ಒಂದು ಹತ್ತು ನಿರೀಕ್ಷಿತ ಸಿನಿಮಾಗಳು ಸೇರಿದ್ರೆ ಎಷ್ಟರ ಮಟ್ಟಕ್ಕೆ ಸದ್ದು ಆಗುತ್ತೋ ಅಷ್ಟು ಸದ್ದು ಮಾಡುತ್ತಿದೆ ಕೆಜಿಎಫ್ ಚಾಪ್ಟರ್2 ಸಿನಿಮಾ.. ಸದ್ಯಕ್ಕೆ ನಾವು ಏನು ಹೇಳೋಲ್ಲ; ಯಾಕೆಂದ್ರೆ ರಿಲೀಸ್ ಡೇಟ್ ಕನ್ಫರ್ಮ್ ಆಗಿಲ್ಲ ಅಂತ ಕೆಜಿಎಫ್ ಟೀಮ್ ಗಪ್ ಚುಪ್ ಅಂತ ಇದ್ದರು ಕೆಜಿಎಫ್ ಸುದ್ದಿಗಳಿಗೇನು ಕೊರತೆ ಇಲ್ಲ. ಈಗ ರಾಕಿ ಭಾಯ್ ಎದುರು ಗುಡುಗುವ ಅಧೀರನ ಬಗ್ಗೆ ವಿಶೇಷ ಸುದ್ದಿಯೊಂದು ಹೊರ ಬಂದಿದೆ.

ಕೆಜಿಎಫ್ ಚಾಪ್ಟರ್ 1 ಮಾಡಿರುವ ಸೆನ್ಸೇಷನ್ ಎರಡನೇ ಕೆಜಿಎಫ್​ಗಾಗಿ ಜನ ಕಾದು ಕುಳಿತಿರುವಂತೆ ಮಾಡಿದೆ. ಕನ್ನಡದ ನೆಲದಲ್ಲಿ ಕನ್ನಡಿಗರ ಕಲೆಯಲ್ಲಿ ಅರಳುತ್ತಿರೋ ಕೋಲಾರ ಗೋಲ್ಡ್ ಫಿಲ್ಡ್​​​ಗೆ ಈಗ ಭಾರಿ ಡಿಮ್ಯಾಂಡ್​​.. ಜುಲೈ 16ನೇ ತಾರೀಖ್ ಬಂದು ಬಿಡ್ತೀವಿ ಕಾಯುತ್ತಿರಿ ಎಂದು ಕೆಜಿಎಫ್ ಎರಡನೇ ಅಧ್ಯಾಯ ಸಿನಿ ಪಡೆ ಸದ್ಯಕ್ಕೆ ಗಪ್​​ ಚ್ಯುಪ್ ಆಗಿದೆ. ಕಾರಣ ರಿಲೀಸ್ ಡೇಟ್ ಇನ್ನೂ ಕೂಡ ಕನ್ಫರ್ಮ್ ಆಗಿಲ್ಲ. ಜೊತೆಗೆ ಕಟ್ಟ ಕಡೆಯ ಶೂಟಿಂಗ್ ಇನ್ನೂ ಕೂಡ ಮುಗಿದಿಲ್ಲ. ಈ ರೈಟ್​ ಟೈಮ್​​ನಲ್ಲೇ ಕೆಜಿಎಫ್ ಚಾಪ್ಟರ್ 2 ಬಗ್ಗೆ ಅದ್ರಲೂ ಸಂಜಯ್ ದತ್ತ್ ನಿರ್ವಹಿಸುತ್ತಿರೋ ಅಧೀರ ಪಾತ್ರದ ಬೆಲ್ಲದಂತ ಸಿಹಿ ಸಮಾಚಾರ ಹೊರಬಂದಿದೆ..

