ಚಾಮರಾಜನಗರ: ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಅಗತ್ಯ ಮಾಹಿತಿ ಪಡೆದುಕೊಂಡಿದ್ದೇವೆ. ನಿನ್ನೆ ಸುಧಾಕರ್ ಅವರು ಭೇಟಿ ನೀಡಿ ಸುಳ್ಳು ಹೇಳಿಕೆ ಕೊಟ್ಟಿದ್ದಾರೆ. ವಸ್ತುಸ್ಥಿತಿಯನ್ನು ಮರೆಮಾಚಿದ್ದಾರೆ. ಆಕ್ಸಿಜನ್​ ಕೊರತೆಯಿಂದ 28 ಮಂದಿ ಸಾವನ್ನಪ್ಪಿದ್ದಾರೆ ಎಂದು ಸಿದ್ದರಾಮಯ್ಯ ಜಿಲ್ಲಾಸ್ಪತ್ರೆ ಭೇಟಿ ಬಳಿಕ ತಿಳಿಸಿದ್ದಾರೆ.

ಆಸ್ಪತ್ರೆಗೆ ಪ್ರತಿದಿನ 350 ಸಿಲಿಂಡರ್​ ಆಕ್ಸಿಜನ್​ ಬೇಕು, ಆದರೆ ಭಾನುವಾರ 126 ಸಿಲಿಂಡರ್ ಮಾತ್ರ ಪೂರೈಕೆ ಮಾಡಿದ್ದಾರೆ ಅಷ್ಟೇ. ಆದ್ದರಿಂದ ಆಕ್ಸಿಜನ್​ ಬೇಕಾದ ರೋಗಿಗಳಿಗೆ ಆಕ್ಸಿಜನ್​ ಪೂರೈಕೆ ಆಗಿಲ್ಲ. ಆದ್ದರಿಂದಲೇ 24 ಮಂದಿ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಡೀನ್​​ ನನ್ನ ಎದುರು ಒಪ್ಪಿಕೊಂಡಿದ್ದಾರೆ.

ರೋಗಿಗಳ ಜವಾಬ್ದಾರಿ ವಹಿಸಿಕೊಂಡಿದ್ದ ಮಂತ್ರಿ 3 ಮಾತ್ರ ಸಾವನ್ನಪ್ಪಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದಾರೆ. ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಕೊರೊನಾ ಎರಡನೇ ಅಲೆಗೆ ಸಿದ್ಧತೆ ಮಾಡಿಕೊಂಡಿಲ್ಲ. ಆದ್ದರಿಂದಲೇ ಸಾಕಷ್ಟು ಸಾವುಗಳು ಸಂಭವಿಸುತ್ತಿವೆ. ಆದ್ದರಿಂದ ಸತ್ಯ ಏನು ಎಂಬುದು ಎಲ್ಲರಿಗೂ ತಿಳಿಯಲು ಸ್ವತಂತ್ರ್ಯ ಸಂಸ್ಥೆ ಮೂಲಕ ತನಿಖೆ ನಡೆಸಬೇಕಿದೆ.

ಮೈಸೂರು ಜಿಲ್ಲಾಧಿಕಾರಿಗಳ ಮೇಲೂ ಅಧಿಕಾರಿಗಳು ಆರೋಪ ಮಾಡಿದ್ದಾರೆ. ಮಂಡ್ಯ, ಮೈಸೂರು, ಚಾಮರಾಜನಗರ ಹಾಗೂ ಮಡಿಕೇರಿಗೂ ಕೊಡಬೇಕು ಅಲ್ವಾ.. ಆದರೆ ಇಂದು ಡಿಸಿ ಬೇರೆಯದ್ದೇ ಹೇಳಿಕೆ ನೀಡಿದ್ದಾರೆ. ಇದಕ್ಕೆ ಚಾಮರಾಜನಗರ ಡಿಸಿ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೈಸೂರು ಡಿಸಿಯೇ ಒಂದು ಹೇಳ್ತಾರೆ, ಚಾಮರಾಜನಗರ ಡಿಸಿಯೇ ಒಂದು ಹೇಳ್ತಾರೆ, ಆರೋಗ್ಯ ಸಚಿವರೇ ಒಂದು ಹೇಳಿಕೆ ನೀಡ್ತಾರೆ.

ತಜ್ಞರು ಹೇಳಿದ ಮೇಲೂ ಸಚಿವರು ಸಿದ್ಧತೆ ಮಾಡಿಕೊಳ್ಳದೆ ಜನರ ಸಾವಿಗೆ ಕಾರಣರಾಗಿದ್ದಾರೆ. ಆದ್ದರಿಂದಲೇ ಸಿಎಂ, ಆರೋಗ್ಯ ಸಚಿವ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾನ ಮರ್ಯಾದೆ ಇದ್ದರೆ ರಾಜೀನಾಮೆ ನೀಡಬೇಕು. ಉಸ್ತುವಾರಿ ಸಚಿವರು ಕೊರೊನಾ ಎರಡನೇ ಅಲೆ ಆರಂಭವಾದ ಮೇಲೆ ಸಭೆಯೇ ಮಾಡಿಲ್ಲ. ಸಚಿವರು ಬೆಂಗಳೂರಿನಲ್ಲಿ ಕುಳಿತು ಮಜಾ ಮಾಡೋಕೆ ಇದ್ದರಾ..? ಮೈಸೂರು ಡಿಸಿ ಅಂತಹ ನಿರ್ಧಾರ ಮಾಡಿದ್ದರೆ ಅವರ ಮೇಲೂ ಕ್ರಮ ಆಗಬೇಕು. ಸತ್ತವರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

The post ಜಿಲ್ಲಾ ಉಸ್ತುವಾರಿ ಸಚಿವರು ಬೆಂಗಳೂರಿನಲ್ಲಿ ಮಜಾ ಮಾಡೋದಕ್ಕೆ ಇದ್ದಾರಾ..?- ಸಿದ್ದರಾಮಯ್ಯ appeared first on News First Kannada.

Source: newsfirstlive.com

Source link