ಜೀವೋತ್ತಮ ಪರ್ತಗಾಳಿ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿ ವಿಧಿವಶ

ಜೀವೋತ್ತಮ ಪರ್ತಗಾಳಿ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿ ವಿಧಿವಶ

ಗೋವಾ: ಜೀವೋತ್ತಮ ಪರ್ತಗಾಳಿ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿ ಗೋವಾದಲ್ಲಿ ಇಂದು ಬೆಳಗಿನ ಜಾವ  ವಿಧಿವಶರಾಗಿದ್ದಾರೆ.

77 ವರ್ಷ ವಯಸ್ಸಿನ ಪರ್ತಗಾಳಿ ಶ್ರೀಗಳು, ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಶ್ರೀಗಳು 2010ರ ಚಾತುರ್ಮಾಸ್ಯವನ್ನ ಜಿಲ್ಲೆಯ ಸಿದ್ದಾಪುರದಲ್ಲಿ ನೆರವೇರಿಸಿದ್ದರು. ಶ್ರೀಗಳ 70 ನೇ ವರ್ಷದ ‘ಸಪ್ತತಿ’ ಕಾರ್ಯಕ್ರಮ ಕೂಡ ಸಿದ್ದಾಪುರದಲ್ಲಿ ನಡೆದಿತ್ತು. ಶ್ರೀಗಳು ಅಪಾರ ಶಿಷ್ಯವೃಂದವನ್ನ ಹೊಂದಿದ್ದರು. ಶ್ರೀಗಳನ್ನ ಕಳೆದುಕೊಂಡ ಭಕ್ತರಲ್ಲಿ, ಶಿಷ್ಯವೃಂದದಲ್ಲಿ ದುಃಖ ಮಡುಗಟ್ಟಿದೆ.

ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿಗಳು ವಿಧಿವಶ ಹಿನ್ನೆಲೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

The post ಜೀವೋತ್ತಮ ಪರ್ತಗಾಳಿ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿ ವಿಧಿವಶ appeared first on News First Kannada.

Source: newsfirstlive.com

Source link