ನವ ದೆಹಲಿ : ಜಿವೋ ಪೋನ್ ಫೀಚರ್ ಫೋನ್ ಸೆಗ್ಮೆಂಟ್ ನಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿದೆ. ದೇಶವನ್ನು 2G ಮುಕ್ತಗೊಳಿಸಲು ಜಿವೋ ಸಂಸ್ಥೆ, ಜಿಯೋ ಫೋನ್ ಬಳಕೆದಾರರಿಗೆ ವಿಶಿಷ್ಟ ಕೊಡುಗೆಯೊಂದನ್ನು ನೀಡುತ್ತಿದೆ.

ಇನ್ನೂ 2G ಫೋನ್ ಬಳಸುವ ಮತ್ತು 4G ಸೇವೆಗೆ ವರ್ಗಾವಣೆಗೊಳ್ಳಲು ಬಯಸುವ ಬಳಕೆದಾರರಿಗೆ ಜಿಯೋ ಈ ವಿಶಿಷ್ಠ ಕೊಡುಗೆ ಜಾರಿಗೊಳಿಸಿದೆ. ಜಿಯೋ ಸಂಸ್ಥೆಯ ಈ ಹೊಸ ಯೋಜನೆ ಮಾರ್ಚ್ 1, 2021ರಿಂದ ಆರಂಭಗೊಳ್ಳುತ್ತಿದ್ದು, ಜಿಯೋ ಫೋನ್ ಜೊತೆಗೆಯೇ ಈ ಕೊಡುಗೆ ಗ್ರಾಹಕರಿಗೆ ಸಿಗಲಿದೆ. ಈ ಕೊಡುಗೆ ದೇಶಾದ್ಯಂತ ರಿಲಯನ್ಸ್ ರಿಟೇಲ್ ಹಾಗೂ ಜಿಯೋ ಮಳಿಗೆಗಳಲ್ಲಿ  ಲಭ್ಯವಿರಲಿದೆ.

ಓದಿ : ಸಿಸಿಬಿ ಪೊಲೀಸರಿಂದ ಕಾರು ಮಾರಾಟ: ನಗರದಲ್ಲಿ ಸಿಐಡಿ ತನಿಖೆ ಆರಂಭ, 4 ಪೊಲೀಸರ ಹೆಸರು ಉಲ್ಲೇಖ

ಜಿವೋ ಫೋನ್ 2021, ಕೊಡುಗೆಗಳೇನು..?

ಹೊಸ ಬಳಕೆದಾರರಿಗೆ ರೂ.1999ರ ಈ ಜಿವೋ ಫೋನ್ ಪ್ಲಾನ್ ಅಡಿ 2 ವರ್ಷಗಳವರೆಗೆ ಹಲವು ಉಚಿತ ಸೌಲಭ್ಯಗಳು ಸಿಗಲಿವೆ. ಹೊಸ ಆಫರ್ ಅಡಿ ಇದೀಗ ಗ್ರಾಹಕರಿಗೆ 24 ತಿಂಗಳ ಅನಿಯಮಿತ ಕಾಲಿಂಗ್, ಅನಿಯಮಿತ ಡೇಟಾ (2GB ಹೈ ಸ್ಪೀಡ್ ಡೇಟಾ) ನೀಡುತ್ತಿದೆ. ಈ ಪ್ಲಾನ್ ವಿಶೇಷತೆ ಎಂದರೆ, ಒಮ್ಮೆ ಗ್ರಾಹಕರು ಈ ಯೋಜನೆಯನ್ನು ತನ್ನದಾಗಿಸಿಕೊಂಡರೆ ಅವರಿಗೆ ಯಾವುದೇ ರೀತಿಯ ರಿಚಾರ್ಚ್ ಮಾಡುವ ಅವಶ್ಯಕತೆ ಇರುವುದಿಲ್ಲ. ಗ್ರಾಹಕರು ಬೇರೆ ನೆಟ್ವರ್ಕ್ ಗಳ ಮೇಲೆ ಇದೆ ಸೌಲಭ್ಯ ಪಡೆಯಲು ಸುಮಾರು 2.5ರಷ್ಟು ಹೆಚ್ಚು ಖರ್ಚು ಮಾಡಬೇಕಾಗಲಿದೆ ಎಂದು ಕಂಪನಿ ಹೇಳಿಕೊಂಡಿದೆ.

ಇನ್ನೊಂದೆಡೆ ಒಂದು ವೇಳೆ ಬಳಕೆದಾರ ರೂ.1999 ರೂ.ಗಳಿಗಿಂತ ಕಡಿಮೆ ಬೆಲೆಯ ರಿಚಾರ್ಜ್ ಮಾಡಿಸಲು ಬಯಸುತ್ತಿದ್ದರೆ, ಅವರು 1499 ರೂ. ರಿಚಾರ್ಜ್ ಸಹ ಮಾಡಿಸಿಕೊಳ್ಳಬಹುದು. ಜಿವೋ ಫೋನ್ 2021 ಈ ಕೊಡುಗೆಯ ಅಡಿ ಜಿಯೋ ಫೋನ್ ಬಳಕೆದಾರರಿಗೆ  ಡಿವೈಸ್ ಹಾಗೂ 12 ತಿಂಗಳು ಅನಿಯಮಿತ ಉಚಿತ ಡೇಟಾ, ಉಚಿತ ಕರೆ ಸೌಲಭ್ಯ ಸಿಗಲಿದೆ. ಅಂದರೆ ನೀವು ಒಂದು ವರ್ಷದವರೆಗೆ ಯಾವುದೇ ರೀತಿಯ ರಿಚಾರ್ಜ್ ಮಾಡಿಸುವ ಅವಶ್ಯಕತೆ ಇಲ್ಲ.

ಓದಿ : ಸಿದ್ದಲಿಂಗೇಶ್ವರ ರಥೋತ್ಸವದ ಮುನ್ನ ಬೋನಿಗೆ ಬಿದ್ದ ಚಿರತೆ: ನಿಟ್ಟುಸಿರು ಬಿಟ್ಟ ಭಕ್ತರು

 

ಗ್ಯಾಜೆಟ್/ಟೆಕ್ – Udayavani – ಉದಯವಾಣಿ
Read More

Leave a comment