ಕಿಚ್ಚ ಸುದೀಪ್ ಅವರಿಗೆ ಜುಲೈ 6, 2001 ಮರೆಯಲಾಗದ ದಿನ. ಅದೇ ರೀತಿ ಜುಲೈ 6, 2012 ಮರೆಯಲಾದ ಮತ್ತೊಂದು ಮೈಲ್ಲುಗಲ್ಲಿನ ದಿನ.. 2001 ಜುಲೈ ಆರಕ್ಕೆ ಸುದೀಪ್ ಸ್ಯಾಂಡಲ್​ವುಡ್​​ನ ಕಟೌಟ್​​ ಆದ್ರೆ, 2012 ಜುಲೈ 6ಕ್ಕೆ ಇಂಡಿಯಾ ಕಟೌಟ್ ಆಗ್ತಾರೆ. ಈ ಎರಡು ಸಾಧನೆಗೆ ಕಾರಣವಾಗಿದ್ದು ಇದೇ ದಿನ ಅಂದ್ರೆ ಜುಲೈ 6 ರಂದು.
 
ಈ ದಿನವನ್ನ ಕಿಚ್ಚ ಮರೆಯಲು ಸಾಧ್ಯವೇ ಇಲ್ಲವೇಕೆ..?
ಜುಲೈ-6 ಕರುನಾಡ ಕಿಚ್ಚ ಹುಟ್ಟಿದ ದಿನ. ನಮ್ಮ ಈ ವಾಖ್ಯಗಳಿಂದ ಕನ್ಫ್ಯೂಸ್​ ಆಗ್ಬೇಡಿ. ಒಂದೊಳ್ಳೆ ಸಕ್ಸಸ್​​ಗಾಗಿ ಒದ್ದಾಡುತ್ತಿದ್ದ ಸುದೀಪ್ ಅವರಿಗೆ ಓಂ ಪ್ರಕಾಶ್ ನಿರ್ದೇಶನದ ಹುಚ್ಚ ಸಿನಿಮಾದಲ್ಲಿ ಕಿಚ್ಚ ಅನ್ನೋ ಪಾತ್ರ ಸಿಕ್ಕ ಕೂಡ್ಲೇ ಶುಕ್ರ ದೇಸೆ ಶುರುವಾಗಿತ್ತು. ಅದ್ಯಾವಾಗ ಅನೇಕ ಸವಾಲು ಸಂಕಷ್ಟಳನ್ನ ಮೆಟ್ಟಿ ಹುಚ್ಚ ಸಿನಿಮಾ 2001, ಜುಲೈ 6ನೇ ರಂದು ತೆರೆಕಾಣ್ತೋ ಅಲ್ಲಿಗೆ ಕನ್ನಡ ಚಿತ್ರರಂಗಕ್ಕೆ ಒಂದು ‘ಸ್ವಾತಿ ಮುತ್ತು’ ಸಿಕ್ಕಂಗೆ ಆಗಿತ್ತು..

‘ಹುಚ್ಚ’ ಸಿನಿಮಾವನ್ನ ನೋಡಿದ ವರನಟ ಡಾ.ರಾಜ್ ಕುಮಾರ್, ಸುದೀಪ್ ಅವರಿಗೆ ನೀನು ದೊಡ್ಡ ನಟನಾಗ್ತಿಯ.. ದೊಡ್ಡ ಮಟ್ಟಕ್ಕೆ ಬೇಳೆಯುತ್ತಿಯ ಅನ್ನೋ ಭವಿಷ್ಯ ನುಡಿದಿದ್ರು. ಆ ಭವಿಷ್ಯ ಹುಚ್ಚ ಸಿನಿಮಾ ತೆರೆಕಂಡು 11 ವರ್ಷಕ್ಕೆ ಮತ್ತೊಮ್ಮೆ ನಿಜವಾಯ್ತು.

ಅಭಿನಯ ಚಕ್ರವರ್ತಿ ಬಾಳಿಗೆ ರಾಜಮೌಳಿ ಅವರ ಈಗ ಎಂಟ್ರಿಕೊಟ್ಟಿತ್ತು.. ಸ್ಯಾಂಡಲ್​​ವುಡ್ ಕಟೌಟ್ ಈಗ ಚಿತ್ರದ ನಂತರ ಆಲ್​ಇಂಡಿಯಾ ಕಟೌಟ್​ ಆಗಿ ನಿಂತರು. ಈಗ ಸಿನಿಮಾದಲ್ಲಿ ಕಿಚ್ಚ ವಿಲನ್ ಪಾತ್ರ ಮಾಡಿದ್ದರು ಚಿತ್ರಪ್ರೇಮಿಗಳ ಮನಸಿನಲ್ಲಿ ಸೂಪರ್ ಹೀರೋ ಆಗಿಬಿಟ್ಟರು. ಅದ್ರಲೂ ತೆಲುಗು ಚಿತ್ರರಂಗದಲ್ಲಿ ‘‘ಸುದೀಪ್ ಗಾರು ಮಾ ಸಿನಿಮಾಲೂಂಟೆ, ಮಾ ಸಿನಿಮಾ ಸೂಪರ್ ಹಿಟ್’’ ಅನ್ನೋ ನಂಬಿಕೆ ಶುರುವಾದ್ವು.

The post ಜುಲೈ 6 ಕಿಚ್ಚ ಸುದೀಪ್​ಗೆ ತುಂಬಾನೇ ಸ್ಪೆಷಲ್; ಯಾವತ್ತೂ ಈ ದಿನ ಮರೆಯಲ್ಲ appeared first on News First Kannada.

Source: newsfirstlive.com

Source link