲೂ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಹಾಗೂ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ನಡುವೆ ಭಾರೀ ಪೈಪೋಟಿ ಶುರುವಾಯ್ತು. ಒಂದೊಂದು ಸುತ್ತಿಗೂ ಇಬ್ಬರೂ ಅಭ್ಯರ್ಥಿಗಳ ನಡುವೆ ಹಾವು-ಏಣಿ ಆಟ ನಡೆಯಿತು.

ಒಟ್ಟು 88 ಸುತ್ತುಗಳ ಮತ ಎಣಿಕೆ ನಂತರ ಅಂತಿಮ ಫಲಿತಾಂಶ ಹೊರಬಿದ್ದಿದ್ದು ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಗೆಲುವು ಸಾಧಿಸಿದ್ದಾರೆ.

The post ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಕೊನೆಗೂ ಕಪ್ ನಮ್ದೇ ಎಂದ ಮಂಗಳಾ ಅಂಗಡಿ; ಬಿಜೆಪಿ ಜಯಭೇರಿ appeared first on News First Kannada.

Source: newsfirstlive.com

Source link