ದರ್ಶನ್ ರವಾನಿಸ್ತಾರಾ ‘ಸಂದೇಶ’?
ನಟ ದರ್ಶನ್ ವಿರುದ್ಧ ನಿರ್ದೇಶಕ ಇಂದ್ರಜಿತ್​ ಲಂಕೇಶ್ ಮಾಡಿರೋ ಆರೋಪ ನಿನ್ನೆಯೇ ಕಿಡಿ ಹೊತ್ತಿಸಿತ್ತು. ಇದರ ಎರಡನೇ ಅಧ್ಯಾಯ ಇಂದು ತೆರೆದುಕೊಳ್ಳೋ ಸಾಧ್ಯತೆ ಇದೆ. ಯಾಕಂದ್ರೆ ದರ್ಶನ್​ ಇವತ್ತು ಈ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಲಿದ್ದು ಬಳಿಕ ದರ್ಶನ್ ಸುದ್ದಿಗೋಷ್ಠಿ ನಡೆಸೋ ಸಾಧ್ಯತೆ ಇದೆ.​

ಇಂದ್ರಜಿತ್ ಲಂಕೇಶ್ ನಿವಾಸಕ್ಕೆ ಬಿಗಿ ಭದ್ರತೆ
ನಟ ದರ್ಶನ್ ಸಂದೇಶ್ ಹೋಟೆಲ್ ಸಪ್ಲೈಯರ್ ಮೇಲೆ ಹಲ್ಲೆ ಮಾಡಿದ್ದಾರೆ ಅಂತಾ ಆರೋಪ ಮಾಡಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್​ ನಿವಾಸಕ್ಕೆ ಪೊಲೀಸ್​ ಭದ್ರತೆ ಕಲ್ಪಿಸಲಾಗಿದೆ. ಯಾವುದೇ ಅಹಿತರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಭದ್ರತೆ ನೀಡಿಲಾಗಿದೆ. ಬೆಂಗಳೂರಿನ ಕೋರಮಂಗಲದ ಇಂದ್ರಜಿತ್ ಅವರ ನಿವಾಸದ ಬಳಿ ಪೊಲೀಸ್​ ಸಿಬ್ಬಂದಿ ನಿಯೋಜಿಸಲಾಗಿದೆ.

ಬಿಎಸ್​ವೈ ದೆಹಲಿ ಪ್ರವಾ​ಸದತ್ತ ಚಿತ್ತ
ಹೈಕಮಾಂಡ್​ ಬುಲಾವ್​ ಹಿನ್ನೆಲೆ, ಸಿಎಂ ಬಿ.ಎಸ್​ ಯಡಿಯೂರಪ್ಪ ಇಂದು ದೆಹಲಿಗೆ ತೆರಳಲಿದ್ದಾರೆ. ಹೈಕಮಾಂಡ್​ ಭೇಟಿಯ ನಂತರ ದೆಹಲಿಯಲ್ಲಿ ವಾಸ್ತವ್ಯ ಹೂಡಲಿರುವ ಬಿಎಸ್​ವೈ, ನಾಡಿದ್ದು ಸಂಜೆ ಅಥವಾ ಭಾನುವಾರ ಬೆಂಗಳೂರಿಗೆ ವಾಪಾಸ್ಸಾಗಲಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ಸೇರಿದಂತೆ ಹಲವು ನಾಯಕರನ್ನ ಭೇಟಿಯಾಗೋದಕ್ಕೆ ಪ್ಲಾನ್​ ಕೂಡ ಹಾಕಿಕೊಂಡಿದ್ದಾರೆ. ಖುದ್ದು ಹೈಕಮಾಂಡ್​ ಬಿಎಸ್​ವೈರನ್ನ ದೆಹಲಿಗೆ ಕರೆಸಿಕೊಳ್ತಿರೋದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಇಂದು ಡಿ.ಕೆ.ಶಿವಕುಮಾರ್ ಸಿದ್ದರಾಮಯ್ಯ ಸಮಾಗಮ
ಕಾಂಗ್ರೆಸ್​ನಲ್ಲಿ ಮುಂದಿನ ಮುಖ್ಯಮಂತ್ರಿ ವಿವಾದದ ಬೆನ್ನಲ್ಲೇ ಇದೀಗ ಉಭಯ ನಾಯಕರ ಸಮಾಗಮಕ್ಕೆ ವೇದಿಕೆ ಸಿದ್ಧಗೊಂಡಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ತಮ್ಮ ಮನೆಗೆ ಬರಲು ಆಹ್ವಾನಿಸಿದ್ದಾರೆ. ಸಭೆಯ ಅಜೆಂಡಾ ಪ್ರಕಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆ ಹಾಗೂ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆ ನಡೆಯಲಿದೆ ಎನ್ನಲಾಗಿದೆ. ಅಲ್ಲದೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಇಬ್ಬರು ಪದಾಧಿಕಾರಿಗಳ ಪಟ್ಟಿ ಸೇರಿದಂತೆ ಕಗ್ಗಂಟಾಗಿರೋ ಹಲವು ವಿಚಾರಗಳ ಬಗ್ಗೆಯೂ ಚರ್ಚೆ ನಡೆಸುವ ಸಾಧ್ಯತೆ ಇದೆ.

