ಜೂನ್ 14ರಂದೇ ರಾಜ್ಯದಲ್ಲಿ ಲಾಕ್​​ಡೌನ್ ಕಂಪ್ಲೀಟ್ ತೆರವಾಗುತ್ತಾ? ಅನ್ನೋ ಪ್ರಶ್ನೆ ಶುರುವಾಗಿದೆ. ಅನ್​ಲಾಕ್​​ಗೆ ಸಂಬಂಧಿಸಿದಂತೆ ಈಗಾಗಲೇ ಸುಳಿವು ನೀಡಲಾಗಿದೆ. ಆದರೆ ಒಮ್ಮೆಲೆ ಎಲ್ಲಾ ಚಟುವಟಿಕೆಗಳಿಗೆ ಅನುಮತಿ ಕೊಟ್ಟು ಬಿಟ್ಟರೆ ದಿಢೀರ್ ಅಂತ ಎಲ್ಲಾ ಓಪನ್ ಆದ್ರೆ ಮತ್ತೆ ಕೊರೊನಾ ಹೆಚ್ಚಾಗಲ್ವಾ ಅನ್ನೋ ಆತಂಕವೂ ಇದ್ದೇ ಇದೆ. ಹಾಗಾದ್ರೆ ಕರ್ನಾಟಕದಲ್ಲಿ ಯಾವ ರೀತಿ ಅನ್​ಲಾಕ್ ಪ್ರಕ್ರಿಯೆಯನ್ನು ಮಾಡಲಾಗುತ್ತೆ ಅನ್ನೋ ಪ್ರಶ್ನೆ ಕೂಡ ಶುರುವಾಗಿದೆ.

ಬೆಂಗಳೂರಿನಲ್ಲಿ ಹೊಸ ಕೇಸ್​ಗಳ ಸಂಖ್ಯೆ ಗಣನೀಯ ಇಳಿಕೆ
ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಇನ್ನೂ ಬರ್ತಿವೆ ಅತೀ ಹೆಚ್ಚು ಕೇಸ್

ಬೆಂಗಳೂರಿನ ಜನಸಂಖ್ಯೆ ಮತ್ತು ಟೆಸ್ಟಿಂಗ್ ಪ್ರಮಾಣ ನೋಡಿದ್ರೆ ಬೆಂಗಳೂರಿನಲ್ಲಿ ಹೊಸ ಕೇಸ್​ಗಳ ಸಂಖ್ಯೆ ಸಾಕಷ್ಟು ಕಡಿಮೆ ಆಗಿದೆ. ಎರಡು ಸಾವಿರದ ಆಸು ಪಾಸಿನಲ್ಲಿ ಹೊಸ ಕೇಸ್​ಗಳು ದಾಖಲಾಗ್ತಾ ಇವೆ. ಬಹುಶಃ ಇದು ಮುಂದಿನ ಒಂದು ವಾರದಲ್ಲಿ 500ಕ್ಕಿಂತಲೂ ಕಡಿಮೆ ಆಗಬಹುದು. ಹೀಗಾಗಿ ಜೂನ್ 14ರ ಹೊತ್ತಿಗೆ ಬೆಂಗಳೂರು ಹೆಚ್ಚು ಕಡಿಮೆ ಎರಡನೇ ಅಲೆಯಿಂದ ಪಾರಾಗಬಹುದು ಅಂತಾನೇ ಲೆಕ್ಕಾಚಾರ ಹಾಕಲಾಗ್ತಾ ಇದೆ. ಇಷ್ಟು ಪ್ರಮಾಣದಲ್ಲಿ ಬೆಂಗಳೂರಿನಲ್ಲಿ ಸೋಂಕು ಇಳಿಮುಖವಾಗಲು ಕಾರಣ ಲಾಕ್ ಡೌನ್.

