ಬೆಂಗಳೂರು: ಪ್ರತಿದಿನ ಒಂದು ಕೋಟಿ‌ ಲಸಿಕೆಗಳನ್ನು ಉಚಿತವಾಗಿ ಜನರಿಗೆ ವಿತರಿಸಬೇಕು ಅಂತಾ ಕಾಂಗ್ರೆಸ್​ ನಿಯೋಗ ಇಂದು ರಾಷ್ಟ್ರಪತಿಗಳಿಗೆ ಮನವಿ ಮಾಡಿತು. ​

ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ಡಿ.ಕೆ.ಶಿವಕುಮಾರ್​ ನೇತೃತ್ವದ ನಿಯೋಗ ಮನವಿ ಸಲ್ಲಿಸಿತು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಡಿಕೆ ಶಿವಕುಮಾರ್​​.. ಜೀವ ಇದ್ದರೆ ಜೀವನ. ಅಂತಹ ಜೀವಕ್ಕಾಗಿ ಇಂದು ಭಿಕ್ಷೆ ಬೇಡ್ತಿದ್ದೇವೆ. ಸರ್ಕಾರದ ಕೈಯಲ್ಲಿ ಸರಿಯಾದ ಯೋಜನೆ ಹಾಕಿಕೊಳ್ಳಲು ಆಗಲಿಲ್ಲ. ನಮ್ಮ ಕಾರ್ಯಕರ್ತರು ಯಾವ ರೀತಿಯ ಸೇವೆ ಮಾಡ್ತಿದ್ದಾರೆ ಎಂದು ನೀವು ಗಮನಿಸಿದ್ದೀರಿ. ನೂರು ಕೋಟಿ ರೂಪಾಯಿ ವ್ಯಾಕ್ಸಿನ್ ಯೋಜನೆಗೆ ಅನುಮತಿ ಕೊಡಿ ಅಂತ ಸಿಎಂಗೆ ಕೇಳಿದರೆ ಕೊಡಲಿಲ್ಲ ಎಂದು ಆರೋಪಿಸಿದರು.

ಅವರು ಅನುಮತಿ ಕೊಟ್ಟಿದ್ದರೆ ನಾವು ಎಲ್ಲ ಪಕ್ಷದವರಿಗೂ ವ್ಯಾಕ್ಸಿನ್ ಕೊಡಿಸುತ್ತಿದ್ದೇವು. ಕೇಂದ್ರ ಸರ್ಕಾರ ಕೂಡ ಎರಡೇ ಕಂಪನಿಗೆ ಮಾತ್ರ ವ್ಯಾಕ್ಸಿನ್​ಗೆ ಅನುಮತಿ ಕೊಟ್ಟಿದೆ. ಜನ, ಸಿಎಂ, ಸಚಿವರಿಗೆ ಯಾವ ರೀತಿ ಬೈಯ್ಯುತ್ತಿದ್ದಾರೆ ಅಂತ ನೋಡಿದ್ದೀರಿ. ನಮ್ಮ ಶಾಸಕ ಶಾಮನೂರು ಶಿವಶಂಕರಪ್ಪನವರ ಕುಟುಂಬದವರು ತಮ್ಮ ಸ್ವಂತ ಹಣದಿಂದ 3 ಲಕ್ಷ ಲಸಿಕೆ ಕೊಂಡುಕೊಂಡು ಇಂದು ಲಸಿಕೆ ಕೊಡಿಸಿದ್ದಾರೆ.

ನಾನೇ ಸಕೆಂಡ್ ಡೋಸ್ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದೇನೆ. ಈ ಬಗ್ಗೆ ನಾನು ರಾಜ್ಯಪಾಲರಿಗೆ ಇಂದು ಮನವಿ ಮಾಡಿದ್ದೇನೆ. ಪ್ರತಿನಿತ್ಯ ಒಂದು ಕೋಟಿ ಜನರಿಗೆ ಉಚಿತವಾಗಿ ಲಸಿಕೆ ಹಾಕಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಜವಾಬ್ದಾರಿ ತೆಗೆದುಕೊಳ್ಳಬೇಕು. ಲಸಿಕೆ ವಿಚಾರದಲ್ಲಿ ನಿಮ್ಮ ಸ್ಟ್ಯಾಟರ್ಜಿ ಸರಿ ಇಲ್ಲ ಅಂತ ಹೇಳಿದ್ದೇವೆ. ನಮ್ಮ ಕೈಯಲ್ಲಿ ಇದನ್ನೆಲ್ಲ ನೋಡಲು ಆಗ್ತಿಲ್ಲ. ದಯವಿಟ್ಟು, ಲಸಿಕೆ ಕೊಡಿ ಜೀವ ಉಳಿಸಿ ಅಂತ ಭಿಕ್ಷೆ ಬೇಡ್ತಿದ್ದೇವೆ ಅಂತ ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ಇಂದು ಮನವಿ ಸಲ್ಲಿಸಿದ್ದಾರೆ.

The post ಜೀವ ಇದ್ದರೆ ಜೀವನ, ಅಂತಹ ಜೀವಕ್ಕಾಗಿ ಇಂದು ಭಿಕ್ಷೆ ಬೇಡ್ತಿದ್ದೇವೆ -ಡಿಕೆಎಸ್ ಹೀಗ್ಯಾಕೆ ಹೇಳಿದ್ರು? appeared first on News First Kannada.

Source: newsfirstlive.com

Source link