ಶ್ರೀಲಂಕಾ ವಿರುದ್ಧ ನಡೆಯುವ ಸೀಮಿತ ಓವರ್​ಗಳ ಸರಣಿಯ ವೇಳಾಪಟ್ಟಿ ಪ್ರಕಟಗೊಂಡಿದೆ. ಸಂಪೂರ್ಣ ವೈಟ್​ಬಾಲ್​ ಸ್ಪೆಷಲಿಸ್ಟ್​ಗಳ ತಂಡ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದಲ್ಲಿ ಟೀಮ್ ಇಂಡಿಯಾ 3 ಏಕದಿನ ಹಾಗೂ ಮೂರು ಟಿ20 ಪಂದ್ಯಗಳನ್ನಾಡಲಿದೆ. ಜುಲೈ 13ರಂದು ಆರಂಭಗೊಳ್ಳುವ ಶ್ರೀಲಂಕಾ ಪ್ರವಾಸ ಜುಲೈ 25ಕ್ಕೆ ಅಂತ್ಯಗೊಳ್ಳಲಿದೆ. ವೇಳಾಪಟ್ಟಿಯಂತೆ ಜುಲೈ 13, 16 ಹಾಗೂ 18 ರಂದು ಏಕದಿನ ಪಂದ್ಯಗಳು ನಡೆಯಲಿದ್ದು, ಜುಲೈ 21, 23 ಮತ್ತು 25ರಂದು ಟಿ20 ಪಂದ್ಯಗಳು ನಡೆಯಲಿದೆ. ಈ ಎಲ್ಲಾ ಪಂದ್ಯಗಳಿಗೆ ಯಾವ ಕ್ರೀಡಾಂಗಣ ಆತಿಥ್ಯ ವಹಿಸಲಿದೆ ಎಂಬುದು ಇನ್ನು ಖಾತ್ರಿಯಾಗಿಲ್ಲ. ಆದ್ರೆ, ಮೂಲಗಳ ಪ್ರಕಾರ ಎಲ್ಲ ಪಂದ್ಯಗಳನ್ನ ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ಬಯೋ ಬಬಲ್‌ ಒಳಗೆ ಆಯೋಜಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಸ್ಟಾರ್‌ ಆಟಗಾರರ ಅನುಪಸ್ಥಿತಿಯಲ್ಲಿ ಶಿಖರ್‌ ಧವನ್, ಹಾರ್ದಿಕ್ ಪಾಂಡ್ಯ, ಇಶಾನ್ ಕಿಶಾನ್, ಸೂರ್ಯಕುಮಾರ್ ಯಾದವ್​ ಸೇರಿದಂತೆ ಕೆಲ ಯುವ ಆಟಗಾರರನ್ನ ಲಂಕಾ ಪ್ರವಾಸಕ್ಕೆ ಕಳುಹಿಸಲು ಮುಂದಾಗಿರುವ ಬಿಸಿಸಿಐ, ಇದೇ ತಿಂಗಳಲ್ಲಿ ಟೀಮ್ ಇಂಡಿಯಾವನ್ನ ಪ್ರಕಟಿಸುವ ಸಾಧ್ಯತೆ ಇದೆ.

The post ಜುಲೈ 13ಕ್ಕೆ ಟೀಮ್ ಇಂಡಿಯಾ-ಶ್ರೀಲಂಕಾ ಮೊದಲ ಏಕದಿನ ಪಂದ್ಯ appeared first on News First Kannada.

Source: newsfirstlive.com

Source link