ಬೆಂಗಳೂರು: ರಾಜ್ಯದಿಂದ ಕೇರಳಕ್ಕೆ ಸಾರಿಗೆ ಕಾರ್ಯಾಚರಣೆ ಪುನರಾರಂಭಿಸಲು ಆದೇಶಿಸಲಾಗಿದೆ. ಇದೆ ತಿಂಗಳ 12ನೇ ತಾರೀಖಿನಿಂದ ಬೆಂಗಳೂರು, ಮೈಸೂರು, ಮಂಗಳೂರು, ಪುತ್ತೂರು ಒಳಗೊಂಡಂತೆ ರಾಜ್ಯದ ವಿವಿಧ ಸ್ಥಳಗಳಿಂದ ಕೇರಳಕ್ಕೆ ಬಸ್ ಸಂಚಾರ ಮಾಡಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಆದೇಶ ಹೊರಡಿಸಿದೆ.

ಶಿಕ್ಷಣ, ವ್ಯವಹಾರ ಇನ್ನಿತರೆ ಕಾರಣಕ್ಕೆ ನಿತ್ಯ ಪ್ರಯಾಣಿಕರು ಕೇರಳ ಹಾಗೂ ಕರ್ನಾಟಕ ನಡುವೆ ಪ್ರಯಾಣ ಮಾಡುತ್ತಾರೆ. ಕರ್ನಾಟಕ ಸರ್ಕಾರದ ಮಾರ್ಗಸೂಚಿಯಂತೆ ಕೇರಳದಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರು, 72 ಗಂಟೆಯೊಳಗೆ ಕೋವಿಡ್ ಟೆಸ್ಟ್ ಮಾಡಿಸಿ ಕೋವಿಡ್ ನೆಗೆಟಿವ್ ರಿಪೋರ್ಟ್ ಹೊಂದಿರುವುದು ಕಡ್ಡಾಯ. ಅಥಾವ ಕನಿಷ್ಠ ಒಂದು ವ್ಯಾಕ್ಸಿನ್ ಹಾಕಿಸಿರುವ ಪ್ರಮಾಣ ಪತ್ರವನ್ನ ಹೊಂದಿರಬೇಕು.

 

 

The post ಜು.12ರಿಂದ ಕೇರಳಕ್ಕೆ ರಾಜ್ಯ ಸಾರಿಗೆ ಬಸ್​ ಓಡಾಟ ಪುನರಾರಂಭ.. 2 ಕಂಡೀಷನ್ಸ್​ appeared first on News First Kannada.

Source: newsfirstlive.com

Source link