ನವದೆಹಲಿ: ತಾಲಿಬಾನ್ ಆಡಳಿತಕ್ಕೆ ಬಂದ ನಂತರ ಅಲ್ಲಿನ ಜನರ ಬದುಕು ತೀರಾ ದುಸ್ತರವಾಗಿದೆ. ಮೊದಲೇ ಸಂಕಷ್ಟದಲ್ಲಿದ್ದ ಅಫ್ಘಾನಿಸ್ತಾನ್ ಜನತೆ ಬಾಣಲೆಯಿಂದ ಜಾರಿ ಬೆಂಕಿಗೆ ಬಿದ್ದಂತಾಗಿದೆ.
ಹೇಗೋ ಜೀವನ ಸಾಗಿಸುತ್ತಿದ್ದ ಅಲ್ಲಿನ ನಾಗರಿಕರು ತಮ್ಮ ಕುಟುಂಬಗಳನ್ನು ರಕ್ಷಿಸಿಕೊಳ್ಳಲು ಮಕ್ಕಳನ್ನೇ ಮಾರಾಟ ಮಾಡ್ತಿದ್ದಾರೆ. ಅಲ್ಲದೇ ತಮ್ಮ ದೇಹದ ಅಂಗಾಂಗಗಳನ್ನು ಮಾರಲು ಮುಂದಾಗಿದ್ದಾರೆ ಅಂತಾ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಕೆಲವು ವರದಿಗಳ ಪ್ರಕಾರ ಒಂದು ಮಗುವಿನ ಬೆಲೆ ಒಂದು ಲಕ್ಷದಿಂದ ಒಂದೂವರೆ ಲಕ್ಷದವರೆಗೆ ಮಾರಾಟ ಮಾಡಲಾಗುತ್ತಿದೆ. ಒಂದು ಮೂತ್ರಪಿಂಡದ ಬೆಲೆ 150,000 ರಿಂದ 220,000 ರೂಪಾಯಿವರೆಗೆ ಮಾರಾಟ ಮಾಡಲಾಗುತ್ತಿದೆ ಎನ್ನಲಾಗಿದೆ.
ಅಫ್ಘಾನ್ನಲ್ಲಿ ನೆಲೆಸಿರುವ ವಲಸಿಗರನ್ನ ಟಾರ್ಗೆಟ್ ಮಾಡಲಾಗುತ್ತಿದೆ. ಬಲವಂತದ ಮೂಲಕ ಮಕ್ಕಳನ್ನ ಮಾರಾಟ ಮಾಡುವುದುಕ್ಕೆ ಹಾಗೂ ಅಂಗಾಗಂಗಳನ್ನ ದಾನ ಮಾಡೋದಕ್ಕೆ ಪ್ರಚೋದನೆ ನೀಡಲಾಗುತ್ತಿದ್ಯಂತೆ.