ಗಡಿಯಲ್ಲಿ ಚೀನಾದ ಶಾಶ್ವತ ಕಾಂಕ್ರೀಟ್​ ಕ್ಯಾಂಪ್
ಭಾರತದೊಂದಿಗೆ ಗಡಿ ಭಾಗದಲ್ಲಿ ಚೀನಾದ ಕಿರಿಕ್​ ಬೂದಿ ಮುಚ್ಚಿರೋ ಕೆಂಡದಂತಿರುವಾಗಲೇ ಚೀನಾ ತನ್ನ ಕುತಂತ್ರದ ಅಧ್ಯಾಯವನ್ನ ಮುಂದುವರಿಸಿದೆ. ಸಿಕ್ಕಿಂನ ನಾಕುಲಾ ಪ್ರದೇಶಕ್ಕಿಂತ ಕೆಲವೇ ಕಿಲೋ ಮೀಟರ್​ ದೂರದಲ್ಲಿ ಶಾಶ್ವತ ಕಾಂಕ್ರೀಟ್​ ಕ್ಯಾಂಪ್​ಗಳನ್ನ ನಿರ್ಮಿಸುತ್ತಿದೆ. ವಾಸ್ತವಿಕ ನಿಯಂತ್ರಣ ರೇಖೆಯ ಬಳಿ ಕಾಂಕ್ರೀಟ್ ಕ್ಯಾಂಪ್​​ಗಳನ್ನ ನಿರ್ಮಿಸೋಕೆ ಮುಂದಾಗಿದೆ. ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಮಾತನಾಡಿದ್ದು, ಕಳೆದ ಬಾರಿ ಸಂಘರ್ಷ ಉಂಟಾಗಿದ್ದ ಜಾಗಕ್ಕಿಂತ ಕೆಲವೇ ಸಮಯಗಳ ದೂರದಲ್ಲಿದೆ ಅಂತಾ ತಿಳಿಸಿದ್ದಾರೆ.

‘ಲ್ಯಾಬ್​ಗಳಲ್ಲಿ ಸೋರಿಕೆ ಸಾಮಾನ್ಯ’
ಕೊರೊನಾ ವೈರಸ್​ ಮೂಲ ಯಾವುದು ಅನ್ನೋ ಚರ್ಚೆಗೆ ಬಹುತೇಕರ ಬಳಿ ಇರೋ ಉತ್ತರ ಒಂದೇ ಚೀನಾದ ಲ್ಯಾಬ್​ನಿಂದ ಸೋರಿಕೆಯಾಗಿದ್ದು ಅನ್ನೋದು. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಮಾತನಾಡಿದ್ದು, ಇಂತಹ ಸೋರಿಕೆ ಸಾಮಾನ್ಯ ಅಂತಾ ಕರೆದಿದ್ದಾರೆ. ನಾನು ಕೂಡ ಟೆಕ್ನಿಶೀಯನ್ ಆಗಿದ್ದು, ಲ್ಯಾಬ್​ಗಳಲ್ಲಿ ಕೆಲಸ ಮಾಡಿದ್ದೇನೆ. ಹೀಗಾಗಿ ಲ್ಯಾಬ್​ಗಳಲ್ಲಿ ಸೋರಿಕೆ ಸಾಮಾನ್ಯ. ಆದ್ರೆ ಚೀನಾ ಈ ವಿಚಾರದಲ್ಲಿ ಇನ್ನಷ್ಟು ಪಾರದರ್ಶಕವಾಗಿದೆ. ಕೊರೊನಾದ ಮೂಲದ ಬಗ್ಗೆ ಪತ್ತೆ ಹಚ್ಚಲು ಚೀನಾ ಇನ್ನಷ್ಟು ಹೆಚ್ಚಿನ ಸಹಕಾರ ನೀಡಬೇಕು ಅಂತಾ ಅಭಿಪ್ರಾಯಪಟ್ಟಿದ್ದಾರೆ.