ಬೆಂಗಳೂರಿನಲ್ಲಿದ್ದವರು ಕೂಡ ಎಲ್ಲೂ ಓಡಾಡದೇ ಇರೋದ್ರಿಂದ, ಎಲ್ಲಾ ಚಟುವಟಿಕೆಗಳು ಬಂದ್ ಆಗಿರೋದ್ರಿಂದ, ಹೊರಗಡೆಯಿಂದ ಬರ್ತಿರೋರು ಕೂಡ ಕಡಿಮೆ ಆಗ್ತಾ ಇರೋದ್ರಿಂದ ಬೆಂಗಳೂರು ಸೇಫ್ ಆಗುತ್ತಿದೆ. ಮಹಾನಗರದಲ್ಲಿ ಹರಡುವಿಕೆ ಪ್ರಮಾಣವೂ ತಗ್ಗಿದೆ. ಹೀಗಾಗಿ ಜೂನ್ 14 ರ ಬಳಿಕ ಮತ್ತೆ ಬೆಂಗಳೂರಲ್ಲಿ ಲಾಕ್​ಡೌನ್ ಮುಂದುವರೆಸುವುದಿಲ್ಲ ಅನ್ನೋದೇ ಈಗಿರುವ ಅಭಿಪ್ರಾಯ. ಬೆಂಗಳೂರು ಮಹಾನಗರವನ್ನು ಒಮ್ಮೆಲೆ ಓಪನ್ ಮಾಡಿ ಬಿಟ್ಟರೆ ಮತ್ತೆ ಕೊರೊನಾ ಹೆಚ್ಚಲು ಕಾರಣವಾಗಬಹುದು ಅನ್ನುವ ಆತಂಕವೂ ಇದ್ದೇ ಇದೆ. ಹೀಗಾಗಿ ಯಾವ ಮಾದರಿ ಅನುಸರಿಸುತ್ತೆ ಸರ್ಕಾರ ಅನ್ನೋದೇ ಈಗ ಮುಖ್ಯ ಪ್ರಶ್ನೆಯಾಗಿದೆ.

ಎಲ್ಲಾ ಕಡೆ ಶೇಕಡಾ 50ರಷ್ಟು ಚಟುವಟಿಕೆಗೆ ಮಾತ್ರ ಅವಕಾಶಾನಾ?
ಥಿಯೇಟರ್, ಮಾಲ್, ಕ್ಲಬ್, ಪಬ್ ಶೇಕಡಾ 50ಕ್ಕೆ ಸೀಮಿತಾನಾ?

ಬೆಂಗಳೂರಿನಲ್ಲಿ ಹಾಲಿ ಬರ್ತಾ ಇರುವ ಹೊಸ ಕೇಸ್ ಮತ್ತು ಈಗಿರುವ ಸಕ್ರಿಯ ಪ್ರಕರಣಗಳನ್ನು ಗಮನಿಸಿದ್ರೆ ಜೂನ್ 14ರವೇಳೆಗೆ ಹೆಚ್ಚು ಕಡಿಮೆ ಮಹಾನಗರ ಓಪನ್ ಆಗುತ್ತೆ. ಮತ್ತೆ ಲಾಕ್​ಡೌನ್ ಮುಂದುವರೆಸಲ್ಲ. 1 ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿದ್ದರೂ ನಿತ್ಯ ಎರಡು ಸಾವಿರದ ಆಸು ಪಾಸು ಬರ್ತಿರುವ ಕೇಸ್ ಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಸಕ್ರಿಯ ಪ್ರಕರಣಗಳು ಕೂಡ ಗಣನೀಯವಾಗಿ ಇಳಿಯಬಹುದು. ಹೀಗಾಗಿ ಬೆಂಗಳೂರಲ್ಲಿ ಅನ್​​ಲಾಕ್ ಪ್ರಕ್ರಿಯೆ ಶುರುವಾಗುತ್ತೆ. ಆದ್ರೆ ಪೂರ್ಣ ಪ್ರಮಾಣದಲ್ಲಿ ಒಮ್ಮೆಲೆ ಎಲ್ಲಾ ಚಟುವಟಿಕೆಗಳು ಆರಂಭವಾಗಲ್ಲ. ಮುಂಬೈ ಮತ್ತು ದೆಹಲಿಯಲ್ಲಿ ಅನುಮತಿ ಕೊಟ್ಟ ಹಾಗೆ ಬಹುಶಃ ಶೇಕಡಾ 50ರಷ್ಟು ಚಟುವಟಿಕೆಗಳಿಗೆ ಮಾತ್ರ ಅವಕಾಶ ಕೊಡಬಹುದು. ಪಬ್, ಮಾಲ್, ಥಿಯೇಟರ್​ಗಳಲ್ಲಿ ಶೇಕಡಾ 50ರಷ್ಟು ಭರ್ತಿಗೆ ಮಾತ್ರ ಅನುಮತಿ ಕೊಡಬಹುದು. ರಾಜ್ಯ ಸರ್ಕಾರದ ಮಟ್ಟದಲ್ಲಿ ಈ ವಿಚಾರ ಚರ್ಚೆಯಾಗ್ತಾ ಇದೆ. ಇನ್ನು ಬೆಂಗಳೂರಿನಲ್ಲಿ ಜೂನ್ 14ರ ಬಳಿಕ ಮೆಟ್ರೋ ಸಂಚಾರ ಬಹುತೇಕ ಆರಂಭವಾಗಲಿದೆ.

