ಜೂನ್ ತಿಂಗಳಲ್ಲಿ ಕೊರೊನಾ 4ನೇ ಅಲೆ ಸಾಧ್ಯತೆ; ಮತ್ತೆ ಜಿನೋಮಿಕ್ ಸೀಕ್ವೆನ್ಸಿಂಗ್ ಟೆಸ್ಟಿಂಗ್ ನಡೆಸಲು ನಿರ್ಧರಿಸಿದ ಆರೋಗ್ಯ ಇಲಾಖೆ | Coronavirus 4th wave may enter india on june karnataka health department orders to start Genomic Sequencing Testing


ಜೂನ್ ತಿಂಗಳಲ್ಲಿ ಕೊರೊನಾ 4ನೇ ಅಲೆ ಸಾಧ್ಯತೆ; ಮತ್ತೆ ಜಿನೋಮಿಕ್ ಸೀಕ್ವೆನ್ಸಿಂಗ್ ಟೆಸ್ಟಿಂಗ್ ನಡೆಸಲು ನಿರ್ಧರಿಸಿದ ಆರೋಗ್ಯ ಇಲಾಖೆ

ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಜೂನ್ ತಿಂಗಳಲ್ಲಿ ಕೊರೊನಾ 4ನೇ ಅಲೆ(Corona 4th Wave) ಸಾಧ್ಯತೆ ಹಿನ್ನೆಲೆ ಮತ್ತೆ ಜಿನೋಮಿಕ್ ಸೀಕ್ವೆನ್ಸಿಂಗ್ ಟೆಸ್ಟಿಂಗ್ ನಡೆಸಲು ನಿರ್ಧಾರ ಮಾಡಲಾಗಿದ್ದು ಈ ಕುರಿತು ಆರೋಗ್ಯ ಇಲಾಖೆ(Health Department) ಸುತ್ತೋಲೆ‌ ಹೊರಡಿಸಿ‌ದೆ. ಬಿಬಿಎಂಪಿ(BBMP) ಹಾಗೂ ರಾಜ್ಯದ ಎಲ್ಲಾ ಜಿಲ್ಲಾಡಳಿತಕ್ಕೆ ಆದೇಶ ಅನ್ವಯವಾಗಲಿದೆ. ಪ್ರತಿ ನಿತ್ಯ RT-PCR ನಡೆಸಿದ 50 ಮಾದರಿಗಳನ್ನು ಜಿನೋಮಿಕ್ ಸೀಕ್ವೆನ್ಸಿಂಗ್ಗೆ ಕಳಿಸಲು ಸೂಚಿಸಲಾಗಿದೆ. ಕೊರೊನಾ ಹೊಸ ಪ್ರಭೇದ XE ಮುಂಬೈ ಹಾಗೂ ಗುಜರಾತ್ನಲ್ಲಿ ಪತ್ತೆಯಾದ ಹಿನ್ನೆಲೆ ಈ ಕ್ರಮಕ್ಕೆ ನಿರ್ಧರಿಸಲಾಗಿದೆ. ಚೀನಾ ಹಾಗೂ ಹಾಂಗ್ಕಾಂಗ್, ವಿಯಟ್ನಾಂ, ಇಟಲಿ, ಆಸ್ಟ್ರೇಲಿಯಾ ಸೇರಿ 8 ದೇಶದಿಂದ ಬರುವವರ ಮೇಲೆ ನಿಗಾ ಇಡಲು ಆರೋಗ್ಯ ಇಲಾಖೆ ಆದೇಶಿಸಿದೆ.

ನೆರೆ ರಾಜ್ಯದಲ್ಲಿ ಹೊಸ ತಳಿ XE ಪತ್ತೆ ಬೆನ್ನಲ್ಲೆ ಕರ್ನಾಟಕದಲ್ಲಿಯೂ ಹೈ ಅಲರ್ಟ್
ಕೊವಿಡ್‌ ನಾಲ್ಕನೇ ಅಲೆಯನ್ನ ತಡೆಯಲು ಜನರು ಕೈ , ಎಂದಿನಂತೆ ಮಾಸ್ಕ್‌ಗಳನ್ನು ಕಡ್ಡಾಯವಾಗಿಜೋಡಿಸಬೇಕಿದ್ದು ಹಾಕಿಕೊಳ್ಳಬೇಕು ಎಂದು ಕೊವಿಡ್‌ ತಾಂತ್ರಿಕ ಸಲಹಾ ಸಮಿತಿ ಜತೆ ಸಭೆ ಬಳಿಕ ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿಕೆ ನೀಡಿದ್ದಾರೆ. ಯಾರಿಂದಲೂ ಉದಾಸೀನ ವರ್ತನೆ ಬೇಡ. ಬೂಸ್ಟರ್ ಡೋಸ್ ಹಾಕಿಸಿಕೊಳ್ಳಲು ನಿರ್ಲಕ್ಷ್ಯಬೇಡ. ಬಾಕಿ ಇರುವವರು 2, 3ನೇ ಡೋಸ್ ಕೂಡಲೇ ಹಾಕಿಸಿಕೊಳ್ಳಿ. ದಕ್ಷಿಣ ಕೊರಿಯಾ, ಹಾಂಕಾಂಗ್, ಬ್ರಿಟನ್‌, ಜರ್ಮನಿ ಮತ್ತು ಚೀನಾ ಸೇರಿ 8 ದೇಶಗಳಿಂದ ಬರುವವರಿಗೆ ಶೀಘ್ರವೇ ಮಾರ್ಗಸೂಚಿ ಹೊರಡಿಸುತ್ತೇವೆ. ಎಂಟು ದೇಶಗಳಲ್ಲಿ ರೂಪಾಂತರಿ XE ಸೋಂಕು ಹೆಚ್ಚಾಗುತ್ತಿದೆ. ದೇಶದಲ್ಲೂ ರೂಪಾಂತರಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಕೊವಿಡ್‌ ತಾಂತ್ರಿಕ ಸಲಹಾ ಸಮಿತಿ ಜೊತೆ ಸಭೆ ಮಾಡಲಾಯಿತು. ವಿದೇಶದಿಂದ ಬಂದವರಿಗೆ ಟೆಸ್ಟಿಂಗ್ ನಡೆಸಲು ತೀರ್ಮಾನ ಮಾಡಲಾಗಿದೆ. ಮಕ್ಕಳ ಮೇಲೆ ಹೆಚ್ಚು ನಿಗಾ ಇಡುವಂತೆ ತಿಳಿಸಿದ್ದು, 5 ಸಾವಿರ ಮಕ್ಕಳಿಗೆ ಟೆಸ್ಟಿಂಗ್ ಮಾಡಲು ಸಲಹೆ ನೀಡಿದ್ದಾರೆ ಎಂದು ಹೇಳಿದರು.

