ಜಿಮ್ ಮಾಡುತ್ತಿದ್ದ ವೇಳೆ ಹಾಸ್ಯ ನಟ ರಾಜು ಶ್ರೀವಾತ್ಸವಗೆ ಹೃದಯಾಘಾತ; ಆಸ್ಪತ್ರೆಗೆ ದಾಖಲು | Hindi Comedy Actor Raju Srivastava got Heart Attack while doing gym at Delhi


Raju Srivastava: ದಕ್ಷಿಣ ದೆಹಲಿಯಲ್ಲಿರುವ ಜಿಮ್​ನಲ್ಲಿ ರಾಜು ಅವರು ವರ್ಕೌಟ್ ಮಾಡುತ್ತಿದ್ದರು. ಅವರಿಗೆ ಏನೋ ಸರಿ ಇಲ್ಲ ಎನಿಸಿದೆ. ಆ ಸಂದರ್ಭದಲ್ಲೇ ರಾಜು ನೆಲಕ್ಕೆ ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಹಿಂದಿ ಚಿತ್ರರಂಗದಲ್ಲಿ ಹಾಸ್ಯ ಪಾತ್ರ ಹಾಗೂ ಪೋಷಕ ಪಾತ್ರಗಳ ಮೂಲಕ ಗಮನ ಸೆಳೆದ ನಟ ರಾಜು ಶ್ರೀವಾತ್ಸವ (Raju Srivastava) ಅವರಿಗೆ ಇಂದು (ಆಗಸ್ಟ್ 10) ಹೃದಯಾಘಾತ ಆಗಿದೆ. ಅವರು ಜಿಮ್​ನಲ್ಲಿ ವರ್ಕೌಟ್ ಮಾಡುತ್ತಿದ್ದರು. ಈ ವೇಳೆ ಅವರಿಗೆ ಸಣ್ಣ ಪ್ರಮಾಣದಲ್ಲಿ ಹೃದಯಾಘಾತ ಉಂಟಾಗಿದೆ. ಅವರನ್ನು ದೆಹಲಿಯ ಎಐಐಎಂಎಸ್​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರು ಚೇತರಿಕೆ ಕಾಣುತ್ತಿದ್ದಾರೆ ಎಂದು ತಂಡದವರು ತಿಳಿಸಿದ್ದಾರೆ. ಈ ಬೆಳವಣಿಗೆಯಿಂದ ರಾಜು ಫ್ಯಾನ್ಸ್ ವಲಯದಲ್ಲಿ ಆತಂಕ ಮನೆ ಮಾಡಿದೆ.

‘ರಾಜು ಅವರಿಗೆ ಹೃದಯಾಘಾತ ಆಗಿರುವುದು ನಿಜ. ಜಿಮ್​ನಲ್ಲಿ ಅವರು ಕಸರತ್ತು ನಡೆಸುತ್ತಿದ್ದರು. ಅವರು ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ. ಯಾವುದೇ ಆತಂಕ ಬೇಡ ಎಂದು’ ಅವರ ತಂಡದವರು ಈ ಬೆಳವಣಿಗೆಯನ್ನು ಖಚಿತಪಡಿಸಿದ್ದಾರೆ.

ದಕ್ಷಿಣ ದೆಹಲಿಯಲ್ಲಿರುವ ಜಿಮ್​ನಲ್ಲಿ ರಾಜು ಅವರು ವರ್ಕೌಟ್ ಮಾಡುತ್ತಿದ್ದರು. ಅವರಿಗೆ ಏನೋ ಸರಿ ಇಲ್ಲ ಎನಿಸಿದೆ. ಆ ಸಂದರ್ಭದಲ್ಲೇ ರಾಜು ನೆಲಕ್ಕೆ ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅವರು ಬೇಗ ಗುಣಮುಖರಾಗಲಿ ಎಂದು ಫ್ಯಾನ್ಸ್ ಕೋರುತ್ತಿದ್ದಾರೆ. ಇತ್ತೀಚೆಗೆ ಹಲವು ನಟರಿಗೆ ಹೃದಯಾಘಾತವಾಗಿದೆ. ಇದೇ ಸಂದರ್ಭದಲ್ಲಿ ರಾಜು ಅವರಿಗೂ ಹಾರ್ಟ್​ ಅಟ್ಯಾಕ್ ಆಗಿದ್ದು ಸಾಕಷ್ಟು ಆತಂಕ ಮೂಡಿಸಿದೆ.

TV9 Kannada


Leave a Reply

Your email address will not be published. Required fields are marked *