ಬೆಂಗಳೂರು: ಸಿಎಂ ಎಸ್.ಎಂ.ಕೃಷ್ಣವರು ಜಿ. ಮಾದೇಗೌಡರನ್ನು ಭೇಟಿಯಾಗಿ ಆರೋಗ್ಯವನ್ನು ವಿಚಾರಿಸಿದ್ದಾರೆ. ಇದನ್ನೂ ಓದಿ: ಮಳೆರಾಯನ ಆಟಕ್ಕೆ ಕೆಂಪಾದ ಮೆಕ್ಕೆಜೋಳ- ಬೆಳೆ ಹಾಳು ಮಾಡಿದ ಅನ್ನದಾತ

ಮಂಡ್ಯ ಜಿಲ್ಲೆಯ ಹಿರಿಯ ರಾಜಕೀಯ ನಾಯಕರು, ಕಾವೇರಿ ಹೋರಾಟಗಾರರು, ಮಾಜಿ ಲೋಕಸಭಾ ಸದಸ್ಯರು ಹಾಗು ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷರಾದ ಶ್ರೀ ಜಿ.ಮಾದೇಗೌಡರವರು ಅನಾರೋಗ್ಯ ದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಅವರನ್ನು ಮಾಜಿ ಮುಖ್ಯ ಮಂತ್ರಿಗಳಾದ ಎಸ್.ಎಂ.ಕೃಷ್ಣ ರವರು ಇಂದು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.

 

ಮಾದೇಗೌಡರೊಂದಿಗೆ ಪ್ರಥಮ ಬಾರಿಗೆ ಶಾಸನಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದ ಎಸ್.ಎಂ.ಕೃಷ್ಣ ರವರು ತಮ್ಮ ಬಹುಕಾಲದ ಒಡನಾಡಿಯ ಆರೋಗ್ಯ ವಿಚಾರಿಸಿ ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸಿದರು. ಇದನ್ನೂ ಓದಿ:  ದೇವಾಲಯದ ಬಳಿ ಮಹಿಳೆ ಶವ ಪತ್ತೆ: ನಿಧಿಗಾಗಿ ಕೊಲೆ ಶಂಕೆ

ತೀವ್ರ ಅನಾರೋಗ್ಯ ದಿಂದ ಕಳೆದ ಹಲವು ದಿನಗಳಿಂದ ಬೆಂಗಳೂರಿನ ವಿಕ್ರಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾದೇಗೌಡರು ಮಂಡ್ಯ ಜಿಲ್ಲೆಯ ರಾಜಕಾರಣದಲ್ಲಿ ಶಾಸನಸಭೆ, ಲೋಕಸಭಾ ಸದಸ್ಯರಾಗಿ, ರೈತ ಪರ ಹೋರಾಟಗಾರರಾಗಿ ಜಿಲ್ಲೆಯ ಅಭಿವೃದ್ಧಿಗೆ ಎಸ್.ಎಂ.ಕೃಷ್ಣ ರವರ ಜೊತೆ ಶ್ರಮಿಸಿದವರು. ಮಂಡ್ಯದಲ್ಲಿ ಗಾಂಧಿ ಭವನ ನಿರ್ಮಿಸಿದ್ದರು, ಎಸ್.ಎಂ.ಕೃಷ್ಣ ರವರ ಭೇಟಿ ಸಮಯದಲ್ಲಿ ಮಾದೇಗೌಡರ ಪುತ್ರ ಮಧುಮಾದೇಗೌಡ ಹಾಜರಿದ್ದರು.

The post ಜಿ. ಮಾದೇಗೌಡರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ ಮಾಜಿ ಸಿಎಂ ಎಸ್.ಎಂ.ಕೃಷ್ಣ appeared first on Public TV.

Source: publictv.in

Source link