ನವದೆಹಲಿ: ದೇಶದಲ್ಲಿ ಈಗಾಗಲೇ ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಲಸಿಕೆಗಳನ್ನು ಜನರಿಗೆ ನೀಡಲಾಗ್ತಿದೆ. ಇದೀಗ ಈ ಲಸಿಕೆಗಳ ಜೊತೆಗೆ ಜೂನ್ ಎರಡನೇ ವಾರದಲ್ಲಿ ಮತ್ತೊಂದು ಲಸಿಕೆ ಸೇರಿಕೊಳ್ಳಲಿದೆ. ರಷ್ಯಾ ಅಭಿವೃದ್ಧಿಪಡಿಸಿರುವ ಸ್ಪುಟ್ನಿಕ್-ವಿ ಇದೇ ಜೂನ್ ತಿಂಗಳ ಮಧ್ಯದಲ್ಲಿ ವ್ಯಾಕ್ಸಿನೇಷನ್​ಗೆ ಲಭ್ಯವಾಗಲಿದೆ.

ಆದ್ರೆ ಅಪೊಲೋ ಆಸ್ಪತ್ರೆಗಳಲ್ಲಿ ಮಾತ್ರವೇ ಈ ಲಸಿಕೆ ಲಭ್ಯವಾಗಲಿದೆ. ಜೂನ್ ಎರಡನೇ ವಾರದಿಂದ ದೇಶಾದ್ಯಂತ ಅಪೋಲೋ ಆಸ್ಪತ್ರೆಗಳಲ್ಲಿ ಸ್ಪುಟ್ನಿಕ್ ಲಸಿಕೆ ವಿತರಣೆ ಮಾಡಲಾಗುತ್ತದೆ ಅಂತ ಅಪೋಲೋ ಗ್ರೂಪ್ ಆಫ್ ಹಾಸ್ಪಿಟಲ್ಸ್​ನ ಕಾರ್ಯನಿರ್ವಾಹಕ ಉಪಾಧ್ಯಕ್ಷೆ ಶೋಭನಾ ಕಾಮಿನೇನಿ ತಿಳಿಸಿದ್ದಾರೆ.

ಸ್ಪುಟ್ನಿಕ್-ವಿ ಲಸಿಕೆ ಪಡೆದುಕೊಳ್ಳಲು ಇಚ್ಚಿಸುವವರು ಅಪೊಲೋ ಆಸ್ಪತ್ರೆಗಳಿಗೆ ಭೇಟಿ ನೀಡಿ ಪ್ರತಿ ಡೋಸ್​​ಗೆ 995 ರೂಪಾಯಿಯಂತೆ ಖರೀದಿಸಿ ಲಸಿಕೆ ಪಡೆಯಬೇಕಾಗುತ್ತದೆ.

The post ಜೂನ್ 2ನೇ ವಾರದಿಂದ ಅಪೋಲೋ ಆಸ್ಪತ್ರೆಗಳಲ್ಲಿ ಸ್ಫುಟ್ನಿಕ್-ವಿ ಲಸಿಕೆ ವಿತರಣೆ appeared first on News First Kannada.

Source: newsfirstlive.com

Source link