ಕೊವಿಡ್ ವ್ಯಾಕ್ಸಿನ್ ಬಗ್ಗೆ ಜನರು ನಿರ್ಲಕ್ಷ್ಯ ವಹಿಸಬೇಡಿ. ಪ್ರತಿಯೊಬ್ಬರೂ ಲಸಿಕೆ ಪಡೆಯಿರಿ. 12-14 ವರ್ಷದ ಶೇ.65.6ರಷ್ಟು ಮಕ್ಕಳು ಮೊದಲ ಡೋಸ್ ಪಡೆದಿದ್ದಾರೆ. 15-17 ವರ್ಷದ ಶೇ.79ರಷ್ಟು ಮಕ್ಕಳಿಗೆ ಮೊದಲ ಡೋಸ್ ನೀಡಲಾಗಿದ್ದು, ಸೆಕೆಂಡ್ ಡೋಸ್ ವ್ಯಾಕ್ಸಿನ್ ಶೇ.64.5ರಷ್ಟು ಜನ ಪಡೆದಿದ್ದಾರೆ. 15 ವರ್ಷದವರಿಗೆ ಮೊದಲ ಡೋಸ್ ಶೇ.100.4ರಷ್ಟು ಆಗಿದೆ. 2ನೇ ಡೋಸ್ ಶೇ.95.4ರಷ್ಟು ಜನರು ಪಡೆದುಕೊಂಡಿದ್ದಾರೆ. 18 ವರ್ಷ ಮೇಲ್ಪಟ್ಟ ಶೇ.101.8ರಷ್ಟು ಜನರಿಗೆ ಫಸ್ಟ್ ಡೋಸ್ ನೀಡಲಾಗಿದೆ. ಶೇ.97.4ರಷ್ಟು ಜನರು 2ನೇ ಡೋಸ್ ವ್ಯಾಕ್ಸಿನ್ ಪಡೆದಿದ್ದಾರೆ ಎಂದು ಹೇಳಿದರು.

ಐದು ರಾಜ್ಯಗಳಲ್ಲಿ ಕೊರೋನಾ ಹೆಚ್ಚಳದ ಹಿನ್ನೆಲೆ ಕರ್ನಾಟಕದ ನೆರೆ ರಾಜ್ಯದಲ್ಲಿ ಕೊರೋನಾ ಕೇಸ್ ಹೆಚ್ಚಳವಾಗಿದೆ. ನೆರೆ ರಾಜ್ಯದಲ್ಲಿ ಹೊಸ ತಳಿ XE ಪತ್ತೆ ಬೆನ್ನಲ್ಲೆ ಕರ್ನಾಟಕದಲ್ಲಿಯೂ ಹೈ ಅಲರ್ಟ್. ಜೊತೆಗೆ ನಿನ್ನೆ ಪ್ರಧಾನಿಯಿಂದ ಕೊರೋನಾ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸಂದೇಶ ನೀಡಿದ ಬೆನ್ನಲ್ಲೆ, ಕರ್ನಾಟಕದಲ್ಲಿಯೂ ಕೊರೋನಾ ಸ್ಥಿತಿಗತಿಯ ಬಗ್ಗೆ ತಾಂತ್ರಿಕ ಸಲಹಾ ಸಮಿತಿಯ ಜೊತೆಗೆ ಸಭೆ ಮಾಡಲಾಗಿದೆ. ನಾಲ್ಕನೆ ಅಲೆಯ ಬಗ್ಗೆಯೂ ಮಾಹಿತಿ ಸಚಿವರು‌ ಪಡೆದುಕೊಂಡಿದ್ದಾರೆ. ಕರ್ನಾಟಕದಲ್ಲಿ‌ ಕಳೆದ ಒಂದು ವಾರದಲ್ಲಿ ಕೊರೋನಾ ಕೇಸ್ಗಳ ಸಂಖ್ಯೆ ನಿಧಾನ ಗತಿಯಲ್ಲಿ ಏರಿಕೆಯಾಗಿದೆ. 5 – ಏಪ್ರಿಲ್- 29, 6- ಏಪ್ರಿಲ್- 33, 7- ಏಪ್ರಿಲ್ -63, 8- ಏಪ್ರಿಲ್-_77, 9- ಏಪ್ರಿಲ್ -46, 10- ಏಪ್ರಿಲ್- 56 ಕೇಸ್ಗಳು ಹೆಚ್ಚಾಗಿವೆ.

TV9 Kannada


Leave a Reply

Your email address will not be published. Required fields are marked *