ಜೀಪ್-ಆಟೊ ಡಿಕ್ಕಿ ರಭಸಕ್ಕೆ ಬಾವಿಗೆ ಬಿದ್ದ ಜೀಪ್: ಇಬ್ಬರು ಸಾವು, 6 ಮಂದಿಗೆ ಗಾಯ
ಬಳ್ಳಾರಿ: ಜೀಪ್ ಮತ್ತು ಆಟೊ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಸಾವಿಗೀಡಾಗಿದ್ದಾರೆ. 6 ಮಂದಿಗೆ ಗಾಯಗಳಾಗಿವೆ. ಜೀಪ್ ಡ್ರೈವರ್ ಸೇರಿ ಇಬ್ಬರು ಸಾವನ್ನಪ್ಪಿದ್ದಾರೆ. ಡಿಕ್ಕಿಯ ರಭಸಕ್ಕೆ ಜೀಪ್ ತೆರೆದ ಹೊಂಡಕ್ಕೆ ಬಿದ್ದಿದೆ. ಸಂಡೂರು ತಾಲೂಕಿನ ವಡ್ಡು ಗ್ರಾಮದ ಬೈಪಾಸ್ ರಸ್ತೆಯಲ್ಲಿ ನಿನ್ನೆ ಸಂಜೆ ಈ ಘಟನೆ ನಡೆದಿದೆ. ಖಾಸಗಿ ಕಂಪನಿ ನೌಕರ ಸುರ್ಜಿತ್ ಸಿಂಗ್ (51) ಮತ್ತು ವಡ್ಡು ಗ್ರಾಮದ ಅಗಸರ ಅಳ್ಳಪ್ಪ (68) ಮೃತರು.
ಅಪಘಾತದ ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಪೊಲೀಸರು ಭೇಟಿ, ನೀಡಿ ಪರಿಹಾರ ಕಾರ್ಯಗಳಲ್ಲಿ ತೊಡಗಿದ್ದಾರೆ. ಬಾವಿಯಿಂದ ಚಾಲಕನನ್ನು ಹೊರತೆಗೆದು ಪ್ರಾಣ ಉಳಿಸಲು ಹರಸಾಹಸ ಪಡಲಾಗಿದೆ. ಆಟೋದಲ್ಲಿದ್ದ ಐವರಿಗೆ ಗಾಯಗಳಾದ ಹಿನ್ನೆಲೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ತೋರಣಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.