ಜಿಲೆಟಿನ್​ ಬಳಸಿ ಸ್ಫೋಟಕ್ಕೆ ಯತ್ನಿಸಿದವರು ಪೊಲೀಸ್​ ಬಲೆಗೆ

ಜಿಲೆಟಿನ್​ ಬಳಸಿ ಸ್ಫೋಟಕ್ಕೆ ಯತ್ನಿಸಿದವರು ಪೊಲೀಸ್​ ಬಲೆಗೆ

ವಿಜಯಪುರ: ಅಪಾರ ಪ್ರಮಾಣದ ಜಿಲೆಟಿನ್​ ಸಂಗ್ರಹಿಸಿ ಹೊಂಡದ ಸ್ಪೋಟಕ್ಕೆ ಯತ್ನಿಸಿ ಪೊಲೀಸರಿಗೆ ಸಿಕ್ಕಿ ಬಿದ್ದ ಘಟನೆ ಇಂಡಿ ತಾಲೂಕಿನ ಸೋನಕನಹಳ್ಳಿಯಲ್ಲಿ ನಡೆದಿದೆ.

ಸಿದ್ರಾಯ್ ಮೇತ್ರಿ ಎಂಬ ರೈತನ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆಂದು 96 ಹೋಲ್ ಹೊಡೆದು ಜಿಲೆಟಿನ್ ಕಡ್ಡಿ ಮತ್ತು ಬೂಸ್ಟರ್ಸ್ ತುಂಬಿ ಸ್ಪೋಟಕ್ಕೆ ಯತ್ನಿಸಲಾಗಿದೆ ಎನ್ನಲಾಗಿದೆ.

ವಿಜಯಪುರದ ಸಾಯಿ ಸ್ಟೋನ್ ಕ್ರಶರ್‌ನ ಅಶೋಕ ಬಂಡಿ ಎಂಬಾತ ಸಿದ್ರಾಯ್ ಮೇತ್ರಿ ಎಂಬ ರೈತನ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆಂದು 96 ಹೋಲ್ ಹೊಡೆದು ಜಿಲೆಟಿನ್ ಕಡ್ಡಿ ಮತ್ತು ಬೂಸ್ಟರ್ಸ್ ತುಂಬಿ ಸ್ಪೋಟಕ್ಕೆ ಯತ್ನಿಸಿದ್ದರು ಎನ್ನಲಾಗಿದೆ.

ಡೆಟೋನೆಟರ್ ಮೂಲಕ ಸ್ಪೋಟಕ್ಕೆ ತಯಾರಿ ನಡೆಸಿದ್ದಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಸ್ಪೋಟಕ್ಕೆ ಯತ್ನಿಸಿದ ಅಶೋಕ ಬಂಡಿ ಯನ್ನು ಬಂಧಿಸಿದ್ದು ಜಮೀನಿನ ಮಾಲೀಕ ಸಿದ್ರಾಯ್ ಮೇತ್ರಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇನ್ನು ಬಂಧಿತರ ಮೇಲೆ ಸ್ಪೋಟ ಪ್ರತಿಬಂಧಕ ಕಾಯ್ದೆ 4, 5, 5(B) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಪರಾರಿಯಾದ ಜಮೀನು ಮಾಲಿಕನಿಗೆ ಪೊಲೀಸರು ಶೋಧ ನಡೆಸಿದ್ದಾರೆ ಎಂದು ನ್ಯೂಸ್​ಫಸ್ಟ್​ಗೆ ಮಾಹಿತಿ ಲಭ್ಯವಾಗಿದೆ.

The post ಜಿಲೆಟಿನ್​ ಬಳಸಿ ಸ್ಫೋಟಕ್ಕೆ ಯತ್ನಿಸಿದವರು ಪೊಲೀಸ್​ ಬಲೆಗೆ appeared first on News First Kannada.

Source: newsfirstlive.com

Source link