ಪುನೀತ್
James Shooting Video: ಪುನೀತ್ ರಾಜ್ಕುಮಾರ್ಗೆ (Puneeth Rajkumar) ಸ್ಯಾಂಡಲ್ವುಡ್ನಲ್ಲಿ (Sandalwood) ತುಂಬಾನೇ ಬೇಡಿಕೆ ಇತ್ತು. ಅವರು ಏಕಾಏಕಿ ನಿಧನ ಹೊಂದುತ್ತಾರೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಅವರು ಮೃತಪಟ್ಟಿದ್ದು ಸ್ಯಾಂಡಲ್ವುಡ್ ಪಾಲಿಗೆ ದೊಡ್ಡ ನಷ್ಟ. ಪುನೀತ್ ಒಪ್ಪಿಕೊಂಡಿದ್ದ ಹಲವು ಪ್ರಾಜೆಕ್ಟ್ಗಳು ಅರ್ಧಕ್ಕೆ ನಿಂತಿವೆ. ಅವರು ಅಭಿನಯಿಸುತ್ತಿದ್ದ ‘ಜೇಮ್ಸ್’ ಸಿನಿಮಾ (James Movie) ಹೆಚ್ಚು ನಿರೀಕ್ಷೆ ಮೂಡಿಸಿತ್ತು. ನಿರ್ದೇಶಕ ಚೇತನ್ ಕುಮಾರ್ (Chetan Kumar) ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದ ಕೆಲಸಗಳು ಪೂರ್ಣಗೊಳ್ಳುವುದಕ್ಕೂ ಮುನ್ನವೇ ಪುನೀತ್ ರಾಜ್ಕುಮಾರ್ ಇಹಲೋಕ ತ್ಯಜಿಸಿದ್ದರು. ಆದಾಗ್ಯೂ, ಜೇಮ್ಸ್ ಸಿನಿಮಾ ರಿಲೀಸ್ ಆಗುತ್ತಿದೆ. ಪುನೀತ್ ಜನ್ಮದಿನದ ಅಂಗವಾಗಿ ಮಾರ್ಚ್ 27ರಂದು ಸಿನಿಮಾ ತೆರೆಗೆ ಬರಲಿದೆ ಎನ್ನಲಾಗಿದೆ. ಅದಕ್ಕೂ ಮೊದಲು ವಿಡಿಯೋ ಒಂದು ವೈರಲ್ ಆಗಿದೆ.
ಚೇತನ್ ಕುಮಾರ್ ಸಿನಿಮಾದಲ್ಲಿ ಸಾಕಷ್ಟು ಆ್ಯಕ್ಷನ್ ದೃಶ್ಯಗಳಿರುತ್ತವೆ. ಸಿನಿಮಾದಲ್ಲಿ ಅದ್ದೂರಿತನ ಇರುತ್ತದೆ. ‘ಜೇಮ್ಸ್’ನಲ್ಲೂ ಅದು ಮುಂದುವರಿಯಲಿದೆ ಎನ್ನಲಾಗುತ್ತಿದೆ. ಅದಕ್ಕೂ ಮೊದಲು ಸಿನಿಮಾದ ಮೇಕಿಂಗ್ ವಿಡಿಯೋ ಒಂದು ವೈರಲ್ ಆಗಿದೆ. ಪುನೀತ್ ಅವರು ಫಾಲ್ಸ್ ಬಳಿ ನಿಂತಿದ್ದಾರೆ. ಈ ವೇಳೆ ಡ್ರೋನ್ನಲ್ಲಿ ವಿಡಿಯೋ ಶೂಟ್ ಮಾಡಲಾಗಿದೆ. ಜೇಮ್ಸ್ ಚಿತ್ರೀಕರಣದ ವೇಳೆ ತೆಗೆದ ವಿಡಿಯೋ ಇದಾಗಿದ್ದು, ಈಗ ವೈರಲ್ ಆಗುತ್ತಿದೆ. ಇದನ್ನು ನೋಡಿದ ಫ್ಯಾನ್ಸ್ ‘ಮಿಸ್ ಯೂ ಅಪ್ಪು’ ಎಂದಿದ್ದಾರೆ.