ಜುಲೈ 29ಕ್ಕೆ ಕೆಜಿಎಫ್​ ತಂಡದಿಂದ ಸಿಹಿ ಸುದ್ದಿ
ಸಂಜು ಬಾಬಾಗೆ ಅಧೀರನ ಹೊಸ ಉಡುಗೊರೆ

ಕೆಜಿಎಫ್ ಸಿನಿಮಾದ ಪಾತ್ರವರ್ಗಗಳಲ್ಲಿ ಸಖತ್ ನಿರೀಕ್ಷೆ ಇರೋ ಪಾತ್ರ ಸಂಜಯ್ ದತ್​ ನಿರ್ವಹಿಸಿರೋ ಅಧೀರ ಪಾತ್ರ.. ಮೊದಲನೇ ಭಾಗದಲ್ಲಿ ಕೇವಲ ಹಿಂದಿನಿಂದಲೇ ಅಧೀರ ಪಾತ್ರವನ್ನ ತೋರಿಸಿ ಕಾಡುವಂತೆ ಮಾಡಿದ್ದ ಪ್ರಶಾಂತ್ ನೀಲ್ ಪಡೆ; ಈ ಬಾರಿ ಸಂಜಯ್ ದತ್ತ್ ಅವರನ್ನ ಅಧೀರ ಪಾತ್ರವನ್ನಾಗಿಸಿ ನಿಲ್ಲಿಸಿದೆ.. ಈಗಾಲೇ ಅಧೀರನ ಒಂದು ಲುಕ್ ಸಮಸ್ತ ಚಿತ್ರಪ್ರೇಮಿಗಳಿಗೆ ಕಿಕ್ ಕೊಟ್ಟಿದೆ.. ಈಗ ಜುಲೈ 2ಸ9ನೇ ತಾರೀಖ್ ಮತ್ತೊಂದು ಉಡುಗೊರೆಯನ್ನ ಸಂಜು ಬಾಬಾ ಅಭಿಮಾನಿಗಳಿಗೆ ನಿಡಲು ಹೊರಟ್ಟಿದೆ ಹೊಂಬಾಳೆ.

ಜುಲೈ 29ನೇ ತಾರೀಖ್ ಏಕೆ ಸಂಜಯ್ ದತ್ತ್​​ಗೆ ಉಡುಗೊರೆಯನ್ನ ನೀಡ್ತಿದೆ ಕೆಜಿಎಫ್ ಸಿನಿಮಾ ಪಡೆ ಅನ್ನೋದಕ್ಕೆ ನಿರೀಕ್ಷಿತ ಉತ್ತರ ಸಂಜಯ್ ದತ್ತ್ ಅವರ ಹ್ಯಾಪಿ ಹುಟ್ಟು ಹಬ್ಬ. ಹೌದು ಬಾಲಿವುಡ್ ನ ಮುನ್ನಭಾಯ್ ಎಂಬಿಬಿಎಸ್ ಅವರ 62ನೇ ಬರ್ತ್​​​​​​​​​​​ಡೇ ಸಲುವಾಗಿ ಕೆಜಿಎಫ್ ಸಿನಿಮಾತಂಡ ವಿಶೇಷ ಲುಕ್ ಇರೋ ಉಡುಗೊರೆಯನ್ನ ನೀಡಲು ನಿರ್ಧರಿಸಿದೆ.. ಈಗಾಗಲೇ ಪೊಸ್ಟರ್ ತೆರೆ ಮರೆಯಲ್ಲೇ ಸಿದ್ಧವಾಗಿದ್ದು ಜುಲೈ 29ನೇ ತಾರೀಖ್ ಚಿತ್ರಪ್ರೇಮಿಗಳ ಮುಂದೆ ಅಧೀರನ ಹೊಸ ಲುಕ್ ಹೊರ ಬರಲಿದೆ. ಈ ಪೋಸ್ಟರ್​ನಿಂದ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಪ್ರಮೋಷನ್ ಆಕ್ಟಿವಿಟಿಯ ಸೆಕೆಂಡ್ ಇನ್ನಿಂಗ್ಸ್ ಶುರುವಾಗಲಿದೆ.

ಇದನ್ನೂ ಓದಿ: ಎಲ್ಲಾ ದಾಖಲೆಗಳೂ ಉಡೀಸ್​​​.. 20 ಕೋಟಿಗೂ ಹೆಚ್ಚು ವೀಕ್ಷಣೆ ಕಂಡ ಕೆಜಿಎಫ್ 2 ಟೀಸರ್

The post ಜುಲೈ 29ಕ್ಕೆ ಅಧೀರನಿಗೆ ಸಿಗಲಿದೆ ಸರ್ಪ್ರೈಸ್​ ಗಿಫ್ಟ್..! appeared first on News First Kannada.

Source: newsfirstlive.com

Source link