9ನೇ ಮಹಡಿಯಿಂದ ಬಿದ್ದರೂ ಬದುಕುಳಿದ ಮಹಿಳೆ
ಬಹುಮಹಡಿ ಕಟ್ಟಡದ 9ನೇ ಅಂತಸ್ತಿನ ಬಾಲ್ಕನಿಯಿಂದ ಬಿದ್ದ ಮಹಿಳೆಯೊಬ್ಬರು, ಅದೃಷ್ಟವಶಾತ್​ ಪ್ರಾಣಾಪಯದಿಂದ ಪಾರಾಗಿರುವ ಘಟನೆ ಉತ್ತರ ಪ್ರದೇಶದ ಘಾಜಿಯಬಾದ್​ ನಗರದಲ್ಲಿ ನಡೆದಿದೆ. ಮಹಿಳೆಯೊಬ್ಬರು ತನ್ನೊಂದಿಗೆ ಇದ್ದ ವ್ಯಕ್ತಿಯೊಂದಿಗೆ ಜಗಳವಾಡಿದ ಕಾರಣ ಕೋಪದಿಂದ ಬಾಲ್ಕನಿಯಿಂದ ಹಾರಿದ್ದಾಳೆ. ಮಹಿಳೆ ನೆಲಕ್ಕೆ ಉರುಳುತ್ತಿದ್ದಂತೆ ಅಪಾರ್ಟ್​​ಮೆಂಟ್​ ನಿವಾಸಿಗಳು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು, ಸದ್ಯ ಆಕೆಗೆ ಯಾವುದೇ ಗಂಭೀರ ಗಾಯವಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಜೇಡ ಕೊಲ್ಲಲು ಅಮೆಜಾನ್​ಗೆ ಆರ್ಡರ್!
ನೀವು ಯಾವುದೇ ಫುಡ್​ ಡೆಲವರಿ ಮಾಡುವಾಗ, ಅದಕ್ಕೆ ಸಂಬಂಧಪಟ್ಟಂತೆ ಡಿಸ್ಕ್ರಿಪ್ಶನ್​ ಸೌಲಭ್ಯ ನೀಡಲಾಗಿರುತ್ತೆ, ನೀವಿರೋ ಸ್ಥಳ ಗುರುತು ಹಚ್ಚಲು ಡೆಲವರಿ ಬಾಯ್​ಗೆ ಇದರ ಮೂಲಕ ಸಲಹೆ ನೀಡಬಹುದು. ಆದ​ರೆ ಟೆಕ್ಸಾಸ್​ನ ಗ್ವೇನ್ ಎಂಬ ಮಹಿಳೆಯೊಬ್ಬಾಕೆ ಈ ಡಿಸ್ಕ್ರಿಪ್ಶನ್​ನಲ್ಲಿ ಮನೆಯ ಬಾಗಿಲಿನಲ್ಲಿ ವಾಸಿಸುತ್ತಿದ್ದ ಜೇಡವನ್ನ ಸಾಯಿಸಬೇಕೆಂದು ಬರೆದಿದ್ದರು. ಜೇಡವಿರುವ ಕಾರಣಕ್ಕೆ ಗ್ವೇನ್ಹೊರ ಹೋಗಲು ಹೆದರಿದ್ದಾಳೆ. ಹೀಗಾಗಿ ಫುಡ್ ಆರ್ಡರ್​ ಮಾಡಿ, ದಯವಿಟ್ಟು, ಆ ಜೇಡವನ್ನ ಸಾಯಿಸಿ ಅಂತಾ ಡಿಸ್ಕ್ರಿಪ್ಶನ್​ನಲ್ಲಿ ಉಲ್ಲೇಖಿಸಿದ್ದಾಳೆ. ಆಶ್ಚರ್ಯವೆಂದರೆ, ಡೆಲವರಿ ಬಾಯ್​ ಕೂಡ ಇದಕ್ಕೆ ಒಪ್ಪಿ ಜೇಡವನ್ನ ಕೊಂದಿದ್ದಾನೆ.

