ಜುಲೈನಲ್ಲಿ ಸಿನಿ ಸ್ಟಾರ್​​ಗಳಿಗೆ ಬರ್ತ್​​ಡೇ ಸಂಭ್ರಮ: ‘ನೋ ಸೆಲೆಬ್ರೇಷನ್.. ಓನ್ಲಿ ವರ್ಕಿಂಗ್​’ ಎಂದ ನಟರು

ಜುಲೈನಲ್ಲಿ ಸಿನಿ ಸ್ಟಾರ್​​ಗಳಿಗೆ ಬರ್ತ್​​ಡೇ ಸಂಭ್ರಮ: ‘ನೋ ಸೆಲೆಬ್ರೇಷನ್.. ಓನ್ಲಿ ವರ್ಕಿಂಗ್​’ ಎಂದ ನಟರು

ಕೊರೊನಾ ಎರಡನೇ ಅಲೆಯ ಆಟ ಕೊಂಚ ತಣ್ಣಗಾಗಿದೆ. ಎಲ್ಲಾ ಉದ್ಯಮ ಕ್ಷೇತ್ರಗಳಂತೆ ಸಿನಿಮಾ ಕ್ಷೇತ್ರದಲ್ಲೂ ಬಿರುಸಿನ ಚಟುವಟಿಕೆಗಳು ಪ್ರಾರಂಭವಾಗಿವೆ. ಜುಲೈ ತಿಂಗಳಿನಿಂದ ಮತ್ತೆ ಶೂಟಿಂಗ್ ಕಡೆ ಮುಖ ಮಾಡೋ ಹುರಿಪಿನಲ್ಲಿ ಸ್ಯಾಂಡಲ್​ವುಡ್ ಸಿನಿ ಉದ್ಯಮ ನಿಂತಿದೆ. ಈ ರೈಟ್​​ ಟೈಮ್​ನಲ್ಲೇ ‘ಕಾಯಕವೇ ಕೈಲಾಸ ನೋ ಬರ್ತ್​ಡೇ ಸೆಲಬ್ರೇಷನ್’ ಅಂತಿದ್ದಾರೆ ಸ್ಯಾಂಡಲ್​ವುಡ್ ಸ್ಟಾರ್ಸ್​​​​.

ಜುಲೈ ತಿಂಗಳಲ್ಲಿ ಸಾಕಷ್ಟು ಕನ್ನಡ ಸ್ಟಾರ್​ಗಳ ಬರ್ತ್​ಡೇಗಳಿವೆ. ಆದ್ರೆ ಈ ಬಾರಿ ಯಾವ ಸ್ಟಾರ್ ಬರ್ತ್​​ಡೇನೂ ನಡೆಯೋದು ಅಥವಾ ಆಚರಿಸೋದು ಡೌಟ್. ಈಗಾಗಲೇ ಗೋಲ್ಡನ್ ಸ್ಟಾರ್ ಗಣೇಶ್ ಬರ್ತಡೇ  ಸೆಲಬ್ರೇಷನ್​​ನಿಂದ ಹಿಂದೆ ಸರಿದು ಕೆಲಸದ ಕಡೆ ಮುಖ ಮಾಡಿದ್ದಾರೆ. ಹಾಗಾದ್ರೆ ಯಾವ ಯಾವ ಸ್ಟಾರ್​​ಗಳ ಬರ್ತ್​​ಡೇ ಜುಲೈ ತಿಂಗಳಿನಲ್ಲಿದೆ?

ಗೋಲ್ಡನ್ ಸ್ಟಾರ್ ಗಣೇಶ್ ಅವರ ಬರ್ತ್​ಡೇ ಜುಲೈ 2 ರಂದು ಇದೆ. ಗಣೇಶ್ ಅವರ ನಂತರ ಮತ್ತೊಬ್ಬ ಸ್ಟಾರ್ ಬರ್ತ್​​ಡೇ ಎರಡೇ ದಿನ ಅಂತದಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರದ್ದು. ಜುಲೈ 4 ರಂದು ಪ್ರಜ್ವಲ್ ಬರ್ತ್​ಡೇ ಇದೆ. ಅದೇ ದಿನ ಜಗ್ಗೇಶ್ ಅವರ ಸಹೋದರ ಕಾಮಿಡಿ ಕಿಂಗ್ ಕೋಮಲ್ ಅವರ ಜನ್ಮದಿನವೂ ಕೂಡ ಹೌದು.

ಇನ್ನು ಲೂಸ್ ಮಾದ ಖ್ಯಾತಿಯ ಯೋಗೇಶ್ ಬರ್ತ್​ಡೇ ಜುಲೈ 6 ರಂದು ಇದ್ರೆ ಶ್ರೀನಗರ ಕಿಟ್ಟಿ ಬರ್ತ್​ಡೇ ಜುಲೈ 8 ರಂದು ಇದೆ. ಈ ಯಾವ ನಟರು ಈ ಬಾರಿ ಅಭಿಮಾನಿಗಳ ಜೊತೆ ಬರ್ತ್​ಡೇ ಆಚರಣೆ ಮಾಡಿಕೊಳಲ್ಲ.

ಜುಲೈ ತಿಂಗಳು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಫ್ಯಾನ್ಸ್​​​ಗಳಿಗೆ ಹಬ್ಬ. ಕಾರಣ ಶಿವಣ್ಣನ ಬರ್ತ್​ಡೇ. ಜುಲೈ 12 ರಂದು ಇದೆ. ಕರುನಾಡ ಚಕ್ರವರ್ತಿಗೆ 60 ವರ್ಷ ತುಂಬುತ್ತೆ. ಆದ್ರೆ ಒಂದು ಮಾಹಿತಿ ಪ್ರಕಾರ ಶಿವಣ್ಣ ಈ ಬಾರಿ ಬರ್ತ್​ಡೇ ಆಚರಿಸಿಕೊಳ್ಳೋದು ಡೌಟ್​ ಎನ್ನಲಾಗಿದೆ​​. ಇನೇನು ಕೆಲವೇ ದಿನಗಳಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಶಿವಣ್ಣ ಅವರಿಂದ ಬರಲಿದೆ. ಕಳೆದ ಮೂರು ವರ್ಷಗಳಿಂದ ಶಿವಣ್ಣ ಬರ್ತ್​ಡೇ ಆಚರಿಸಿಕೊಂಡಿಲ್ಲ. ಈ ವರ್ಷ ಸ್ಯಾಂಡಲ್​ವುಡ್​​ನಲ್ಲಿ ಸ್ಟಾರ್ ಸೆಲೆಬ್ರಿಟಿಗಳ ಬರ್ತ್​​ಡೇ ಸೆಲಬ್ರೇಷನ್ ಕಂಡು ಬರೋದು ಕಡಿಮೆ ಅಂತಲೇ ಹೇಳಬಹುದು.

The post ಜುಲೈನಲ್ಲಿ ಸಿನಿ ಸ್ಟಾರ್​​ಗಳಿಗೆ ಬರ್ತ್​​ಡೇ ಸಂಭ್ರಮ: ‘ನೋ ಸೆಲೆಬ್ರೇಷನ್.. ಓನ್ಲಿ ವರ್ಕಿಂಗ್​’ ಎಂದ ನಟರು appeared first on News First Kannada.

Source: newsfirstlive.com

Source link