‘ಜೇಮ್ಸ್ ಚಿತ್ರಕ್ಕೆ ಬಹುತೇಕ ಶೂಟಿಂಗ್ ಮುಕ್ತಾಯ ಆಗಿತ್ತು. ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇತ್ತು. ಸಾಂಗ್ ಶೂಟಿಂಗ್ ಮಾಡಲು ನ.8ರಿಂದ ಪುನೀತ್ ರಾಜ್ಕುಮಾರ್ ಅವರು ಡೇಟ್ಸ್ ನೀಡಿದ್ದರು. ಅವರ ಪಾತ್ರದ ಡಬ್ಬಿಂಗ್ ಅರ್ಧ ಬಾಕಿ ಉಳಿದಿದೆ. ಈ ಸಿನಿಮಾ ಖಂಡಿತ ರಿಲೀಸ್ ಆಗಲಿದೆ’ ಎಂದು ಚೇತನ್ ಕುಮಾರ್ ಈ ಮೊದಲು ಹೇಳಿದ್ದರು.
ಪುನೀತ್ ಅವರ ಇನ್ನುಳಿದ ಭಾಗದ ದೃಶ್ಯಗಳಿಗೆ ಸಹೋದರ ಶಿವರಾಜ್ಕುಮಾರ್ ಧ್ವನಿ ನೀಡುವ ಸಾಧ್ಯತೆ ಇದೆ. ಶಿವಣ್ಣ ಧ್ವನಿ ನೀಡಿದರೆ ಡಬ್ಬಿಂಗ್ ಕೆಲಸ ಪೂರ್ಣಗೊಳ್ಳಲಿದೆ. ಆಗ ಸಿನಿಮಾ ಬಿಡುಗಡೆ ಮಾಡಬಹುದು. ಈ ಬಗ್ಗೆ ಶಿವರಾಜ್ಕುಮಾರ್ ಅವರು ಪಾಸಿಟಿವ್ ಆಗಿ ಮಾತನಾಡಿದ್ದರು. ‘ಈವರೆಗೂ ನನ್ನ ಬಳಿ ಆ ರೀತಿಯ ಯಾವುದೇ ಪ್ರಸ್ತಾಪ ಬಂದಿಲ್ಲ. ಒಂದು ವೇಳೆ ಬಂದರೆ ಖಂಡಿತ ಮಾಡುವುದರಲ್ಲಿ ತಪ್ಪಿಲ್ಲ. ನನ್ನ ತಮ್ಮನಿಗೆ ವಾಯ್ಸ್ ಕೊಡಲು ನನಗೆ ನಿಜವಾಗಿಯೂ ಹೆಮ್ಮೆ ಎನಿಸುತ್ತದೆ’ ಎಂದು ಶಿವರಾಜ್ಕುಮಾರ್ ಹೇಳಿದ್ದರು.
ಇದನ್ನೂ ಓದಿ: ‘ಪುನೀತ್ ಅಂತಿಮ ದರ್ಶನ ಪಡೆದೆನೋ, ಇಲ್ಲವೋ ಎಂಬುದು ಅವರ ಕುಟುಂಬಕ್ಕೆ ತಿಳಿದಿದೆ’; ಟೀಕಾಕಾರರಿಗೆ ರಾಧಿಕಾ ಪಂಡಿತ್ ತಿರುಗೇಟು
Khushbu: ಬೆಂಗಳೂರಿಗೆ ಆಗಮಿಸಿ ಅಶ್ವಿನಿ ಪುನೀತ್ ರಾಜ್ಕುಮಾರ್ಗೆ ಸಾಂತ್ವನ ಹೇಳಿದ ಖುಷ್ಬೂ