ಬೆಂಗಳೂರು: ಜೀವನದ ಪಾಸಿಟಿವಿಟಿ ಮೇಲೆ ಬಂದು ಕೊರೊನಾ ಪಾಸಿಟಿವ್ ಹೊಡೆದೊಡಿಸಬೇಕು ಅಂತಾ ರಿಯಲ್ ಸ್ಟಾರ್ ಉಪೇಂದ್ರ ಕರೆ ನೀಡಿದರು.

ಬೇರೆಯವರಿಗಾಗಿ ನಾವು ಜಾಗೃತರಾಗಬೇಕಿದೆ
‘ನಮ್ಮ ಬೆಂಗಳೂರು ನಮ್ಮ ರಕ್ಷಣೆ’ಯಡಿ ನ್ಯೂಸ್​ಫಸ್ಟ್​ ಅಭಿಯಾನ ಶುರುಮಾಡಿದೆ. ಈ ಸಂಬಂಧ ನ್ಯೂಸ್​ಫಸ್ಟ್​ ಜೊತೆ ಮಾತನಾಡಿದ ಉಪೇಂದ್ರ ಅವರು.. ಬೆಂಗಳೂರಲ್ಲಿ ಕೊರೊನಾ ಜಾಸ್ತಿಯಾಗಿದೆ. ಬುದ್ಧಿವಂತರಿರೋ ನಗರದಲ್ಲೇ ಹೀಗೆ ಆಗಿದೆ. ಇನ್ನು, ಅಮಾಯಕರು ಇರುವ ಕಡೆ ಪರಿಸ್ಥಿತಿ ಹೇಗೆ ಇರಬೇಡ ಹೇಳಿ? ನಾವು ನಮಗಲ್ಲದಿದ್ದರೂ ನಮ್ಮ ಮಕ್ಕಳಿಗೋಸ್ಕರ, ನಮ್ಮ ಸುತ್ತಮುತ್ತ ಇರೋರಿಗೋಸ್ಕರವಾದ್ರೂ ಜಾಗೃತರಾಗಬೇಕಿದೆ.

ಇಂತಹ ಅಭಿಯಾನದಲ್ಲಿ ನಾವು ಪಾಲ್ಗೊಳ್ಳಬೇಕು. ಎಲ್ಲಿಯೂ ಕೂಡ ಜನರನ್ನ ಪ್ಯಾನಿಕ್ ಮಾಡುವ ಕೆಲಸ ಆಗಬಾರದು. ಎಲ್ಲರೂ ಧೈರ್ಯವನ್ನ ನೀಡಿದ್ರೆ ಮಾತ್ರ ಕೊರೊನಾದಂತಹ ಮಾರಿಯನ್ನ ಎದುರಿಸಬಹುದು. ನಾನು ಜನರಿಗೆ ಮಾಡುತ್ತಿರುವ ಕೆಲಸ ಮುಂದುವರಿದಿದೆ. ಈ ಲಾಕ್​ಡೌನ್, ಕೊರೊನಾ ಅಲೆ ತಗ್ಗಿದ ನಂತರ ನನ್ನ ಚಾರಿಟೆಬಲ್ ಟ್ರಸ್ಟ್​ನ ಅಕೌಂಟ್​ ಜನರ ಮುಂದೆ ಕೊಡುತ್ತೇನೆ.

ನಾನು ಮಾಡುತ್ತಿರುವ ಈ ಸೇವೆಗೆ ಅದೆಷ್ಟೋ ಸ್ನೇಹಿತರು ಕೈಜೋಡಿಸಿದ್ದಾರೆ. ನನಗೆ ಪರಿಚಯ ಇಲ್ಲದವರೂ ಸಹ ನನ್ನ ಸಹಾಯಹಸ್ತದಲ್ಲಿ ಕೈಜೋಡಿಸಿದ್ದಾರೆ. ಎಷ್ಟೋ ರೈತರು ಬಂದಿದ್ದಾರೆ, ಬೇರೆ ಬೇರೆ ಊರುಗಳಿಂದ ಕರೆ ಮಾಡುತ್ತಿದ್ದಾರೆ ಎಂದರು.

The post ‘ಜೀವನದ ಪಾಸಿಟಿವಿಟಿ ಮೇಲೆ ಬಂದ್ರೆ ಕೊರೊನಾ ಪಾಸಿಟಿವ್ ಫಿನಿಶ್’     appeared first on News First Kannada.

Source: newsfirstlive.com

Source link