ಮೆಟ್ರೋದಲ್ಲೂ ಶೇಕಡಾ 50ರಷ್ಟು ಅವಕಾಶ ಕೊಡಬಹುದಾದ ಸಾಧ್ಯತೆ ಇದೆ. ಆದ್ರೆ ಈ ಬಗ್ಗೆ ತಜ್ಞರ ಅಭಿಪ್ರಾಯ ಆಧರಿಸಿಯೇ ತೀರ್ಮಾನ ಕೈಗೊಳ್ಳುತ್ತಾರೆ. ಇನ್ನುಳಿದಂತೆ ಕೈಗಾರಿಕೆಗಳಿಗೆ ಹಂಡ್ರೇಡ್ ಪರ್ಸೆಂಟ್ ಅನುಮತಿ ಕೊಡವುದು ನಿಶ್ಚಿತವಾಗಿದೆ. ಕಳೆದ ಒಂದೂವರೆ ತಿಂಗಳಿನಿಂದ ಹೆಚ್ಚು ಕಡಿಮೆ ಕೈಗಾರಿಕಾ ಚಟುವಟಿಕೆಗಳು ಸ್ಥಗಿತಗೊಂಡು ತೀವ್ರ ನಷ್ಟ ಅನುಭವಿಸಿವೆ. ಹೀಗಾಗಿ ಕೊರೊನಾ ಕಂಟ್ರೋಲ್ ಗೈಡ್ ಲೈನ್ಸ್ ಅನ್ವಯ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲು ಅನುಮತಿ ಕೊಡುವ ಸಾಧ್ಯತೆ ದಟ್ಟವಾಗಿದೆ. ಇನ್ನು ಜೂನ್ 14ರ ಬಳಿಕ ಬಿಎಂಟಿಸಿ ಬಸ್​ಗಳ ಸಂಚಾರವೂ ಆರಂಭವಾಗಲಿದ್ದು ಅಲ್ಲಿಯೂ ಶೇಕಡಾ 50 ರಷ್ಟು ಮಾತ್ರ ಆಸನ ಭರ್ತಿಗೆ ಅವಕಾಶ ಕೊಡಬಹುದು.

ಲಾಕ್ ಕೌನ್ ತೆರವು ಬಳಿಕ ಎದುರಾಗುವ ಸವಾಲುಗಳೇನು?
ಬೆಂಗಳೂರಿನಲ್ಲಿ ಜನಸಂದಣಿ ನಿಯಂತ್ರಿಸೋದಾದ್ರೂ ಹೇಗೆ?

