ಕೋವಿಡ್-19 ಸಾಂಕ್ರಾಮಿಕದ ಆರಂಭದಿಂದ ಈವರೆಗೆ 1,15,000 ಆರೋಗ್ಯ ಸೇವಕರು ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

WHO ಪ್ರಮುಖ ವಾರ್ಷಿಕ ಸಮಾವೇಶದ ಉದ್ಘಾಟನೆಯ ವೇಳೆ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರಾಸ್ ಅದನಾಮ್ ಗೇಬ್ರಿಯೇಸಸ್, ಕೊರೊನಾ ವಿರುದ್ಧದ ಹೋರಾಟದಲ್ಲಿ ಜಗತ್ತಿನಾದ್ಯಂತ ಆರೋಗ್ಯ ಸೇವಕರು ಮಾಡಿರುವ ತ್ಯಾಗಗಳು ಶ್ಲಾಘನೀಯ ಎಂದರು.

ಸತತ 18 ತಿಂಗಳುಗಳಿಂದ ಜಗತ್ತಿನಾದ್ಯಂತದ ಆರೋಗ್ಯ ಸೇವಕರು ಸಾವು-ಬದುಕಿನ ನಡುವೆಯೇ ಕೆಲಸ ನಿರ್ವಹಿಸಿದ್ದಾರೆ. ಅಲ್ಲದೆ ಅಸಂಖ್ಯಾತ ಜೀವಗಳನ್ನು ಉಳಿಸಿದ್ದಾರೆ ಹಾಗೂ ಇತರರನ್ನು ಉಳಿಸಲು ಹೋರಾಡಿದ್ದಾರೆ. ಅವರ ಕಾರ್ಯ ನಿಜಕ್ಕೂ ಸ್ಮರಣೀಯ ಎಂದು ಧನ್ಯವಾದ ತಿಳಿಸಿದರು.

The post ಜೀವರಕ್ಷಕರನ್ನ ಬಲಿ ಪಡೆದ ಕ್ರೂರಿ ಕೊರೊನಾ: ವಿಶ್ವದಾದ್ಯಂತ 1.15 ಲಕ್ಷ ಆರೋಗ್ಯ ಸಿಬ್ಬಂದಿ ಸಾವು appeared first on News First Kannada.

Source: newsfirstlive.com

Source link