ಜೂಜು ಅಡ್ಡದ ಮೇಲೆ ಪೊಲೀಸರ ದಾಳಿ- 11 ಜನರ ಬಂಧನ

– ಲಕ್ಷಾಂತರ ರೂಪಾಯಿ ಹಣ, ಬೈಕಗಳ ಜಪ್ತಿ

ಯಾದಗಿರಿ: ಹುಣಸಗಿ ಪಟ್ಟಣದ ಆಶ್ರಯ ಕಾಲೋನಿಯ ಹಿಂಭಾಗದ ಸಾರ್ವಜನಿಕ ಹಳ್ಳದ ಹತ್ತಿರ ಅಕ್ರಮವಾಗಿ ಜೂಜಾಡುತ್ತಿದ್ದ ಗುಂಪಿನ ಮೇಲೆ ದಾಳಿ ಮಾಡಿದ ಪೊಲೀಸರು, 11 ಜನ ಜೂಜುಕೋರರನ್ನು ವಶಕ್ಕೆ ಪಡೆದು, ಒಂದು ಲಕ್ಷ ಹದಿನೈದು ಸಾವಿರ ರೂಪಾಯಿ, 6 ಬೈಕ್ ಗಳನ್ನು ಜಪ್ತಿ ಮಾಡಿದ್ದಾರೆ.

ಹುಣಸಗಿ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ವಿವಿಧ ಕಡೆ ಅಕ್ರಮವಾಗಿ ಜೂಜು ಅಡ್ಡೆಗಳು ನಿರ್ಮಾಣಗೊಂಡು, ಯುವಕರನ್ನು ದಾರಿ ತಪ್ಪಿಸುವ ದಂಧೆ ನಡೆದಿತ್ತು. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆರೋಪಗಳು ಕೇಳಿಬಂದವು.

ಇಂದು ಜೂಜಾಟದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಡಿವೈಎಸ್ಪಿ ವೆಂಕಟೇಶ್ ಹೊಗಿಬಂಡಿ ನೇತೃತ್ವದಲ್ಲಿ ಅಕ್ರಮ ಜೂಜು ಅಡ್ಡೆಯ ಮೇಲೆ ದಾಳಿ ಮಾಡಿದೆ. ಈ ದಾಳಿಯಲ್ಲಿ ಸಿಪಿಐ ದೌಲತ್ ಕುರಿ, ಪಿಎಸ್‍ಐ ಬಾಪುಗೌಡ ಸಹ ಭಾಗಿಯಾಗಿದ್ದರು. ಇದನ್ನೂ ಓದಿ: ವೇಶ್ಯಾವಾಟಿಕೆ ದಂಧೆ – ಲಾಡ್ಜ್ ಮೇಲೆ ಪೊಲೀಸರ ದಾಳಿ

The post ಜೂಜು ಅಡ್ಡದ ಮೇಲೆ ಪೊಲೀಸರ ದಾಳಿ- 11 ಜನರ ಬಂಧನ appeared first on Public TV.

Source: publictv.in

Source link