ನವದೆಹಲಿ: ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ.. ಜೂನ್ 21 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ವ್ಯಾಕ್ಸಿನ್​ ಘೋಷಿಸಿದರು.

ಕೊರೊನಾದ ಎರಡನೇ ಅಲೆಯೊಂದಿಗೆ ನಮ್ಮ ಹೋರಾಟ ಮುಂದುವರೆಯುತ್ತಿದೆ. ಈ ಹೋರಾಟದಲ್ಲಿ ನಾವು ನಮ್ಮ ಸಂಬಂಧಿಕರು, ಪರಿಚಿತರನ್ನು ಕಳೆದುಕೊಂಡಿದ್ದೇವೆ.

ಕಳೆದ ಹಲವು ವರ್ಷಗಳಲ್ಲಿ ಈ ರೀತಿಯ ಮಹಾಮಾರಿಯನ್ನು ನೋಡಿರಲಿಲ್ಲ.

ಕೊರೊನಾ ಆಸ್ಪತ್ರೆ, ಐಸಿಯು, ವೆಂಟಿಲೇಟರ್, ಟೆಸ್ಟಿಂಗ್ ನೆಟ್ವರ್ಕ್ ಸೇರಿದಂತೆ ಹೊಸ ಹೆಲ್ತ್ ಮೂಲಸೌಕರ್ಯ ತಯಾರಾಗಿದೆ.

ಭಾರತದಲ್ಲಿ ಮೆಡಿಕಲ್ ಆಕ್ಸಿಜನ್​ನ ಬೇಡಿಕೆ ಇದ್ದಕ್ಕಿದ್ದಂತೆ ಏರಿಕೆಯಾಯ್ತು. ಹಿಂದೆಂದೂ ಇಂಥ ಬೇಡಿಕೆ ಸೃಷ್ಟಿಯಾಗಿರಲಿಲ್ಲ.

ಆಕ್ಸಿಜನ್ ಪೂರೈಸಲು ಆಕ್ಸಿಜನ್ ರೈಲು, ವಿಮಾನ, ಹಡಗು ಸೇರಿದಂತೆ ಎಲ್ಲ ಸಾರಿಗೆಯನ್ನ ಬಳಸಲಾಯ್ತು.

ಎಲ್ಲೆಲ್ಲಿ ಆಕ್ಸಿಜನ್ ಸಿಗ್ತಿತ್ತೋ ಅದನ್ನ ಹುಡುಕಿ ತರಲಾಯ್ತು. ಜೊತೆಗೆ ಆಕ್ಸಿಜನ್ ತಯಾರಿಕೆಯನ್ನೂ ಅಭಿವೃದ್ಧಿಪಡಿಸಿಕೊಳ್ಳಲಾಯ್ತು.

ಕೊರೊನಾದಂಥ ಅದೃಶ್ಯ ಮತ್ತು ರೂಪ ಬದಲಿಸುವ ಏಕೈಕ ಪ್ರಮುಖ ಅಸ್ತ್ರ ಕೊವಿಡ್ ಪ್ರೋಟೋಕಾಲ್.

ಈಗ ದೇಶದಾದ್ಯಂತ ವ್ಯಾಕ್ಸಿನ್​ಗೆ ಭಾರೀ ಬೇಡಿಕೆ ಇದೆ. ವ್ಯಾಕ್ಸಿನ್ ತಯಾರಿಸುತ್ತಿರುವ ದೇಶಗಳು ತುಂಬಾ ಕಡಿಮೆ ಇವೆ.

ನಮ್ಮ ದೇಶದಲ್ಲಿ ವ್ಯಾಕ್ಸಿನ್ ತಯಾರಿಸದಿದ್ದರೆ ಭಾರತದಂಥ ದೇಶವನ್ನ ರಕ್ಷಿಸುವುದು ಕಷ್ಟವಾಗ್ತಿತ್ತು.

ಮಿಷನ್ ಇಂಧ್ರಧನುಷ್​ ಲಾಂಚ್ ಮಾಡಲಾಯ್ತು. ಈ ಮೂಲಕ ದೇಶದಲ್ಲಿ ಯಾರ್ಯಾರಿಗೆ ವ್ಯಾಕ್ಸಿನ್ ನೀಡಬೇಕಿತ್ತು ಎಲ್ಲರಿಗೂ ವ್ಯಾಕ್ಸಿನ್ ನೀಡಲು ಪ್ರಾರಂಭಿಸಿದ್ವಿ.

ಜಗತ್ತಿನ ಮುಂದೆ ಮತ್ತೆ ಕೊರೊನಾ ವೈರಸ್ ಬಂತು ಈಗ ಭಾರತವನ್ನ ಕಾಪಾಡೋದು ಹೇಗೆ ಅನ್ನೋ ಚಿಂತೆ ಇತ್ತು.

ದೇಶದಲ್ಲಿ ನಮಗೆ ಕಡಿಮೆ ಸಮಯದಲ್ಲಿ ವ್ಯಾಕ್ಸಿನ್ ತಯಾರಿಸುವ ವಿಶ್ವಾಸವಿತ್ತು.

ಕಳೆದ ವರ್ಷ ಏಪ್ರಿಲ್​ನಲ್ಲಿ ಕೆಲವು ಸಾವಿರ ಕೇಸ್ ಇದ್ದಾಗಲೇ ವ್ಯಾಕ್ಸಿನ್ ಟಾಸ್ಕ್ ರಚಿಸಲಾಯ್ತು.

ಈಗ ನೇಸಲ್​ ವ್ಯಾಕ್ಸಿನ್ ಕೂಡ ತಯಾರಾಗುತ್ತಿದೆ. ಅದು ಬಂದಲ್ಲಿ ಮತ್ತಷ್ಟು ವೇಗ ಹೆಚ್ಚಲಿದೆ. ವ್ಯಾಕ್ಸಿನ್ ತಯಾರಾದ ಮೇಲೂ ಕೆಲವು ದೇಶಗಳಲ್ಲಿ ಮಾತ್ರ ವ್ಯಾಕ್ಸಿನ್ ನೀಡಲಾಗುತ್ತಿದೆ.

ಎರಡನೇ ಅಲೆಗೂ ಮುನ್ನ ಆರೋಗ್ಯ ಸಿಬ್ಬಂದಿಗೆ ವ್ಯಾಕ್ಸಿನ್ ನೀಡದಿದ್ದರೆ ಏನಾಗುತ್ತಿತ್ತು..?

ರಾಜ್ಯಗಳ ಬಳಿ ವ್ಯಾಕ್ಸಿನೇಷನ್​ಗೆ 50 ಪರ್ಸೆಂಟ್​ ವ್ಯಾಕ್ಸಿನ್ ನೀಡುವುದನ್ನು ಅಂತಾರಾಷ್ಟ್ರೀಯ ಯೋಗ ದಿನದಂದು

The post ಜೂನ್ 21 ರಿಂದ 18 ಮೇಲ್ಪಟ್ಟ ಎಲ್ಲರಿಗೂ ಉಚಿತ ವ್ಯಾಕ್ಸಿನ್​ ಘೋಷಿಸಿದ ಮೋದಿ appeared first on News First Kannada.

Source: newsfirstlive.com

Source link