ಬೆಳಗಾವಿ: ಜಿಲ್ಲೆಯ ಅಲಾರವಾಡದಲ್ಲಿ ಕೆಲವರು ಜೂಜಾಟದಲ್ಲಿ ತೊಡಗಿದ್ದರು. ಅಂಥವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ನಡೆಸಿದ ಸಂದರ್ಭದಲ್ಲಿ ಓರ್ವ ಯುವಕ ಓಡಿ ಹೋಗಿದ್ದಾನೆ.. ನಂತರ ತೆರೆದ ಬಾವಿಯಲ್ಲಿ ಆತನ ಶವ ಪತ್ತೆಯಾಗಿದೆ.

ಬಿ.ಕೆ.ಕಂಗ್ರಾಳಿಯ ಯುವಕ ಮೃತಪಟ್ಟಿದ್ದು ಸೋಮವಾರ ಘಟನೆ ಬೆಳಕಿಗೆ ಬಂದಿದೆ. ಮೃತ ಯುವಕನನ್ನು ಬಿ.ಕೆ.ಕಂಗ್ರಾಳಿ ಪಾರ್ವತಿ ನಗರದ 27 ವರ್ಷದ ಮನೋಹರ ಭರತ ಉಂದ್ರೆ ಎಂದು ಗುರುತಿಸಲಾಗಿದೆ. ಬೆಳಗಾವಿ ತಾಲೂಕಿನ ಅಲಾರವಾಡ ಬಳಿ ಭಾನುವಾರ ಸಂಜೆ 6.30 ಗಂಟೆಗೆ ಪೊಲೀಸರು ಜೂಜಾಟ ಆಡುತ್ತಿದ್ದ ಗುಂಪಿನ ಮೇಲೆ ದಾಳಿ ನಡೆಸಿದ್ದರು. ಪೊಲೀಸರನ್ನು ಕಂಡ ಕೂಡಲೇ ಜೂಜಾಟದಲ್ಲಿ ತೊಡಗಿದ್ದವರು ಓಡಿ ಹೋಗಿದ್ದರು. ಕತ್ತಲೆ ಆವರಿಸಿದ್ದರಿಂದ ಯಾರು ಎಲ್ಲಿ ಓಡಿ ಹೋದರು ಎಂಬುದು ಗೊತ್ತಾಗಿರಲಿಲ್ಲ. ಹೀಗಾಗಿ ಯುವಕ ಬಾವಿಯಲ್ಲಿ ಬಿದ್ದ ವದಂತಿಗಳಿತ್ತು. ಇಂದು ಬೆಳಗ್ಗೆ ಅಗ್ನಿ ಶಾಮಕ ದಳ ಮತ್ತು ವಿಪತ್ತು ನಿರ್ವಹಣೆ ತಂಡದವರು ಸ್ಥಳಕ್ಕೆ ಭೇಟಿ ನೀಡಿ ಮಾಳಮಾರುತಿ ಪೊಲೀಸರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಬಾವಿಯಲ್ಲಿ ಬಿದ್ದಿದ್ದ ಯುವಕನ ಶವವನ್ನು ಹೊರಗೆ ತೆಗೆದಿದ್ದಾರೆ.

The post ಜೂಜಾಟದ ವೇಳೆ ಪೊಲೀಸ್ ದಾಳಿ: ತಪ್ಪಿಸಿಕೊಳ್ಳಲು ಓಡಿದ ಯುವಕ ಬಾವಿಗೆ ಬಿದ್ದು ಸಾವು appeared first on News First Kannada.

Source: newsfirstlive.com

Source link