ಜೂನ್‌ನಲ್ಲಿ 92,849 ಕೋಟಿ ಜಿಎಸ್‌ಟಿ ಸಂಗ್ರಹ – ಕಳೆದ 10 ತಿಂಗಳಲ್ಲಿ ಭಾರೀ ಕಡಿಮೆ

ನವದೆಹಲಿ: ಕಳೆದ 10 ತಿಂಗಳಲ್ಲಿ ಭಾರೀ ಕಡಿಮೆ ಆದಾಯ ಸಂಗ್ರಹಗೊಂಡಿದ್ದು,  ಜೂನ್‌ ತಿಂಗಳಿನಲ್ಲಿ  92,849 ಕೋಟಿ ರೂ. ಜಿಎಸ್‌ಟಿ ಆದಾಯ ಸಂಗ್ರಹವಾಗಿದೆ.

 ಜೂನ್ 5 ರಿಂದ ಜುಲೈ 5 ರವರೆಗಿನ ದೇಶೀಯ ವಹಿವಾಟಿನಿಂದಾದ ಜಿಎಸ್ ಟಿ ಸಂಗ್ರಹ ಇದಾಗಿದೆ. ಸಿಜಿಎಸ್ ಟಿ  16,424 ಕೋಟಿ ರೂ.,  ಎಸ್ ಜಿ ಎಸ್ ಟಿ 20,397 ಕೋಟಿ ರೂ.,   ಐಜಿಎ ಎಸ್ ಟಿ  49,079 ಕೋಟಿ ರೂ.  ಮತ್ತು ಸೆಸ್  6,949 ಕೋಟಿ ರೂ. ಸಂಗ್ರಹವಾಗಿದೆ.

ಕೋವಿಡ್ ಎರಡನೇ ಅಲೆಯ ಹಿನ್ನೆಲೆಯಲ್ಲಿ ಒಟ್ಟು 5 ಕೋಟಿವರೆಗೆ ವಹಿವಾಟು ಹೊಂದಿರುವ ತೆರಿಗೆ ಪಾವತಿದಾರರಿಗೆ 2021 ಜೂನ್ ತಿಂಗಳಿಗೆ ರಿಟರ್ನ್ ಫೈಲಿಂಗ್ 15 ದಿನಗಳ ಕಾಲ ವಿಳಂಬವಾದ ರಿಟರ್ನ್ ಫೈಲಿಂಗ್ ಮೇಲಿನ ಮನ್ನಾ / ಬಡ್ಡಿ ಕಡಿತದ ರೂಪದಲ್ಲಿ ತೆರಿಗೆದಾರರಿಗೆ ವಿವಿಧ ಪರಿಹಾರ ಕ್ರಮಗಳನ್ನು ನೀಡಲಾಗಿತ್ತು.

ಜೂನ್ 2021 ರ ಆದಾಯವು ಕಳೆದ ವರ್ಷ ಇದೇ ತಿಂಗಳ ಜಿಎಸ್ ಟಿ ಆದಾಯಕ್ಕಿಂತ ಪ್ರತಿಶತ 2 ರಷ್ಟು ಹೆಚ್ಚಾಗಿದೆ.

ಸತತ ಎಂಟು ತಿಂಗಳವರೆಗೆ 1 ಲಕ್ಷ ಕೋಟಿ ಗುರುತನ್ನು ದಾಟಿ, ಜೂನ್ 2021 ರಲ್ಲಿ ಸಂಗ್ರಹವು 1 ಲಕ್ಷ ಕೋಟಿ ರೂ. ಗಿಂತ ಕಡಿಮೆಯಾಗಿದೆ. ಮೇ 2021 ರಲ್ಲಿ, ಕೋವಿಡ್ ಕಾರಣದಿಂದಾಗಿ ಹೆಚ್ಚಿನ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಸಂಪೂರ್ಣ ಅಥವಾ ಭಾಗಶಃ ಲಾಕ್ ಡೌನ್ ಆಗಿದ್ದವು.

ಜೂನ್ 2021 ರಲ್ಲಿ ಉತ್ಪತ್ತಿಯಾಗುವ ಇ-ವೇ ಬಿಲ್ ಗಳು  5.5 ಕೋಟಿ ಆಗಿದ್ದು, ಇದು ವ್ಯಾಪಾರ ಮತ್ತು ವ್ಯವಹಾರದ ಚೇತರಿಕೆಯನ್ನು ಸೂಚಿಸುತ್ತದೆ. ಏಪ್ರಿಲ್ 2021 ರ ಮೊದಲ ಎರಡು ವಾರಗಳಲ್ಲಿ ದೈನಂದಿನ ಸರಾಸರಿ ಇ-ವೇ ಬಿಲ್ 20 ಲಕ್ಷವಾಗಿದ್ದು, ಇದು 2021 ರ ಏಪ್ರಿಲ್ ಕೊನೆಯ ವಾರದಲ್ಲಿ 16 ಲಕ್ಷಕ್ಕೆ ಇಳಿದಿದೆ ಮತ್ತು ಮೇ 9 ರಿಂದ 22 ರವರೆಗೆ ಎರಡು ವಾರಗಳಲ್ಲಿ 12 ಲಕ್ಷಕ್ಕೆ ಇಳಿದಿದೆ. ಅದರ ನಂತರ, ಇ-ವೇ ಬಿಲ್ ಗಳ  ಸರಾಸರಿ ಉತ್ಪಾದನೆಯು ಹೆಚ್ಚುತ್ತಿದೆ ಮತ್ತು ಜೂನ್ 20 ರಿಂದ ವಾರದಿಂದ ಮತ್ತೆ 20 ಲಕ್ಷ ಮಟ್ಟಕ್ಕೆ ತಲುಪಿದೆ. ಆದ್ದರಿಂದ, ಜೂನ್ ತಿಂಗಳಲ್ಲಿ ಜಿಎಸ್ ಟಿ ಆದಾಯವು ಕುಸಿದಿದ್ದರೆ, ಜುಲೈ 2021 ರಿಂದ ಆದಾಯವು ಮತ್ತೆ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ.

The post ಜೂನ್‌ನಲ್ಲಿ 92,849 ಕೋಟಿ ಜಿಎಸ್‌ಟಿ ಸಂಗ್ರಹ – ಕಳೆದ 10 ತಿಂಗಳಲ್ಲಿ ಭಾರೀ ಕಡಿಮೆ appeared first on Public TV.

Source: publictv.in

Source link