ಹಾಲಿ ಇರುವ ನಿಯಮದಂತೆ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳನ್ನು ಕೊಳ್ಳಲು ಅವಕಾಶ ಕೊಟ್ಟಾಗಲೇ ಜನ ಹೆಚ್ಚು ಸೇರುತ್ತಾರೆ. ಮಾರ್ಕೆಟ್​​ನಲ್ಲಿ ಸಾಮಾಜಿಕ ಅಂತರ ಕಾಪಾಡೋದೇ ಕಷ್ಟ. ಆದರೆ ಇತ್ತೀಚಿಗೆ ಮತ್ತಷ್ಟು ಕಟ್ಟು ನಿಟ್ಟಾಗಿ ನಿಯಮ ಪಾಲಿಸಲಾಗ್ತಾ ಇರೋದ್ರಿಂದ ಇದು ಸ್ವಲ್ಪ ಕಂಟ್ರೋಲ್ ಆಗಿದೆ. ಆದ್ರೆ ಲಾಕ್​​ಡೌನ್ ತೆರವು ಮಾಡಿದ ಮೇಲೆ ಬೆಂಗಳೂರಿನಲ್ಲಿ ಜನ ಸಂದಣಿ ನಿಯಂತ್ರಿಸೋದೇ ದೊಡ್ಡ ಸವಾಲು. ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ಮಾರುಕಟ್ಟೆಗಳಲ್ಲಿ ಜನ ಸಾಗರವೇ ನೆರೆದರೆ ಮುಂದೆ ಮತ್ತೆ ಕೊರೊನಾ ಕಂಟ್ರೋಲ್ ಮಾಡೋದು ಕಷ್ಟವಾಗಬಹುದು. ಹೀಗಾಗಿ ಲಾಕ್ ಡೌನ್ ತೆರವಾದ ಮೇಲೆ ಒಂದಿಷ್ಟು ದಿನ ಕಟ್ಟು ನಿಟ್ಟಿನ ನಿಯಮ ಅಳವಡಿಸಿಕೊಳ್ಳಲೇಬೇಕು ಅಂತಿದಾರೆ ತಜ್ಞರು.

ಬೆಂಗಳೂರಿನಲ್ಲಿ ಕೊರೊನಾ ತಗ್ಗಿದ್ರು ಜಿಲ್ಲೆಗಳಲ್ಲಿ ಕಡಿಮೆ ಆಗಿಲ್ಲ
ಲಾಕ್ ಓಪನ್ ಮಾಡಿದ್ರೆ ಜಿಲ್ಲೆಯಿಂದ ಬೆಂಗಳೂರಿಗೆ ಕೊರೊನಾ!

ಬೆಂಗಳೂರಿನ ಜನಸಂಖ್ಯೆಗೆ ಹೋಲಿಸಿದ್ರೆ ಇಲ್ಲಿ ಕೊರೊನಾ ಸಾಕಷ್ಟು ಕಂಟ್ರೋಲ್​​ಗೆ ಬಂದಿದೆ ಅಂತಾನೇ ಹೇಳಬಹುದು. ಮುಂದಿನ ಒಂದು ವಾರಗಳಲ್ಲಿ ಇದು ಇನ್ನಷ್ಟು ತಗ್ಗಬಹುದು. ಆದ್ರೆ ಜಿಲ್ಲೆಗಳಲ್ಲಿ ಕೊರೊನಾ ಆರ್ಭಟ ತಗ್ಗಲು ಇನ್ನಷ್ಟು ದಿನಗಳು ಬೇಕೇ ಬೇಕು. ಕೆಲವು ಜಿಲ್ಲೆಗಳಲ್ಲಿ ನಿತ್ಯ ಅತಿ ಹೆಚ್ಚಿನ ಹೊಸ ಕೇಸ್ ಗಳು ದಾಖಲಾಗ್ತಾ ಇವೆ. ಹೀಗಿದ್ದಾಗ ಲಾಕ್ ಡೌನ್ ಓಪನ್ ಮಾಡಿದ್ರೆ ಜಿಲ್ಲೆ ಮತ್ತು ಬೆಂಗಳೂರಿನ ನಡುವೆ ಸಂಚಾರ ಆರಂಭವಾಗುತ್ತದೆ. ಆಗ ಮತ್ತೆ ಜಿಲ್ಲೆಗಳಲ್ಲೂ ಮತ್ತು ಬೆಂಗಳೂರು ನಗರದಲ್ಲೂ ಸೋಂಕು ಏರುಗತಿ ಕಾಣಬಹುದು. ಕಡಿಮೆ ಆಯ್ತು ಅಂದುಕೊಳ್ಳುವಷ್ಟರಲ್ಲಿ ಮತ್ತೆ ಏರುಮುಖ ಕಾಣಬಹುದು. ಹೀಗಾಗಿ ಜಿಲ್ಲೆಗಳಲ್ಲೂ ನಿತ್ಯ ಬರುವ ಹೊಸ ಕೇಸ್ ಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡು ಬರದ ಹೊರತು ಲಾಕ್ ಡೌನ್ ಓಪನ್ ಮಾಡೋದು ಸರಿಯಲ್ಲ ಅನ್ನೋದು ಹಲವರು ಅಭಿಪ್ರಾಯ.

