ಬೆಂಗಳೂರು:  ಜಿಲ್ಲೆಗಳ ಕೋವಿಡ್ ಆಸ್ಪತ್ರೆಗಳಲ್ಲಿ ಶೇ. 10ರಷ್ಟು ಬೆಡ್​ಗಳನ್ನ ವೈದ್ಯರು, ವೈದ್ಯೇತರ ಸಿಬ್ಬಂದಿ ಹಾಗೂ ಅವರ ಕುಟುಂಬದವರಿಗೆ ಮೀಸಲಿಡುವಂತೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

ಕೊರೊನಾ ಎರಡನೇ ‌ಅಲೆಯ ತೀವ್ರತೆ ದಿನದಿನಕ್ಕೂ ಏರುತ್ತಿದ್ದು, ವೈದ್ಯರು ನರ್ಸ್​ಗಳು ಹಾಗೂ ಇತರೆ ಆರೋಗ್ಯ ಸಿಬ್ಬಂದಿ ಹೆಚ್ಚಾಗಿ ಸೋಂಕಿಗೆ ತುತ್ತಾಗ್ತಿದ್ದಾರೆ. ಹೀಗಾಗಿ ಸಾಂಕ್ರಮಿಕ‌ ರೋಗ ತಡೆಯಲು ಹಾಗೂ ನಿಯಂತ್ರಣ ಮಾಡುವ ಉದ್ದೇಶದಿಂದ ಜಿಲ್ಲೆಗಳಲ್ಲಿ ಸ್ಥಾಪಿಸಲಾಗಿರೊ ನಿಗದಿತ ಕೋವಿಡ್ ಆಸ್ಪತ್ರೆಗಳಲ್ಲಿ ಶೇ. 10 ರಷ್ಟು ಬೆಡ್ ಆರೋಗ್ಯ ಸಿಬ್ಬಂದಿಗೆ ಮೀಸಲಿಡುವಂತೆ ಹೇಳಲಾಗಿದೆ.

ಅರೋಗ್ಯ ಇಲಾಖೆಯಲ್ಲಿ ಕಾರ್ಯನಿರ್ವಹಣೆ ಮಾಡ್ತಿರೋ ವೈದ್ಯರು, ವೈದ್ಯೇತರ ಸಿಬ್ಬಂದಿ ಹಾಗೂ ಅವರ ಕುಟುಂಬದವರಿಗಾಗಿ ಹಾಸಿಗೆಗಳನ್ನ ಕೇಳಲಾಗಿದೆ. ಈ ಸಂಬಂಧ  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕರು ಅದೇಶ ಹೊರಡಿಸಿದ್ದಾರೆ.

The post ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಶೇ. 10ರಷ್ಟು ಬೆಡ್ ವೈದ್ಯರು & ಕುಟುಂಬಸ್ಥರಿಗೆ ಮೀಸಲಿಡುವಂತೆ ಆರೋಗ್ಯ ಇಲಾಖೆ ಆದೇಶ appeared first on News First Kannada.

Source: newsfirstlive.com

Source link