ನವ ದೆಹಲಿ : 7 ಆಸನಗಳ ಎಸ್‌ ಯು ವಿಗೆ ಜೀಪ್ ಕಂಪೆನಿ.. ಜೀಪ್ ಕಮಾಂಡರ್ ಎಂದು ಹೆಸರಿಟ್ಟಿದೆ. ಈ ವರ್ಷದ ಅಂತ್ಯದ ವೇಳೆಗೆ ಈ ಎಸ್‌ ಯು ವಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸುತ್ತದೆ ಎಂದು  ಹೇಳಲಾಗುತ್ತಿದೆ.

ಸದ್ಯ ಬ್ರೆಜಿಲ್ ನಲ್ಲಿ ಪ್ರಾಯೋಗಿಕ ಹಂತದಲ್ಲಿರುವ ಜೀಪ್ ಕಮಾಂಡರ್ ಎಸ್‌ ಯು ವಿಯ ಎರಡು ಎಂಜಿನ್ ಮಾಡೆಲ್‌ ಗಳು , 1.3-ಲೀಟರ್ ಟರ್ಬೊ ಫ್ಲೆಕ್ಸ್ ಮೋಟಾರ್ ಮತ್ತು 2.0 ಲೀಟರ್ ಡೀಸೆಲ್ ಎಂಜಿನ್‌ನಿಂದ ಶಕ್ತಿಯನ್ನು ಹೊಂದಿದೆ. 1.3 ಲೀಟರ್ ಮೋಟರ್ ಗರಿಷ್ಠ 185 ಬಿಹೆಚ್‌ಪಿ ಶಕ್ತಿಯನ್ನು ಉತ್ಪಾದಿಸುತ್ತದೆ ಮತ್ತು 2.0 ಲೀಟರ್ ಎಂಜಿನ್ 203 ಬಿಹೆಚ್‌ಪಿ ಶಕ್ತಿಯನ್ನು ಹೊರಹಾಕುತ್ತದೆ.

ಓದಿ : ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿ, ಜಾಗೃತಿ ಮೂಡಿಸಿದ ತಹಶೀಲ್ದಾರ್‌ ಗೋವಿಂದರಾಜು

ಪ್ರಾಯೋಗಿಕ ಹಂತದಲ್ಲಿ ಸೆರೆಹಿಡಿಯಲಾದ ಚಿತ್ರಗಳು ವಾಹನದ ಬಾನೆಟ್ 2022 ಕಂಪಾಸ್‌ ಗೆ ಹೋಲುತ್ತದೆ. ಎಸ್‌ ಯು ವಿ ಹೊಸ ಫ್ರಂಟ್ ಬಂಪರ್ ಜೊತೆಗೆ ಸೊಗಸಾದ ಆಕಾರದ ಹೆಡ್‌ ಲೈಟ್‌ ಗಳನ್ನು ಸಹ ಹೊಂದಿದೆ. ವಾಹನದ ಮುಂಭಾಗದ ಗ್ರಿಲ್ ಹನಿಕೂಂಬ್ ವಿನ್ಯಾಸವನ್ನು ಹೊಂದಿದೆ ಮತ್ತು ಮುಂಭಾಗದ ಬಂಪರ್ ಎಲ್ ಇಡಿ ಡಿಆರ್‌ ಎಲ್‌ ಮತ್ತು ಆಕ್ಸಿಲಿಯರಿ ಫಾಗ್‌ ಲೈಟ್‌ ಗಳನ್ನು ಸಹ ಹೊಂದಿ ಆಕರ್ಷಕವಾಗಿದೆ.

ಜೀಪ್ ಬಹುನಿರೀಕ್ಷಿತ ಎಸ್‌ ಯು ವಿಯನ್ನು ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಜೊತೆಗೆ 10.25-ಇಂಚಿನ ಟಚ್‌ ಸ್ಕ್ರೀನ್-ಶಕ್ತಗೊಂಡ, ಇನ್ಫೋಟೈನ್‌ ಮೆಂಟ್ ಪರದೆಯೊಂದಿಗೆ ಸಕ್ರಿಯಗೊಳಿಸಿದೆ.

ಜೀಪ್‌  ನ ಏಳು ಆಸನಗಳ ಎಸ್‌ಯುವಿ ಸ್ವಯಂಚಾಲಿತ ಹೈ ಬೀಮ್ ಕಂಟ್ರೋಲ್, ಬ್ಲೈಂಡ್-ಸ್ಪಾಟ್ ಮಾನಿಟರಿಂಗ್ ಸಿಸ್ಟಮ್, ಅಡಾಪ್ಟೀವ್‌ ಸ್ಪೀಡ್ ಕಂಟ್ರೋಲ್ (ಎಸಿಸಿ), ಘರ್ಷಣೆ ಎಚ್ಚರಿಕೆ, ಅರೆ-ಸ್ವಯಂಚಾಲಿತ ಪಾರ್ಕಿಂಗ್, ಲೇನ್ ಬದಲಾವಣೆ ಮೇಲ್ವಿಚಾರಣೆ ಮತ್ತು ಇನ್ನಷ್ಟು ಸೇರಿದಂತೆ ಚಾಲಕ ಸಹಾಯಕ್ಕಾಗಿ ನವ್ಯ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ವರದಿಗಳು ತಿಳಿಸಿವೆ.

ಓದಿ : ಮೂಡುಬಿದಿರೆ : ಕಲ್ಲಮುಂಡ್ಕೂರು ಪಿದ್ಮಲೆಯ ಗುಡ್ಡಗಾಡು ಪ್ರದೇಶದಲ್ಲಿ ಆಕಸ್ಮಿಕ ಬೆಂಕಿ  

ಗ್ಯಾಜೆಟ್/ಟೆಕ್ – Udayavani – ಉದಯವಾಣಿ
Read More

By

Leave a Reply