‘ಜಿಮ್​ಗೆ ಹೋಗೋದ್ರಿಂದ ಸಾವು ಸಂಭವಿಸುತ್ತೆ ಅನ್ನೋದು ತಪ್ಪು’: ನಟ ನೆನಪಿರಲಿ ಪ್ರೇಮ್​ | Premam Poojyam actor Nenapirali Prem talks about Puneeth Rajkumar and Gym


‘ಜಿಮ್​ಗೆ ಹೋಗೋದ್ರಿಂದ ಸಾವು ಸಂಭವಿಸುತ್ತೆ ಅನ್ನೋದು ತಪ್ಪು’: ನಟ ನೆನಪಿರಲಿ ಪ್ರೇಮ್​

ಪುನೀತ್​ ರಾಜ್​ಕುಮಾರ್​, ನೆನಪಿರಲಿ ಪ್ರೇಮ್

ಪುನೀತ್​ ರಾಜ್​ಕುಮಾರ್​ ನಿಧನದ ಬಳಿಕ ಸಾಕಷ್ಟು ಯುವಕರು ಜಿಮ್​ಗೆ ಹೋಗುವುದನ್ನು ನಿಲ್ಲಿಸಿದ್ದಾರೆ. ಹೃದಯಾಘಾತಕ್ಕೂ ಜಿಮ್​ಗೂ ಸಂಬಂಧ ಇದೆ ಎಂದು ಕೆಲವರು ಭಾವಿಸಿದ್ದಾರೆ. ಆ ಕುರಿತು ನಟ ನೆನಪಿರಲಿ ಪ್ರೇಮ್​ ಮಾತನಾಡಿದ್ದಾರೆ. ‘ಜಿಮ್​ಗೆ ಹೋಗೋದ್ರಿಂದ ಸಾವು ಸಂಭವಿಸುತ್ತೆ ಅನ್ನೋದು ತಪ್ಪು. ಅದೇ ಟೈಮ್​ನಲ್ಲಿ ಓವರ್​​ ಆಗಿ ಏನೇ ಮಾಡಿದರೂ ಆರೋಗ್ಯದಲ್ಲಿ ವ್ಯತ್ಯಾಸ ಆಗುತ್ತದೆ. ಒತ್ತಾಯಪೂರ್ವಕವಾಗಿ ಹಾಗೆ ಮಾಡಿದರೆ ಅಪಾಯದ ಸಾಧ್ಯತೆ ಇರುತ್ತದೆ. ಜಿಮ್​​ಗೆ ಹೋಗುವುದರಿಂದ ಆ ರೀತಿ ಆಗುತ್ತೆ ಎನ್ನುವುದು ಸುಳ್ಳು. ಲಕ್ಷಾಂತರ ಜನ ಜಿಮ್​ ನಂಬಿ ಬದುಕುತ್ತಿದ್ದಾರೆ’ ಎಂದು ಪ್ರೇಮ್​ ಹೇಳಿದ್ದಾರೆ.

‘ಜಿಮ್​ಗೆ ಹೋಗುವುದರಿಂದ ಅನೇಕರು ಆರೋಗ್ಯ ಕಾಪಾಡಿಕೊಂಡಿದ್ದಾರೆ. ಯಾವುದೇ ಆದ್ರೂ ಹಂತಹಂತವಾಗಿ ಮಾಡಿಕೊಂಡು ಹೋಗ್ಬೇಕು. ಕೆಲವರು ಯಾವುದೋ ಒಂದು ವಿಡಿಯೋ ನೋಡಿ ವರ್ಕೌಟ್ ಮಾಡುತ್ತಾರೆ. ಒಂದೇ ದಿನದಲ್ಲಿ ಫಿಟ್ ಆಗಬೇಕು, ತೂಕ ಇಳಿಸಬೇಕೆಂದು ಕಸರತ್ತು ಮಾಡ್ತಾರೆ. ತುಂಬಾನೇ ವರ್ಕೌಟ್​ ಮಾಡಿದಾಗ ಹೀಗೆ ಆಗುವುದು ಸಾಮಾನ್ಯ’ ಎಂಬುದು ಪ್ರೇಮ್​ ಅಭಿಪ್ರಾಯ.

‘ಪುನೀತ್ ನನ್ನ ಆತ್ಮೀಯ ಗೆಳೆಯ. ಫ್ಯಾಮಿಲಿ ಫ್ರೆಂಡ್​ ಆಗಿದ್ದರು. ನನ್ನ ಬಗ್ಗೆ, ನಮ್ಮ ಮಕ್ಕಳ ಬಗ್ಗೆ ಅವರಿಗೆ ಕಾಳಜಿಯಿತ್ತು. ಸಿಕ್ಕಾಗ ಹೊಟ್ಟೆ ತುಂಬಾ ಊಟ ಮಾಡುತ್ತಿದ್ದೆವು. ಮಾತಾಡುತ್ತಿದ್ದೆವು. ಅಪ್ಪು ಸರ್ ನಿಧನರಾದಾಗ ನನ್ನ ಪುತ್ರಿ ನೋಡಬೇಕೆಂದು ಹೇಳಿದ್ದಳು. ತುಂಬಾ ಜನರಿದ್ದಾರೆ ಎಂದು ಹೇಳಿದಾಗ ಊಟ ಬಿಟ್ಟು ಮಲಗಿದ್ದಳು. ಮರುದಿನ ಮನೆಯವರೆಲ್ಲರನ್ನೂ ಕರೆದೊಯ್ದು ಅಂತಿಮ ದರ್ಶನ ಮಾಡಿಸಿದೆ. ಯಾಕಮ್ಮ ಇಷ್ಟೊಂದು ಹಠ ಮಾಡಿದೆ ಎಂದು ಮಗಳನ್ನು ಕೇಳಿದೆ. ಎಷ್ಟೇ ಜನರ ನಡುವೆ ಇದ್ದರೂ ನನ್ನನ್ನು ಗುರುತಿಸಿ ಮಾತಾಡುತ್ತಿದ್ರು, ನನ್ನನ್ನು ಗುರುತಿಸಿ ಕರೆದು ಮಾತನಾಡಿಸುತ್ತಿದ್ದರು ಅಂತ ಮಗಳು ಹೇಳಿದಳು. ನಮ್ಮ ಮತ್ತು ಅವರ ಕುಟುಂಬದ ನಡುವೆ ಅಂತಹ ಬಾಂಧವ್ಯವಿತ್ತು’ ಎಂದಿದ್ದಾರೆ ಪ್ರೇಮ್​.

ಇದನ್ನೂ ಓದಿ:

‘ಸಮಾಜ ಸೇವೆ ಮಾಡಿದ ಅಪ್ಪು​ ಯಾವ ದೇವರಿಗೂ ಕಮ್ಮಿ ಇಲ್ಲ’; ಸಮಾಧಿ ಬಳಿ ಮದುವೆ ಆಗಲು ಬಂದ ಪ್ರೇಮಿಗಳ ಮಾತು

ಪುನೀತ್​ ಸಮಾಧಿಗೆ ಪ್ರತಿದಿನ 20 ಸಾವಿರ ಮಂದಿ ಭೇಟಿ; ಕಂಠೀರವ ಸ್ಟುಡಿಯೋದಲ್ಲಿ ಈಗ ಹೇಗಿದೆ ಪರಿಸ್ಥಿತಿ?

TV9 Kannada


Leave a Reply

Your email address will not be published. Required fields are marked *