ಚಿಕ್ಕಮಗಳೂರು: ಜಿಲ್ಲೆಯ ಖಾಸಗಿ ಆಸ್ಪತ್ರೆ ವೈದ್ಯರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಕರ್ತವ್ಯ ಮುಗಿಸಿ ಮನೆಗೆ ವಾಪಸ್​ ಆಗುತ್ತಿದ್ದಾಗ ಹಲ್ಲೆ ನಡೆಸಲಾಗಿದೆ ಅಂತ ಹೇಳಲಾಗ್ತಿದೆ.

ಜಿಲ್ಲೆಯ, ತರೀಕೆರೆ ಪಟ್ಟಣದ ಕಮರ್ಷಿಯಲ್ ಟ್ಯಾಕ್ಸ್ ಕಚೇರಿ ಬಳಿ ಈ ಘಟನೆ ನಡೆದಿದ್ದು, ವೈದ್ಯ ದೀಪಕ್ ಎಂಬುವವರ ಮೇಲೆ ಲಾಂಗು ಮಚ್ಚುಗಳಿಂದ ಮನಸೋ ಇಚ್ಛೆ ಹಲ್ಲೆ ನಡೆಸಲಾಗಿದೆ.  ಕರ್ತವ್ಯ ಮುಗಿಸಿ ಮನೆಗೆ ಸೈಕಲ್​ನಲ್ಲಿ ಹೊರಟಿದ್ದ ವೈದ್ಯರನ್ನ ಅಟ್ಯಾಕ್ ಮಾಡಿ ರಸ್ತೆಬದಿ ಅವರನ್ನ ಯಾರೋ ಎಸೆದು ಹೋಗಿದ್ದಾರೆ. ರಕ್ತದ ಮಡುವಿನಲ್ಲಿ ಒದ್ದಾಟ ನಡೆಸುತ್ತಿದ್ದ ವೈದ್ಯರ ರಕ್ಷಣೆ ಮಾಡಿದ ಸ್ಥಳೀಯರು, ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಗಾಯಾಳು ವೈದ್ಯರನ್ನ ದಾಖಲಿಸಿದ್ದಾರೆ. ಘಟನೆಯ ಹಿಂದಿನ ಕಾರಣ ಮತ್ತು ಹಲ್ಲೆ ಮಾಡಿದವರ ಕುರಿತ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

The post ಜೀವ ಉಳಿಸೋ ವೈದ್ಯನ ಮೇಲೆ ಲಾಂಗು, ಮಚ್ಚುಗಳಿಂದ ಮಾರಣಾಂತಿಕ ಹಲ್ಲೆ appeared first on News First Kannada.

Source: newsfirstlive.com

Source link