ಚಾಮರಾಜನಗರ: ಜಿಲ್ಲೆಯಲ್ಲಿ ಮೇಲಿಂದ ಮೇಲೆ ಆಗ್ತಾಯಿದೆ ಎಡವಟ್ಟು. ಮೊನ್ನೆ ಜಿಲ್ಲಾಸ್ಪತ್ರೆ ಆಯ್ತು, ಇಂದು ತಾಲೂಕು ಆಸ್ಪತ್ರೆಯ ಸರದಿ. ಜಿಲ್ಲೆಯ ಗುಂಡ್ಲುಪೇಟೆ ತಾಲೂಕು ಆಸ್ಪತ್ರೆಯಲ್ಲಿ ನಾಲ್ಕು ಜನ ಸೋಂಕಿತರ ಪ್ರಾಣ ಪಕ್ಷಿ ಹಾರಿ ಹೋಗಿದೆ.

ಮೂವರು ಕೋವಿಡ್​ ಪೇಶೆಂಟ್​, ಒಬ್ಬರು ಸಿಎಸ್​ಎಲ್​ ಪೇಶೆಂಟ್​ ಸಾವನ್ನಪ್ಪಿದ್ದಾರೆ. ಆ ಮೂವರು ಕೊರೊನಾ ರೋಗಿಗಳ ಪೈಕಿ ಒಬ್ಬರು ಹೋಂ ಐಸೋಲೇಷನ್​ನಲ್ಲಿದ್ದರು. ತಡವಾಗಿ ಆಸ್ಪತ್ರೆಗೆ ದಾಖಲಿಸಿದ್ದರಿಂದ ಈ ಸಾವು ಸಂಭವಿಸಿದೆ ಅಂತ ಗುಂಡ್ಲುಪೇಟೆ ಟಿಎಚ್ಒ ಡಾ.ರವಿ ಮಾಹಿತಿ ನೀಡಿದ್ದಾರೆ. ಒಟ್ಟಾರೆ ಗುಂಡ್ಲುಪೇಟೆ ತಾಲೂಕು ಆಸ್ಪತ್ರೆಯಲ್ಲಿ ಮೃತಪಟ್ಟವರ ಸಂಖ್ಯೆ11 ಕ್ಕೆ ಏರಿಕೆಯಾಗಿದ್ದು, ತಾಲೂಕಿನಾದ್ಯಂತ ಭಯದ ವಾತಾವರಣ ಸೃಷ್ಟಿಯಾಗಿದೆ.

The post ಜಿಲ್ಲಾಸ್ಪತ್ರೆ ಆಯ್ತು, ಇಂದು ತಾಲೂಕು ಆಸ್ಪತ್ರೆ ಸರದಿ: ಗುಂಡ್ಲುಪೇಟೆಯಲ್ಲಿ 4 ಸೋಂಕಿತರು ಸಾವು appeared first on News First Kannada.

Source: newsfirstlive.com

Source link