ಜೆಡಿಎಸ್ ಮುಖಂಡ ಆನಂದ ಅಸ್ನೋಟಿಕರ್ ಮನೆಗೆ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಭೇಟಿ
ಉತ್ತರ ಕನ್ನಡ: ಮಾಜಿ ಸಚಿವ, ಜೆಡಿಎಸ್ ಮುಖಂಡ ಆನಂದ ಅಸ್ನೋಟಿಕರ್ ಅವರ ಮನೆಗೆ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಇಂದು ಭೇಟಿ ನೀಡಿದ್ದರು. ಅನಾರೋಗ್ಯಕ್ಕೊಳಗಾಗಿರುವ ಅಸ್ನೋಟಿಕರ್ ತಾಯಿ ಶುಭಲತಾ ಅಸ್ನೋಟಿಕರ್ ಆರೋಗ್ಯ ವಿಚಾರಿಸಿದ ಅನಂತ್ ಕುಮಾರ್ ಹೆಗಡೆ ಅವರು ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಪಾದ್ರಿ ಭಾಗದಲ್ಲಿ ಆನಂದ್ ಅಸ್ನೋಟಿಕರ್ ಮನೆಗೆ ತೆರಳಿದ್ದರು.
ಶುಭಲತಾ ಅಸ್ನೋಟಿಕರ್ ಮಾಜಿ ವಿಧಾನ ಪರಿಷತ್ ಸದಸ್ಯೆ ಸಹ ಆಗಿದ್ದಾರೆ. ಶುಭಲತಾ ಅಸ್ನೋಟಿಕರ್ ಕಿಡ್ನಿ ವೈಫಲ್ಯದಿಂದ ಅನಾರೋಗ್ಯಕ್ಕೊಳಗಾಗಿದ್ದಾರೆ. ಅನಂತ್ ಕುಮಾರ್ ಹೆಗಡೆ ಹಾಗೂ ಆನಂದ್ ಅಸ್ನೋಟಿಕರ್ ಅವರಿಬ್ಬರೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಪರಸ್ಪರ ಎದುರಾಳಿಯಾಗಿದ್ದರು. ಪರಸ್ಪರ ಹೇಳಿಕೆ ಕೊಡುವ ಮೂಲಕ ಬದ್ಧವೈರಿಗಳಂತೆ ಇದ್ದ ಈ ಇಬ್ಬರೂ ನಾಯಕರ ಭೇಟಿ, ಜಿಲ್ಲೆಯಲ್ಲಿ ತೀವ್ರ ಕುತೂಹಲ ಮೂಡಿಸಿದೆ.
Puneeth Rajkumar : ಪುನೀತ್ ರಾಜ್ಕುಮಾರ್ ಹೆಸ್ರಲ್ಲಿ ಸಾಮಾಜಿಕ ಕಾರ್ಯ ಮಾಡ್ತೀವಿ|Tv9kannada
(BJP MP Anantkumar hegde visits JDS leader Anand Asnotikar house at karwar)