ಮಹಾರಾಷ್ಟ್ರದಂತೆ ಒಂದಿಷ್ಟು ಜಿಲ್ಲೆಗಳಲ್ಲಿ ಲಾಕ್ ಕಂಟಿನ್ಯೂ?
ಜೂನ್ 14ರ ಬಳಿಕವೂ ಕೆಲವು ಜಿಲ್ಲೆಗಳಲ್ಲಿ ನಿರ್ಬಂಧ ಅಗತ್ಯ

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಇನ್ನೂ ಅತಿ ಹೆಚ್ಚಿನ ಕೇಸ್​ಗಳು ನಿತ್ಯವೂ ದಾಖಲಾಗ್ತಾ ಇದ್ದಾವೆ. ಮೈಸೂರು, ತುಮಕೂರು, ಬೆಳಗಾವಿ, ಕೋಲಾರ, ಹಾಸನ, ದಕ್ಷಿಣ ಕನ್ನಡ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ 500ಕ್ಕೂ ಹೆಚ್ಚಿನ ಕೇಸ್ ಗಳು ಪ್ರತಿನಿತ್ಯ ದಾಖಲಾಗುತ್ತಿವೆ. ಹೀಗಾಗಿ ಆ ಜಿಲ್ಲೆಗಳಲ್ಲಿ ಲಾಕ್​ಡೌನ್ ತೆರವು ಮಾಡಿದರೆ ಪಟ್ಟಣ ಪ್ರದೇಶಗಳಲ್ಲಿ ಮತ್ತೆ ಸಮಸ್ಯೆ ಉದ್ಭವಿಸಬಹುದು. ಪಟ್ಟಣ ಮತ್ತು ಹಳ್ಳಿಗಳ ನಡುವೆ ಜನರ ಓಡಾಟ ಹೆಚ್ಚಾದಾರೆ ಮತ್ತೆ ಗ್ರಾಮಂತರ ಪ್ರದೇಶಗಳಿಗೂ ಮತ್ತೆ ಸೋಂಕು ಪುನಃ ಹರಡಲು ಶುರುವಾಗಬಹುದು.

ಹೀಗಾಗಿ ಒಂದು ಜಿಲ್ಲೆಯನ್ನು ಲಾಕ್ ಮಾಡಿ ಪಕ್ಕದ ಜಿಲ್ಲೆಯನ್ನು ಓಪನ್ ಮಾಡಿದ್ರೆ ಇದರಿಂದ ಎಷ್ಟರ ಮಟ್ಟಿಗೆ ಪ್ರಯೋಜನವಾಗುತ್ತೆ ಅನ್ನೋದು ಕೂಡ ಯೋಚಿಸಬೇಕಾದ ವಿಚಾರ. ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಹೋಗುವವರನ್ನು ತಡೆಯುವುದು ಕಷ್ಟ. ಹೀಗಾಗಿ ಮಹಾರಾಷ್ಟ್ರದಂತೆ ಒಂದಿಷ್ಟು ಜಿಲ್ಲೆಗಳನ್ನು ಇನ್ನು ಕೆಲವು ದಿನ ಕಂಪ್ಲೀಟ್ ಆಗಿ ಲಾಕ್ ಮಾಡುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.

The post ಜೂ.14ರ ಬಳಿಕ ರಾಜ್ಯದಲ್ಲಿ ಅನ್​ಲಾಕ್​? ಹೇಗಿರುತ್ತೆ ಲಾಕ್​ಡೌನ್ ಸಡಿಲಿಕೆ..? appeared first on News First Kannada.

Source: newsfirstlive.com

Source link