ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​​ ಕುಮಾರ್ ಕಟೀಲ್​ ಅವರು ಮಾತನಾಡಿದ್ದರೆ ಎನ್ನಲಾದ ಆಡಿಯೋ ಭಾರೀ ಚರ್ಚೆಗೆ ಕಾರಣವಾಗಿದೆ. ಸಿಎಂ ಜುಲೈ 26 ರಂದು ಪಕ್ಷ ಶಾಸಕಾಂಗ ಸಭೆ ಕರೆದಿರುವ ಹಿನ್ನೆಲೆಯಲ್ಲಿ, ಅಂದೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿದೆ. ಈ ನಡುವೆ ಜುಲೈ 21ರಂದು ಆರ್​ಎಸ್​ಎಸ್​, ಬಿಜೆಪಿ ಸಮನ್ವಯ ಬೈಠಕ್ ನಡೆಯಲಿದ್ದು. ಈ ವೇಳೆ ರಾಜ್ಯದ ನೂತನ ನೇಮಕ ವಿಚಾರವಾಗಿ ಚರ್ಚೆ ನಡೆಯುವ ಸಾಧ್ಯತೆ ಇದೆ.
ವರ್ಚ್ಯುವಲ್ ಮೂಲಕ ನಡೆಯುವ ಬೈಠಕ್​​​​ನಲ್ಲಿ ದತ್ತಾತ್ರೇಯ ಹೊಸಬಾಳೆ, ಸಿ.ಆರ್. ಮುಕುಂದ್, ಅಮಿತ್ ಶಾ, ಜೆ.ಪಿ. ನಡ್ಡಾ, ಅರುಣ್ ಸಿಂಗ್, ಬಿ.ಎಲ್. ಸಂತೋಷ್ ಹಾಗೂ ಅರುಣ್ ಕುಮಾರ್ ಭಾಗಿಯಾಗಲಿದ್ದಾರೆ. ಈ ವೇಳೆ ಕರ್ನಾಟಕ ಸಿಎಂ ಬದಲಾವಣೆ ವಿಚಾರವಾಗಿ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದ್ದು, ನೂತನ ಸಿಎಂ ನೇಮಕ ವಿಚಾರವಾಗಿ ಆರ್​ಎಸ್​ಎಸ್ ನಾಯಕರ ಸಲಹೆ ಪಡೆಯಲು ಬಿಜೆಪಿ ಮುಂದಾಗಿದೆ.
ಇತ್ತ ಸಿಎಂ ರೇಸ್‌ನಲ್ಲಿ ಬಿಜೆಪಿಯ ನಾಲ್ವರು ನಾಯಕರು ನಾ ಮುಂದು ತಾ ಮುಂದು ಅಂತ ಸಿದ್ಧರಾಗಿದ್ದಾರೆ ಅಂತ ಹೇಳಲಾಗ್ತಿದೆ. ಅವಱರು ಅಂದತ ನೋಡುವುದಾದ್ರೆ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ಡಿಸಿಎಂ ಅಶ್ವತ್‌ ನಾರಾಯಣ್‌ ಮತ್ತು ಶಾಸಕ ಅರವಿಂದ್‌ ಬೆಲ್ಲದ್‌ ಕೂಡ ಸಿಎಂ ರೇಸ್‌ನಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ನಾಲ್ವರಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಭಾರೀ ಪೈಪೋಟಿ ಶುರುವಾಗಿದೆ.
ಇದನ್ನೂ ಓದಿ: 2023ರ ಚುನಾವಣೆ ಗುರಿ; ಸಿಎಂ ಬದಲಾವಣೆ ಖಚಿತ ಬೆನ್ನಲ್ಲೇ ಹೊಸ ಕ್ಯಾಬಿನೇಟ್, 5D ಪ್ಲಾನ್

The post ಜುಲೈ 21ರಂದು RSS​, ಬಿಜೆಪಿ ಸಮನ್ವಯ ಬೈಠಕ್ -ನೂತನ ಸಿಎಂ ಆಯ್ಕೆ ನಿರ್ಧಾರ ಸಾಧ್ಯತೆ appeared first on News First Kannada.

Source: newsfirstlive.com

Source link