ಜೈಲನ್ನೇ ಅಡ್ಡೆಗಳನ್ನಾಗಿಸಿಕೊಂಡಿದ್ದ ರೌಡಿಶೀಟರ್ಸ್.. ಶಾಕ್ ಕೊಡಲು ಮುಂದಾದ ಕಮಲ್ ಪಂತ್

ಜೈಲನ್ನೇ ಅಡ್ಡೆಗಳನ್ನಾಗಿಸಿಕೊಂಡಿದ್ದ ರೌಡಿಶೀಟರ್ಸ್.. ಶಾಕ್ ಕೊಡಲು ಮುಂದಾದ ಕಮಲ್ ಪಂತ್

ಬೆಂಗಳೂರು: ಇತ್ತೀಚೆಗೆ ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದರು.. ಈ ವೇಳೆ ಜೈಲಿನಲ್ಲಿ ಸಣ್ಣ ಚಾಕು, ಮೊಬೈಲ್​ಗಳು ಪತ್ತೆಯಾಗಿದ್ದವು.. ರೌಡಿ ಶೀಟರ್​​ಗಳು ಜೈಲಿನಲ್ಲೇ ಕೂತು ಸ್ಕೆಚ್ ಹಾಕ್ತಿದ್ದಾರೆ ಎನ್ನಲಾಗಿತ್ತು.

ಈ ಹಿನ್ನೆಲೆ ಜೈಲಿನಲ್ಲಿರುವ ಅಧಿಕಾರಿಗಳಿಗೆ ಶಾಕ್ ನೀಡಲು ಪೊಲೀಸ್ ಆಯುಕ್ತ ಕಮಲ್​ಪಂತ್ ಮುಂದಾಗಿದ್ದಾರೆ. ಬಂದೀಖಾನೆ ಇಲಾಖೆ ಎಡಿಜಿಪಿ ಅಲೋಕ್ ಮೋಹನ್ ಜೊತೆ ಚರ್ಚೆ ನಡೆಸಿರುವ ಕಮಲ್ ಪಂತ್.. ಜೈಲಿನಲ್ಲಿರುವ ಒಂದೇ ಗ್ಯಾಂಗ್ ನ ಆರೋಪಿಗಳನ್ನ ಪ್ರತ್ಯೇಕ ಬ್ಯಾರಕ್​ಗಳಲ್ಲಿ ಇಡಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ನಟೋರಿಯಸ್ ರೌಡಿಶೀಟರ್​ಗಳನ್ನ ಬೇರೆ ಜೈಲಿಗೆ ಸ್ಥಳಾಂತರಿಸುವ ಸಾಧ್ಯತೆ ಇದ್ದು ಜೈಲಿನದ್ದುಕೊಂಡೇ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುತ್ತಿರುವ ರೌಡಿಶೀಟರ್​ಗಳ ಮೇಲೆ ಹದ್ದಿನ ಕಣ್ಣಿಡಲು ಮುಂದಾಗಿದ್ದಾರಂತೆ. ಆ ಮೂಲಕ ನಗರದಲ್ಲಿ ಕ್ರೈಂ ರೇಟ್ ಕಡಿಮೆ ಮಾಡಲು ಪೊಲೀಸ್ ಕಮಿಷನರ್ ಪ್ಲಾನ್ ಮಾಡಿದ್ದಾರೆ ಎಂಬ ಮಾಹಿತಿ ಇದೆ.

The post ಜೈಲನ್ನೇ ಅಡ್ಡೆಗಳನ್ನಾಗಿಸಿಕೊಂಡಿದ್ದ ರೌಡಿಶೀಟರ್ಸ್.. ಶಾಕ್ ಕೊಡಲು ಮುಂದಾದ ಕಮಲ್ ಪಂತ್ appeared first on News First Kannada.

Source: newsfirstlive.com

Source link