ಸುಮ್ ಸುಮ್ನೇ ಪುನೀತ್ ರಾಜ್ ಕುಮಾರ್ ಅವರಿಗೆ ಪವರ್ ಸ್ಟಾರ್ ಅನ್ನೋ ಪಟ್ಟ ಬಂದಿಲ್ಲ. ಅಷ್ಟು ಸುಲಭವಾಗಿ ಸೂಪರ್ ಸ್ಟಾರ್ ರಜಿನಿಕಾಂತ್ ಅಪ್ಪು ಅವರನ್ನ ಸಿಂಹದ ಮರಿ ಅಂತ ಕರೆದಿಲ್ಲ. ಸ್ಯಾಂಡಲ್​ವುಡ್​​ನಲ್ಲಿ ಆ್ಯಕ್ಷನು, ಡ್ಯಾನ್ಸು ಈ ಎರಡಕ್ಕೂ ಅಪ್ಪು ಅವ್ರೇ ಅಣ್ಣಬಾಂಡ್​​. ಮುಂಬರುವ ಜೇಮ್ಸ್​ ಸಿನಿಮಾದಲ್ಲಿ ಪಕ್ಕಾ ಮಾಸ್ ಪ್ರಿಯರಿಗೆ ಭರ್ಜರಿ ಬಾಡೂಟ ರೆಡಿಯಾಗ್ತಿದೆ. ಹಾಗಾದ್ರೆ ಜೇಮ್ಸ್​ ಸಿನಿಮಾದಲ್ಲಿ ಅಡಗಿರೋ ಆ್ಯಕ್ಷನ್ ಸಿಕ್ವೇನ್ಸ್ಗಳ ಗುಟ್ಟೇನು ಹೇಳ್ತೀವಿ..

ಚಿಕ್ಕ ವಯಸ್ಸಿನಲ್ಲೇ ಅತ್ಯುತ್ತಮ ಬಾಲ ನಟ ರಾಷ್ಟ್ರ ಪ್ರಶಸ್ತಿಯನ್ನ ಪಡೆದ ಭಾಗ್ಯವಂತ ಪ್ರತಿಭೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್​. ಮಸ್ತ್ ಡ್ಯಾನ್ಸು, ಜಬರ್​ದಸ್ತ್ ಫೈಟ್ಸ್​​ಗಳಿಗೆ ಪುನೀತ್ ರಾಜ್ ಕುಮಾರ್ ಅವರಿಗೆ ಪುನೀತ್ ರಾಜ್ ಕುಮಾರ್ ಅವ್ರೇ ಸರಿಸಾಟಿ. ಸಿನಿಮಾದಿಂದ ಸಿನಿಮಾಕ್ಕೆ ತಮ್ಮ ಅದ್ಭುತ ಡ್ಯಾನ್ಸ್ ಮತ್ತು ಮೈ ಜುಮ್ ಅನ್ನಿಸೋ ಫೈಟ್ಸ್ ಗಳನ್ನ ಮಾಡುತ್ತಾ ತಮ್ಮ ದಾಖಲೆಗಳನ್ನ ತಾವೇ ಮುರಿಯುತ್ತಾ 30 ಸಿನಿಮಾಗಳನ್ನ ಮುಗಿಸಿ 31ನೇ ಸಿನಿಮಾಕ್ಕೆ ಸಜ್ಜಾಗಿದ್ದಾರೆ ದೊಡ್ಮನೆ ಹುಡ್ಗ ಪುನೀತ್ ರಾಜ್ ಕುಮಾರ್​​.

ಕಳೆದ ವಾರ ಪುನೀತ್ ರಾಜ್ ಕುಮಾರ್ ಅವರ 31ನೇ ಸಿನಿಮಾದ ಟೈಟಲ್ ಪೋಸ್ಟರ್ ರಿವೀಲ್ ಆಯ್ತು. ಬಹುದ್ದೂರ್ ಖ್ಯಾತಿಯ ಚೇತನ್ ಕುಮಾರ್ ಸಾರಥ್ಯದಲ್ಲಿ ಜೇಮ್ಸ್ ಸಿನಿಮಾ ಮೂಡಿಬರುತ್ತಿದೆ. ಫಸ್ಟ್ ಲುಕ್ ಟೀಸರ್​​​ನಿಂದ ಈಗಾಗಲೇ ಪವರ್ ಫ್ಯಾನ್ಸ್​ಗಳ ಚಿತ್ತವನ್ನ ತನ್ನತ್ತ ಸೆಳೆದರೆ, 2ನೇ ಲಾಕ್ ಡೌನ್ ನಂತರ ಶೂಟಿಂಗ್​ಗೆ ಸಜ್ಜಾಗಿರೋ ಜೇಮ್ಸ್ ಚಿತ್ರತಂಡ ಜುಲೈ 5ನೇ ತಾರೀಖ್ ಸೋಮವಾರದಿಂದ ಶೂಟಿಂಗ್ ಅಡ್ಡಕ್ಕೆ ಇಳಿಯಲಿದೆ. ಅದೂ ಫೈಟಿಂಗ್ ಸಿಕ್ವೇನ್ಸ್ , ಅದ್ರಲೂ ಮೈ ಜುಮ್ ಅನ್ನಿಸೋ ಚೇಸಿಂಗ್ ದೃಶ್ಯಗಳನ್ನ ಸೇರೆ ಹಿಡಿಯಲು ಜೇಮ್ಸ್ ಬಳಗ ಫೈಟ್ ಮಾಸ್ಟರ್ಸ್ ರಾಮ್ ಲಕ್ಷ್ಮಣ್ ಸಾರಥ್ಯದಲ್ಲಿ ಸಜ್ಜಾಗಿದೆ.

ಈಗಾಗಲೇ 70 ಪರ್ಸೆಂಟ್ ಶೂಟಿಂಗ್ ಮುಗಿಸಿರೋ ಜೇಮ್ಸ್ ಬಳಗ ಸೆಪ್ಟೆಂಬರ್ ತಪ್ಪಿದೆ ಅಕ್ಟೋಬರ್ ತಿಂಗಳು ಪ್ರೇಕ್ಷಕ ಮುಂದೆ ಬರೋ ಗುರಿಯಲ್ಲಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪವರ್ ಫುಲ್ ಫ್ಯಾನ್ಸ್​​​ಗಳಿಗೆ ಜೇಮ್ಸ್​​​​ ಸಿನಿಮಾ ಪಕ್ಕಾ ಮಾಸ್ ಆಂಡ್ ಕ್ಲಾಸ್ ರಂಜನೆಯಾಗೋ ಸಾಧ್ಯತೆ ಇದೆ. ಕನ್ನಡದ ಜೊತೆಗೆ ತೆಲುಗು ಭಾಷೆಯಲ್ಲಿಯೂ ಜೇಮ್ಸ್ ಸಿನಿಮಾ ತೆರೆಕಂಡರೆ ಅಚ್ಚರಿ ಪಡುವ ಹಾಗಿಲ್ಲ.

The post ‘ಜೇಮ್ಸ್’ ಚಿತ್ರದಲ್ಲಿ ಇರಲಿವೆ 7 ಜಬರ್​​​ದಸ್ತ್​​​​​​​ ಫೈಟ್ಸ್ -ಸೌಥ್ ಇಂಡಿಯಾದ ಸ್ಟಾರ್​​​​ ಫೈಟ್​ ಮಾಸ್ಟರ್ಸ್ ಸಾರಥ್ಯ appeared first on News First Kannada.

Source: newsfirstlive.com

Source link