ಡೈನೋಸಾರ್​ನಂತೆ ವೇಷ ಧರಿಸಿ ಲಸಿಕೆ ಪಡೆದ
ವ್ಯಕ್ತಿಯೊಬ್ಬ ಡೈನೋಸಾರ್​ನಂತೆ ವೇಷ ಧರಿಸಿ ಕೋವಿಡ್ ಲಸಿಕೆ ಹಾಕಿಸಿಕೊಂಡಿರುವ ಘಟನೆ ಮಲೇಷ್ಯಾದಲ್ಲಿ ನಡೆದಿದೆ. ಮಲೇಷ್ಯಾದ ಕೆನ್ನಿ ಸಿಯಾ ಎಂಬ ವ್ಯಕ್ತಿ ಲಸಿಕೆ ಪಡೆಯಲು ಡೈನೊಸಾರ್​ದಂತೆ ವೇಷ ಧರಿಸಿ ಬಂದಿದ್ದಾನೆ. ಅಲ್ಲದೆ ಈ ವ್ಯಕ್ತಿ ಈ ರೀತಿ ವೇಷ ಧರಿಸಿ ಲಸಕೆ ಕೇಂದ್ರಕ್ಕೆ ಬಂದು ಲಸಿಕೆ ಹಾಕಿಸಿಕೊಂಡ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಇನ್ನು ಈ ವಿಡಿಯೋವನ್ನ, ಡೈನೊಸರ್​ ಕೂಡ ಕೋವಿಡ್ ಲಸಿಕೆ ಪಡೆದಿದೆ ಅನ್ನೋ ಶ್ರೀರ್ಷಿಕೆಯಡಿ ಸಾಮಾಜಿಕ ಜಾಲಾತಾಣದಲ್ಲಿ ಬಿ.ಸಿ.ಸಿ.ಕೆ ಎಂಬ ಪೇಜ್​ವೊಂದು ಹಂಚಿಕೊಂಡಿದೆ.

ಟೋಕಿಯೊ ಒಲಂಪಿಕ್ಸ್​ಗೆ ಮಾರ್ಗಸೂಚಿ
ಟೋಕಿಯೊ ಒಲಂಪಿಕ್ಸ್​ನಲ್ಲಿ ಭಾಗಬಹಿಸುವವರಿಗೆ ಕೋವಿಡ್ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಈ ಮಾರ್ಗಸೂಚಿಗಳ ಬಿಡುಗಡೆ ಮಾಡಲಾಗಿದ್ದು, ಯಾರೂ ಕೂಡಾ ಪದಕ ವಿತರಣೆ ವೇಳೆ ಗುಂಪು ಗುಂಪಾಗಿ ಫೋಟೋ ತೆಗೆಸಿಕೊಳ್ಳಬಾರದು, ಪೋಡಿಯಂನ ಬಳಿ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕೆಂದು ಸೂಚನೆ ನೀಡಿದೆ. ಇನ್ನು, ಗೆದ್ದ ಕ್ರೀಡಾಪಡುಗಳು ತಮ್ಮ ಕೊರಳಿಗೆ ತಾವೇ ಮೆಡಲ್​ ಹಾಕಿಕೊಳ್ಳಬೇಕಿದೆ ಅಂತಾ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಸೂಚಿಸಿದೆ.

The post ಜೇಡ ಕೊಲ್ಲಲು ಅಮೇಜಾನ್​ಗೆ ಲೇಡಿ ಆರ್ಡರ್ -ಟಾಪ್ 10 ಸುದ್ದಿಗಳ ಕ್ವಿಕ್​ರೌಂಡಪ್ appeared first on News First Kannada.

Source: newsfirstlive.com

Source link